ಪ್ರೇಯಸಿಯ ಕೊಲೆ ಬಳಿಕ ಮನನೊಂದು ಆತ್ಮಹತ್ಯೆಗೆ ಶರಣಾದ ಪ್ರಿಯತಮ!

Public TV
2 Min Read
mumbai suicide

ಮುಂಬೈ: ಪ್ರೇಯಸಿಯ ಕೊಲೆಯ ಬಳಿಕ ಮನನೊಂದ ಪ್ರಿಯತಮನೊಬ್ಬ ಮಂಗಳವಾರ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಅಂಬರನಾಥ್ ಎಂಬಲ್ಲಿ ನಡೆದಿದೆ.

32 ವರ್ಷದ ನತ್ರಾಮ್ ಚಂದ್ರಭನ್ ವರ್ಮಾ ಆತ್ಮಹತ್ಯೆಗೆ ಶರಣಾದ ದುದೈವಿ. ನತ್ರಾಮ್ ಮೂಲತಃ ಕಂಸಿ ಗ್ರಾಮದ ನಿವಾಸಿಯಾಗಿದ್ದು, ಅಂಬರನಾಥ್ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದನು. ಇನ್ನೂ ನತ್ರಾಮ್ ಪ್ರೇಯಸಿ ಆಚಲ್ ಮಹಾಲೇ ದಿವಾ ಬಡವಾಣೆಯ ನಿವಾಸಿಯಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು.

ಗೆಳತಿ ಆಚಲ್ ಕೊಲೆಯ ಬಳಿಕ ಮನನೊಂದ ನತ್ರಾಮ್ ತನ್ನ ಕುಟುಂಬಸ್ಥರಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಸದ್ಯ ತಾನಿರುವ ವಿಳಾಸವನ್ನು ಬರೆದು ಮೊಬೈಲ್ ನಲ್ಲಿ ಮೆಸೇಜ್ ಮಾಡಿದ್ದ. ತನ್ನ ಸಾವಿನ ಬಳಿಕ ತನ್ನ ಶವವನ್ನು ಪೋಷಕರು ಬಂದು ಪಡೆದುಕೊಳ್ಳಲಿ ಎಂಬ ಉದ್ದೇಶದಿಂದಲೇ ವಿಳಾಸ ಬರೆದು ಮೆಸೇಜ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Natram Verma

ಇನ್ನೂ ಇತ್ತ ನತ್ರಾಮ್ ಮೆಸೇಜ್ ನೋಡುತ್ತಲೇ ಪೊಲೀಸರಿಗೆ ವಿಷಯ ತಿಳಿಸಿ ಪೋಷಕರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಮತ್ತು ಪೋಷಕರು ಆಗಮಿಸುವಷ್ಟರಲ್ಲಿ ನತ್ರಾಮ್ ಆತ್ಮಹತ್ಯೆಗೆ ಶರಣಾಗಿದ್ದ.

ಕತ್ತು ಹಿಸುಕಿ ಕೊಲೆ?: ನತ್ರಾಮ್ ಮನೆಯಲ್ಲಿ ಯುವತಿಯ ಶವ ಕೂಡ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ವೇಳೆ ಯುವತಿಯ ಕತ್ತು ಹಿಸುಕಿ ಕೊಲೆಗೈದು ಕೊನೆಗೆ ತಾನು ಮನೆಯ ಮೇಲ್ಛಾವಣಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು. ಅಷ್ಟೇ ಅಲ್ಲದೇ ಇಬ್ಬರೂ ವೈವಾಹಿಕ ಪೂರ್ವ ಸಂಬಂಧವನ್ನು ಹೊಂದಿದ್ದರು ಎನ್ನುವ ಶಂಕೆ ಈಗ ವ್ಯಕ್ತವಾಗಿದೆ.

ನತ್ರಾಮ್ ಕೆಲವು ತಿಂಗಳ ಹಿಂದೆ ಕೆಲಸಕ್ಕಾಗಿ ಅಂಬರ್‍ನಾಥ್ ಗೆ ಆಗಮಿಸಿದ್ದನು. ಯುವತಿ ಆಚಲ್ ಕೆಲಸಕ್ಕಾಗಿ ಆಗಮಿಸಿದ್ದಳು. ಕೆಲವು ದಿನಗಳ ಹಿಂದೆ ಆಚಲ್, ತನ್ನ ಪ್ರಿಯತಮ ನತ್ರಾಮ್ ಭೇಟಿಯಾಗಲು ಬಂದಿದ್ದು, ಈ ವೇಳೆ ನತ್ರಾಮ್ ಆಕೆಯನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

Shivaji Nagar police

ಯುವತಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ: ಇತ್ತ ನತ್ರಾಮ್ ನೇಣಿಗೆ ಶರಣಾಗಿದ್ದರೆ, ಆಚಲ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಚಲ್ ಸತ್ತು ಎರಡರಿಂದ ಮೂರು ದಿನಗಳು ಆಗಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿಯ ಕೊಲೆ ಆಗಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.

ಮೃತರ ಶವಗಳನ್ನು ಸ್ಥಳೀಯ ಉಲ್ಲಾಸ ನಗರದ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಯುವತಿಯ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದ್ದು, ಶವ ಪರೀಕ್ಷೆಯಲ್ಲಿ ಎಲ್ಲವು ತಿಳಿಯಲಿದೆ. ಈ ಸಂಬಂಧ ಅಂಬರ್‍ನಾಥ್ ನ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಎನ್.ಕಿಂಜಲೆ ತಿಳಿಸಿದ್ದಾರೆ.

607461 574715 475336 murder

Ambernath Police Rape

Ambernath railway station Stationboard

Share This Article
Leave a Comment

Leave a Reply

Your email address will not be published. Required fields are marked *