`ಅಂಬುಜ’ ಕಾಶಿನಾಥ್ ಕೈ ಹಿಡೀತಾಳಾ?: ಇಲ್ಲಿದೆ `ಅಂಬುಜ’ ಅನ್ನದಾತನ ಅಂತರಾಳ

Public TV
4 Min Read
Ambuja 4

ನ್ನಡ ಚಿತ್ರರಂಗ ಕಂಡ ಅಪರೂಪದ ನಟ ಮತ್ತು ನಿರ್ದೇಶಕ ಕಾಶೀನಾಥ್ ಅವರ ಬಗ್ಗೆ ನಿಮಗೆಲ್ಲ ಗೊತ್ತೆಯಿದೆ. ಇದೀಗ ಅದೇ ಹೆಸರಿನ ನಿರ್ಮಾಪಕರೊಬ್ಬರು ಗಂಧದಗುಡಿ ಪ್ರವೇಶ ಮಾಡಿದ್ದಾರೆ. ಅಂಬುಜ ಹೆಸರಿನ ಚಿತ್ರಕ್ಕೆ ಕಥೆ ಬರೆದು, ಸಾಹಿತ್ಯ ರಚಿಸುವುದರ ಜೊತೆಗೆ ಬಂಡವಾಳ ಸುರಿದಿದ್ದಾರೆ. ಅಪರಿಚಿತ, ಅನುಭವ, ಅನಂತನ ಅವಾಂತರ ಸೇರಿದಂತೆ ಅ ಅಕ್ಷರದಿಂದ ಶುರುವಾಗುವ ಸಿನಿಮಾಗಳು ನಟ, ನಿರ್ದೇಶಕ ಕಾಶಿನಾಥ್ ಅವ್ರನ್ನ ಕೈ ಹಿಡಿದಿದ್ವು. ಅದರಂತೆ, ಅ ಅಕ್ಷರದ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿರುವ ಕಾಶಿನಾಥ್ ಡಿ ಮಡಿವಾಳರ್ ಅವ್ರನ್ನ ಅಂಬುಜ (Ambuja) ಚಿತ್ರ ಕೈ ಹಿಡಿಯುತ್ತಾ? ಅನ್ನದಾತನಿಗೆ ಈ ಚಿತ್ರ ವರವಾಗುತ್ತಾ? ಹೀಗೊಂದು ಕುತೂಹಲದ ಪ್ರಶ್ನೆ ಕೆಲವರಲ್ಲಿ ಮೂಡಿದೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ (Kashinath Madiwalar) ತಮ್ಮ ಅಂತರಾಳ ಬಿಚ್ಚಿಟ್ಟಿದ್ದಾರೆ.

Ambuja 1 1

ಅಂಬುಜ ನನ್ನ ನಿರ್ಮಾಣದ ಮೊದಲ ಚಿತ್ರ. ಬಿಜಾಪುರ ಮೂಲದ ತಾಳಿಕೋಟೆ ನಮ್ಮ ನೆಲೆಮೂಲ. ಬಾಲ್ಯದಿಂದಲೂ ಸಿನಿಮಾ ಹಾಗೂ ಸಾಹಿತ್ಯದಲ್ಲಿ ಆಸಕ್ತಿಯಿತ್ತು. ಬಿಡುವಿದ್ದಾಗಲೆಲ್ಲಾ ಬರವಣಿಗೆಯಲ್ಲಿ ತೊಡಗಿಸಿಕೊಳ್ತಿದ್ದೆ. ಆದರೆ, ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ನಿರತನಾಗಿದ್ದರಿಂದ ಸಿನಿಮಾಲೋಕಕ್ಕೆ ಎಂಟ್ರಿಕೊಡಲಿಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೂ ಕಾಲ ಕೂಡಿಬಂದಿದ್ದು ನಾನು ಕೆತ್ತಿದ ಕಥೆ ಶಿಲೆಯಾಗಿ ಬೆಳ್ಳಿಭೂಮಿ ಮೇಲೆ ಮೆರವಣಿಗೆ ಹೊರಟಿದೆ. ಇದೊಂದು ನೈಜ ಘಟನೆಯಾಧರಿತ ಚಿತ್ರ. ಹಿಂದೆಂದೂ ಕೂಡ ನೀವು ಇಂತಹದ್ದೊಂದು ಕಥೆಯುಳ್ಳ ಸಿನಿಮಾವನ್ನ ಬಿಗ್ಸ್ಕ್ರೀನ್ ಮೇಲೆ ನೋಡಿರಲಿಕ್ಕೆ ಸಾಧ್ಯವಿಲ್ಲ. ಫಾರ್ ದಿ ಫಸ್ಟ್ ಟೈಮ್ ನಾನೇ ಈ ಅನ್ಟೋಲ್ಡ್ ಕ್ರೈಮ್ ಸ್ಟೋರಿಯನ್ನ ಕರುನಾಡ ಜನತೆಗೆ ತಿಳಿಸಲಿಕ್ಕೆ ಹೊರಟಿದ್ದೇನೆ. ಲವ್ವು, ಸೆಂಟಿಮೆಂಟ್, ಹಾರರ್, ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಪ್ಲಸ್ ಕಾಮಿಡಿ ಎಲಿಮೆಂಟ್ಸ್ ಚಿತ್ರದಲ್ಲಿದ್ದು, ನಿರ್ದೇಶಕ ಶ್ರೀನಿ ಹನುಮಂತರಾಜು ಅದ್ಭುತವಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ. ಶುಭ ಪೂಂಜಾ (Shubha Poonja), ರಜಿನಿ (Rajini), ಆಕಾಂಕ್ಷ, ಗೋವಿಂದೇಗೌಡ, ದೀಪಕ್ ಸುಬ್ರಹ್ಮಣ್ಯ, ಪದ್ಮಜರಾವ್, ಶರಣಯ್ಯ, ಜಗದೀಶ್ ಹಲ್ಕುಡೆ, ನಿಶಾಹೆಗ್ಡೆ, ಗುರುದೇವ ನಾಗರಾಜ್, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ.

Ambuja 2 1

ಇತ್ತೀಚಿಗಿನ ದಿನಗಳಲ್ಲಿ ಜನ ಥಿಯೇಟರ್ ಗೆ ಬರೋದು ಕಡಿಮೆಯಾಗಿದೆ. ಅದಕ್ಕೆ ಕಾರಣ ನೂರೆಂಟು ಇರಬಹುದು ಆದರೆ ಸಿನಿಮಾಪ್ರೇಮಿಗಳು ದೊಡ್ಡಮನಸ್ಸು ಮಾಡಿ ಚಿತ್ರಮಂದಿರಕ್ಕೆ ಬರಬೇಕು. ಒಂದೇ ಒಂದು ಭಾರಿ ಪಿಕ್ಚರ್ ಟಾಕೀಸ್ಗೆ ಬಂದು ಸಿನಿಮಾ ನೋಡಿದರೆ, ಗ್ಯಾರಂಟಿ ನಮ್ಮ `ಅಂಬುಜ’ ಚಿತ್ರ ಅವರಿಗೆ ಇಷ್ಟವಾಗುತ್ತೆ. ಅದಕ್ಕೆ ನಾನು ಶ್ಯೂರಿಟಿ ಕೊಡ್ತೀನಿ ಎನ್ನುತ್ತಾರೆ ನಿರ್ಮಾಪಕರು. ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸ ಆಗಲ್ಲ. ಮನರಂಜನೆಗೆ ನಮ್ಮ ಚಿತ್ರದಲ್ಲಿ ಬರ ಇಲ್ಲ. ಎಂಟರ್ ಟೈನ್ಮೆಂಟ್ ಜೊತೆಗೆ ಸಂದೇಶ ಕೂಡ ಅಡಗಿದ್ದು, ನಮ್ಮ ಸುತ್ತಮುತ್ತ ಈ ರೀತಿಯ ಘಟನೆಗಳು ನಡೆಯುತ್ತಿದೆಯಾ ಅಂತ ಪ್ರೇಕ್ಷಕರು ಬೆಚ್ಚಿಬೀಳೋದು, ದಿಗ್ದಿಗ್ಭ್ರಾಂತಗೊಳ್ಳೋದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ ಎನ್ನುತ್ತಾರೆ ನಿರ್ಮಾಪಕ ಕಾಶಿನಾಥ್. ಇದನ್ನೂ ಓದಿ:ಕೊನೆಗೂ ಮದುವೆ ಬಗ್ಗೆ ಸಿಕ್ರೇಟ್ ಬಿಟ್ಟುಕೊಟ್ಟ ವಿಜಯ್ ದೇವರಕೊಂಡ

Ambuja 3

ಈಗಾಗಲೇ ರಿಲೀಸ್ ಆಗಿರುವ ಟೀಸರ್, ಹಾಗೂ ಟ್ರೇಲರ್ ಅಂಬುಜ ಚಿತ್ರದ ಮೇಲೆ ನಿರೀಕ್ಷೆ ಹುಟ್ಟಿಸಿರೋದಂತೂ ಸತ್ಯ. ರಜನಿ ಹಾಗೂ ಬೇಬಿ ಆಕಾಂಕ್ಷಾಳ ಲಂಬಾಣಿ ವೇಷಭೂಷಣ. ಸರಣಿ ಕೊಲೆ, ಆ ಕೊಲೆ ಹಿಂದಿರೋದು ಮೆಡಿಕಲ್ ಮಾಫಿಯಾನಾ ಅಥವಾ ಸೈಕಲಾಜಿಕಲ್ ಡಿಸಾರ್ಡರ್ ಇರುವ ವ್ಯಕ್ತಿಯಾ ಎನ್ನುವ ಸಂಶಯ. ಕಾವಿ ತೊಟ್ಟಿರುವ ವ್ಯಕ್ತಿ, ಕಾಳಿರೂಪವೆತ್ತಿ ಕೆಂಡಕಾರುವ ಮಹಿಳೆ ಹೀಗೆ ಹಲವು ಪಾತ್ರಗಳು ಅಂಬುಜ ಕಡೆ ಕಣ್ಣರಳಿಸಿ ನೋಡುವಂತೆ ಮಾಡಿವೆ. ಬೆಂಗಳೂರು, ಚಿಕ್ಕಮಂಗಳೂರು, ಗದಗ ಭಾಗದಲ್ಲಿ ಚಿತ್ರೀಕರಣ ನಡೆದಿದ್ದು, ಎತ್ತಿನ ಭುಜ ಬೆಟ್ಟದ ಮೇಲೆ ಹಾಡೊಂದನ್ನ ಕ್ಯಾಪ್ಚರ್ ಮಾಡಿಕೊಳ್ಳುವ ಮೂಲಕ ಅಂಬುಜ ಚಿತ್ರತಂಡ ದಾಖಲೆ ಮಾಡಿದೆ. ಮಗಳು ಅಮ್ಮನಿಗಾಗಿ ಲಾಲಿ ಹಾಡುವ ಗೀತೆ ಸ್ಯಾಂಡಲ್ವುಡ್ ಅಂಗಳದಲ್ಲಿ ಚರಿತ್ರೆ ಸೃಷ್ಟಿಸಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ನಿರ್ಮಾಪಕ ಕಾಶಿನಾಥ್ ಅವರೇ ಸಾಹಿತ್ಯ ರಚಿಸಿದ್ದಾರೆ. ಪ್ರಸನ್ನ ಕುಮಾರ್ ಕ್ಯಾಚಿ ಟ್ಯೂನ್ ಕಂಪೋಸ್ ಮಾಡಿದ್ದು, ತ್ಯಾಗರಾಜ್ ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಮುರುಲೀಧರ್ ಎನ್ ಕ್ಯಾಮೆರಾ ಕೈಚಳಕ, ವಿಜಯ್ ಎಂ. ಕುಮಾರ್ ಸಂಕಲನ `ಅಂಬುಜಾ’ನ ಅದ್ಭುತವನ್ನಾಗಿಸಿದೆ.

ಅಂದ್ಹಾಗೇ, ನಿರ್ಮಾಪಕ ಕಾಶಿನಾಥ್ ಅವರು ದುಡ್ಡು ಮಾಡಬೇಕು ಅಂತ ಚಿತ್ರರಂಗಕ್ಕೆ ಬಂದಿಲ್ಲ. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಇವರು, ಎಲೆಕ್ಟ್ರಿಕಲ್ ಅಂಡ್ ಮೆಕ್ಯಾನಿಕಲ್ ಇಂಡಸ್ಟ್ರಿಯಲ್ಲಿ `ಎಸ್ಕೆ ಹೈವೋಲ್ಟೇಜ್ ಎಕ್ವಿಪ್ಮೆಂಟ್, ಎಸ್ ಕೆ ಗ್ರೂಪ್ಸ್, ಪಿಎಸ್ಕೆ, ವಿಎಸ್ಕೆ ಕಂಪೆನಿಗಳನ್ನ ಕಟ್ಟಿ ಬೆಳೆಸಿದ್ದಾರೆ. ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಈಗ ಎಸ್ಕೆ ಸಿನಿಮಾಸ್ ಬ್ಯಾನರ್ ಅಡಿ ಅಂಬುಜ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಹನಿರ್ಮಾಣದಲ್ಲಿ ಲೋಕೇಶ್ ಭೈರವ, ಶಿವಪ್ರಕಾಶ್ ಕೈ ಜೋಡಿಸಿದ್ದಾರೆ. ಮಾರ್ಸ್ ಸುರೇಶ್ ಅವರು ವಿತರಣೆ ಜವಾಬ್ದಾರಿ ಹೊತ್ತಿದ್ದು, ಜುಲೈ 21ರಂದು ಸುಮಾರು 70 ಚಿತ್ರಮಂದಿರಗಳಲ್ಲಿ ಅಂಬುಜಾನ ಬಿಡುಗಡೆ ಮಾಡ್ತಿದ್ದಾರೆ. ಅಂಬುಜ ಕೈ ಹಿಡಿದರೆ ಹತ್ತಾರು ಸಿನಿಮಾ ನಿರ್ಮಿಸುವ ಕನಸು ಕಂಡಿದ್ದೇನೆ. ಕನ್ನಡ ಕಲಾಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡುತ್ತಾ, ಬಣ್ಣದ ಲೋಕವನ್ನ ನಂಬಿ ಬದುಕುತ್ತಿರುವವರಿಗೆ ಕೆಲಸ ಕೊಡುವ ಅಭಿಲಾಷೆ ಹೊಂದಿರುವುದಾಗಿ ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ ಹೇಳಿಕೊಂಡಿದ್ದಾರೆ. ಅವರಿಗೆ ಒಳ್ಳೆದಾಗಲಿ, ಅಂಬುಜ ಚಿತ್ರ ಅನ್ನದಾತ ಕಾಶಿನಾಥ್ ಅವರ ಕೈಹಿಡಿಯಲಿ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article