ಬೆಂಗಳೂರು: ಮಾಜಿ ಸಚಿವ ಗಣಿಧಣಿ ಅಂಬಿಡೆಂಟ್ ಕಂಪೆನಿ ಜೊತೆ 20 ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ಈಗ ರೆಡ್ಡಿ ಡೀಲ್ ಕೇಸ್ ಹೊಸ ತಿರುವು ಪಡೆದುಕೊಂಡಿದೆ.
ರೆಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬಿಡೆಂಟ್ ಕಂಪೆನಿ ಮಾಲೀಕ ಫರೀದ್ ಬಿಚ್ಚಿಟ್ಟ ಸತ್ಯ ಕೇಳಿ ಸಿಸಿಬಿ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದು, ಹೆಸರು ಕೇಳಿದಾಕ್ಷಣ ಸಿಸಿಬಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಅಂಬಿಡೆಂಟ್ ಮಾಲೀಕ ಫರೀದ್ ಬಿಚ್ಚಿಟ್ಟ ಸತ್ಯದಿಂದ ಮೈತ್ರಿ ಸರ್ಕಾರದ ‘ಪ್ರಭಾವಿ’ ಸಚಿವರಿಗೂ ಈಗ ಕಂಟಕ ಶುರುವಾಗಿದ್ದು, ಕಾಂಗ್ರೆಸ್ಸಿನ ಪ್ರಭಾವಿ ಸಚಿವರಿಗೂ ಫರೀದ್ ಜೊತೆ ನಂಟು ಇದೆ ಎಂದು ಮಾಹಿತಿ ಲಭ್ಯವಾಗಿದೆ.
Advertisement
Advertisement
ವಿಚಾರಣೆ ವೇಳೆ ಫರೀದ್ ಪ್ರಭಾವಿ ಸಚಿವರ ಹೆಸರನ್ನೂ ಬಾಯ್ಬಿಟ್ಟದ್ದಾನೆ. ಸಿಸಿಬಿಯಿಂದ ಪ್ರಭಾವಿ ಸಚಿವರ ವಿಚಾರಣೆ ಸಾಧ್ಯತೆ ಇದ್ದು, ವಿಚಾರಣೆಗೆ ಹಾಜರಾದರೆ ಪ್ರಭಾವಿ ಸಚಿವರ ತಲೆದಂಡ ಸಾಧ್ಯತೆ ಇದೆ. ಫರೀದ್ ಬಿಚ್ಚಿಟ್ಟ ಸಚಿವರು ಮುಖ್ಯಮಂತ್ರಿ ಕುಮಾರಸ್ವಾಮಿಗೂ ಅತ್ಯಾಪ್ತರಾಗಿದ್ದು, ಒಂದು ಕಾಲದಲ್ಲಿ ಆಪ್ತೇಷ್ಠರಲ್ಲಿ ಇವರು ಕೂಡ ಒಬ್ಬರಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕುಮಾರಸ್ವಾಮಿ ಜೊತೆಗಿನ ನಂಟು ಅಷ್ಟಕಷ್ಟೇ ಎಂಬ ಮಾತುಗಳು ಕೇಳಿ ಬರುತ್ತಿದೆ.
Advertisement
ಫರೀದ್ ಎಲ್ಲೆಲ್ಲಿ ಹಣ ವರ್ಗಾವಣೆ ಮಾಡಿದ್ದೇನೆ. ಮತ್ತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿಸಿಕೊಳ್ಳಲು ಯಾರು ಯಾರು ಸಹಾಯ ಮಾಡಿದ್ದಾರೆ ಎಂದು ಸಿಸಿಬಿ ಮುಂದೆ ಹೇಳಿದ್ದಾರೆ. ಈ ನಡುವೆ ಅವರಿಗೆ ಪ್ರಭಾವಿ ಸಚಿವರಿಗೂ ಅಂಬಿಡೆಂಟ್‍ನಿಂದ ಹಣ ಹೋಗಿದೆ. ಅವರು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ ಎಂದು ಸಾಕ್ಷಿ ಸಮೇತ ಅವರ ಹೆಸರನ್ನು ಹೇಳಿದ್ದಾರೆ.
Advertisement
ಫರೀದ್ ಬಾಯ್ಬಿಟ್ಟ ಸತ್ಯ ಕೇಳಿ ಸಿಸಿಬಿ ಅಧಿಕಾರಿಗಳು ಈಗ ಸಚಿವರಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಆದರೆ ಸಿಸಿಬಿ ಪೊಲೀಸರು ಮಾತ್ರ ಫರೀದ್ ಹೇಳಿದ ಸಚಿವರ ಹೆಸರನ್ನು ಬಹಿರಂಗಪಡಿಸಲಿಲ್ಲ. ಫರೀದ್ ಹೇಳಿದ ಹೇಳಿಕೆಯಿಂದ ಮಾತ್ರ ಸಚಿವರಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಕಡಿಮೆ ಇದ್ದು, ಸಾಕ್ಷಿಗಳನ್ನು ಪರಿಶೀಲನೆ ಮಾಡಿ ಬಳಿಕ ಅವರನ್ನು ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews