ಚಾಮರಾಜನಗರ: ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯ ವಿಷ ಪ್ರಸಾದ ಪ್ರಕರಣದ ಎ2 ಆರೋಪಿ ಅಂಬಿಕಾ ನಾಲ್ಕು ವರ್ಷದಿಂದ ಮನೆಯ ಬಾಡಿಗೆಯನ್ನ ಕಟ್ಟದ ಮನೆಯ ಮಾಲೀಕನಿಗೂ ವಂಚನೆ ಮಾಡಿದ್ದಾಳೆ.
ಮಾರ್ಟಳ್ಳಿ ಗ್ರಾಮದಲ್ಲಿರುವ ಗೋವಿಂದ ಎಂಬವರ ಮನೆಯನ್ನ ಅಂಬಿಕಾ ಬಾಡಿಗೆ ಪಡೆದುಕೊಂಡಿದ್ದಳು. ಪ್ರಕರಣದ ಎ1 ಆರೋಪಿ ಇಮ್ಮಡಿ ಮಹದೇವ ಸ್ವಾಮೀಜಿಯ ಮಧ್ಯಸ್ಥಿಕೆಯಲ್ಲಿ ಬಾಡಿಗೆ ಪಡೆದಿದ್ದಳು. ಆದರೆ ಸುಮಾರು ನಾಲ್ಕು ವರ್ಷದಿಂದ ಮನೆ ಬಾಡಿಗೆ ಕೊಡದೆ ಮಾಲೀಕರಿಗೆ ವಂಚನೆ ಮಾಡಿದ್ದಾಳೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಮನೆ ಮಾಲೀಕ, ಮೊದಲಿಗೆ 1 ಲಕ್ಷ ಹಣ ಅಡ್ವಾನ್ಸ್ ನೀಡಿದ್ದಾಳೆ. ನಾವು ಪ್ರತಿ ತಿಂಗಳು 1 ಸಾವಿರ ಮನೆಯ ಬಾಡಿಗೆ ಕೇಳಿದೆ. ಆದರೆ ಅವರು 1 ಸಾವಿರ ಬಾಡಿಗೆ ನೀಡಲು ಸಾಧ್ಯವಿಲ್ಲ, 500 ರೂಪಾಯಿ ಕೊಡುತ್ತೇನೆ ಎಂದು ಇಮ್ಮಡಿ ಮಹದೇವ ಸ್ವಾಮೀಜಿ ಹೇಳಿದ್ದರು. ನಾನು 500 ರೂಪಾಯಿ ಆಗುವುದಿಲ್ಲ 1 ಸಾವಿರ ಬಾಡಿಗೆ ಕೊಡಬೇಕು ಎಂದಿದ್ದೆ. ಕೊನೆಗೆ ನನ್ನ ಷರತ್ತಿಗೆ ಒಪ್ಪಿ ಇಮ್ಮಡಿ ಮಹದೇವಸ್ವಾಮೀಜಿ ಮನೆ ಬಾಡಿಗೆ ಕೊಡಿಸಿದ್ದರು ಎಂದು ಹೇಳಿದ್ದಾರೆ.
ಇದಾದ ಬಳಿಕ ನಾಲ್ಕು ವರ್ಷಗಳ ಕಾಲ ಅಂಬಿಕಾ ಮನೆಯ ಬಾಡಿಗೆ ನೀಡಲಿಲ್ಲ. ಇಮ್ಮಡಿ ಮಹದೇವಸ್ವಾಮೀಜಿಯ ಮೇಲೆ ಇದ್ದ ನಂಬಿಕೆಯಿಂದ ಮಾಲೀಕ ಗೋವಿಂದ ಅಂಬಿಕಾಳಿಂದ ಮನೆಯ ಬಾಡಿಗೆ ಕೇಳಲಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡ ಅಂಬಿಕಾ ನಾಲ್ಕು ವರ್ಷ ಬಾಡಿಗೆ ನೀಡದೆ ಮಾಲೀಕನಿಗೆ ವಂಚನೆ ಮಾಡಿದ್ದಾಳೆ. ಇತ್ತ ಬಾಡಿಗೆಯೂ ಇಲ್ಲ, ಮನೆ ಖಾಲಿಯೂ ಇಲ್ಲ. ಈಗ ಮನೆ ಖಾಲಿ ಮಾಡಿಸಿಕೊಡುವಂತೆ ಪೊಲೀಸರ ಮೊರೆ ಹೋಗಲು ಮಾಲೀಕ ನಿರ್ಧರಿಸಿದ್ದಾರೆ.
ಹಗಲಲ್ಲೇ ಈ ಮನೆಗೆ ಇಮ್ಮಡಿ ಮಹದೇವಸ್ವಾಮೀಜಿ ಹೋಗುತ್ತಿದ್ದನು. ಇದನ್ನು ಕಂಡು ಕಾಣದಂತೆ ಮನೆಯ ಮಾಲೀಕ ಗೋವಿಂದ ಇದ್ದರು. ಈಗ ತಮ್ಮ ಮನೆ ಅನೈತಿಕ ತಾಣವಾಗಿದ್ದಕ್ಕೆ ಬೇಸರ ವ್ಯಕ್ಯ ಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv