ನಿಧನದ ಹಿಂದಿನ ದಿನ ತಾನು ಪ್ರೀತಿಸ್ತಿದ್ದ ಸ್ಥಳಕ್ಕೋಗಿ ಬಹಳ ಸಮಯ ಕಳೆದಿದ್ರು ಅಂಬಿ!

Public TV
1 Min Read
ambarish 2 1

ಬೆಂಗಳೂರು: ಬದುಕಿನ ಕೊನೆಯ ಕ್ಷಣದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ತಾನು ಪ್ರೀತಿಸುತ್ತಿದ್ದ ಸ್ಥಳಕ್ಕೆ ಹೋಗಿ ಬಹಳ ಹೊತ್ತು ಕಳೆದಿದ್ದರು. ಅಲ್ಲಿ ಅವರು ಪ್ರೀತಿಸುತ್ತಿದ್ದ ಜೀವವನ್ನು ಮುದ್ದಿಸಿ ತಮ್ಮ ಕೊನೆಯ ಕ್ಷಣಗಳನ್ನು ಕಳೆದರು.

ಏನ್ಲಾ ಬಡ್ಡೇತದೆ, ಹೆಂಗಿದ್ದೀಯಾ? ನೀನೆ ರೇಸ್ ನಲ್ಲಿ ಫಸ್ಟ್ ಬರಬೇಕು. ಹೀಗಂತ ಅಂಬಿ ಮುದ್ದು ಕುದುರೆಯನ್ನು ಮೈದಡವಿ ನೇವರಿಸಿಬಿಟ್ಟರು ಅಂದ್ರೆ ಮುಗೀತು. ಅಂಬಿಯ ಪ್ರೀತಿಯ “ಸ್ಪೀಡ್ ಹಾಕ್” ಕೆನತ ಶುರು. ಅಂಬಿಯ ಸೂಟು-ಬೂಟು ಶಿಳ್ಳೆಯ ಸದ್ದಿನೊಂದಿಗೆ ಬೆಂಗಳೂರಿನ ಟರ್ಪ್ ಕ್ಲಬ್ ನಲ್ಲಿರುವ ಅಂಬಿ ಮಾಲೀಕತ್ವದ ಈ ಕುದುರೆ ಅದೆಷ್ಟೋ ಪದಕಗಳನ್ನು ಕೊರಳಿಗೆ ಹಾಕಿಕೊಂಡಿದೆ.

ambi horse 21

ಸಾವಿನ ಹಿಂದಿನ ಶುಕ್ರವಾರ ಇಳಿ ಸಂಜೆ ವೇಳೆ ನೇರವಾಗಿ ಅಂಬಿ ಟರ್ಪ್‍ಕ್ಲಬ್‍ಗೆ ಬಂದಿದ್ದರು. ಸ್ಪೀಡ್ ಹಾಕ್‍ನ್ನು ಮನಸಾರೆ ಮುದ್ದಿಸಿದ್ದರು. ಕುದುರೆ ರೇಸ್‍ನ ಹುಚ್ಚನ್ನು ಹತ್ತಿಸಿಕೊಂಡಿದ್ದ ಅಂಬಿ ಸಾವಿನ ಮುನ್ನ ದಿನವೂ ರೇಸ್‍ನ ಜಾಗದಲ್ಲೆಲ್ಲ ಸುಮ್ಮನೆ ಕೂತು ನಂತರ ಅಲ್ಲಿಂದ ಎದ್ದು ಬಂದಿದ್ದಾರೆ.

ambi horse

ಡರ್ಬಿ ರೇಸ್ ಆದಾಗೆಲ್ಲ ಸೂಟು-ಬೂಟು ಧರಿಸಿ ಸ್ಟೈಲಾಗಿ ಸಿಗರೇಟು ಸೇದುತ್ತಾ ಶಿಳ್ಳೆ ಹೊಡೆಯುವ ಅಂಬಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದರು. ಟರ್ಫ್ ಕ್ಲಬ್‍ನ್ನು ಬಹುವಾಗಿ ಪ್ರೀತಿಸಿದ್ದ ಅಂಬಿ ಇಲ್ಲದೇ ಈಗ ಅಂಬಿ ಅಶ್ವ ಮೌನವಾಗಿದೆ. ಟರ್ಪ್ ಕ್ಲಬ್‍ನಲ್ಲಿ ಅಂಬಿಯ ಆಳೆತ್ತರದ ಭಾವಚಿತ್ರ ಅಲ್ಲಿನ ಸಿಬ್ಬಂದಿಯ ಪ್ರೀತಿಯನ್ನು ತೋರುತ್ತಿದೆ.

ಶೂಟಿಂಗ್, ಮೀಟಿಂಗ್, ಸದನ ಸಭೆಗಳ ನಡುವೆಯೂ ಅಂಬಿ ರೇಸ್‍ಗಳನ್ನು ವೀಕ್ಷಿಸಲು ಬರುತ್ತಿದ್ದರು. ಸಾವಿಗೂ ಮುನ್ನಾ ದಿನ ಬಂದ ಅಂಬಿ ಈಗಿಲ್ಲ ಅನ್ನೋ ಸತ್ಯವನ್ನು ಅರಗಿಸಿಕೊಳ್ಳೋಕೆ ಇಲ್ಲಿನ ಸಿಬ್ಬಂದಿಗೂ ಆಗುತ್ತಿಲ್ಲ. ಸ್ಪೀಡ್ ಹಾಕ್‍ನ ಕೆನತದ ಓಟಕ್ಕೆ ಮಗುವಾಗುತ್ತಿದ್ದ ಅಂಬಿಯನ್ನು ಕಳೆದುಕೊಂಡು ಅಂಬಿ ಕುದುರೆ ಅನಾಥವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *