ಸಿನಿಮಾ ನಟರಾಗಿ ಅಂಬರೀಶ್ (Ambareesh) ಎಷ್ಟು ಫೇಮಸ್ ಆಗಿದ್ದರೂ, ಅಷ್ಟೇ ರಾಜಕೀಯ (Politics) ವಲಯದಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದರು. ಅಂಬರೀಶ್ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿರಲಿ, ಎಲ್ಲ ಪಕ್ಷದಲ್ಲೂ ತಮ್ಮ ಸ್ನೇಹಿತರನ್ನು ಹೊಂದಿದ್ದರು. ಪಕ್ಷಾತೀತವಾಗಿ ಯೋಚಿಸುತ್ತಿದ್ದರು.
Advertisement
ಅಂಬರೀಶ್ ಜನತಾ ಪಕ್ಷದೊಂದಿಗೂ ಗುರುತಿಸಿಕೊಂಡಿದ್ದರು. ಅದರಲ್ಲೂ ಜೆ.ಎಚ್.ಪಟೇಲ್ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಮಾತಿನ ಧಾಟಿಯ ವಿಷಯದಲ್ಲಿ ಜೆ.ಎಚ್.ಪಟೇಲ್ ರಿಗೆ ಅಂಬರೀಶ್ ಅವರನ್ನು ಹೋಲಿಸುತ್ತಾರೆ.
Advertisement
Advertisement
ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ ಹಾಗೂ ಅಂಬರೀಶ್ ಒಂದು ರೀತಿಯಲ್ಲಿ ಕುಚಿಕು ಗೆಳೆಯರು. ದಕ್ಷಿಣದಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲೂ ಅಂಬರೀಶ್ ಅವರಿಗೆ ಅನೇಕ ಸ್ನೇಹಿತರಿದ್ದರು. ಇದನ್ನೂ ಓದಿ: ಅಂಬಿ ಹಾಡಿಗೆ ಅಭಿ-ಅವಿವಾ ಡಾನ್ಸ್ : ಭಾವಿ ಪತ್ನಿಗೆ ಚಳಿ ಚಳಿ ತಾಳೆನು ಎಂದ ಯಂಗ್ ರೆಬೆಲ್ ಸ್ಟಾರ್
Advertisement
ಕಾಂಗ್ರೆಸ್ ಪಕ್ಷಕ್ಕೂ ಅಂಬರೀಶ್ ಸಾಕಷ್ಟು ಸೇವೆ ಮಾಡಿದ್ದಾರೆ. ಕೊನೆ ಕೊನೆಗೆ ಆ ಪಕ್ಷದೊಂದಿಗೆ ಅಂಬಿ ಮುನಿಸಿಕೊಂಡರು. ನಾಯಕರ ವಿರುದ್ಧವೇ ಮಾತನಾಡಿದರು. ಆದರೂ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರ ಜೊತೆ ಅಂಬರೀಶ್ ತೀರಾ ಸಲುಗೆಯಿಂದ ಇದ್ದರು.
ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಂಬರೀಶ್ ಲೋಕಸಭಾ ಸದಸ್ಯರಾಗಿದ್ದರು. ಇಬ್ಬರೂ ಮಂಡ್ಯ ಮೂಲದವರು. ಹಾಗಾಗಿ ಆತ್ಮೀಯ ಒಡನಾಟವನ್ನು ಅವರು ಇಟ್ಟುಕೊಂಡಿದ್ದರು.
ಹೆಚ್.ಡಿ ದೇವೇಗೌಡ ಅವರು ಕರ್ನಾಟಕದ ಸಿಎಂ ಆಗಿದ್ದ ವೇಳೆಯಲ್ಲೇ ಅಂಬರೀಶ್ ಕಾಂಗ್ರೆಸ್ ಬಿಟ್ಟು ಜನತಾದಳಕ್ಕೆ ಸೇರಿದ್ದರು. ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅವರ ಕುಟುಂಬದ ಜೊತೆಯೂ ಅಂಬರೀಶ್ ನಂಟು ಹೊಂದಿದ್ದರು.
ಕುಮಾರ್ ಬಂಗಾರಪ್ಪನವರ ಕುಟುಂಬದ ಜೊತೆಗೆ ಅಂಬಿಗೆ ಸ್ನೇಹವಿತ್ತು. ಹಾಗಾಗಿ ಆ ಕುಟುಂಬದಿಂದ ಯಾರೇ ರಾಜಕಾರಣಕ್ಕೆ ಅವರನ್ನು ಸ್ವಾಗತಿಸಿ, ಗೈಡ್ ಮಾಡುತ್ತಿದ್ದರು.