ಮಡಿಕೇರಿ: ಸುಮಾರು 10 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ (Ambergris) ವಶಪಡಿಸಿಕೊಂಡು 10 ಮಂದಿಯನ್ನು ಬಂಧಿಸಿರುವ ಘಟನೆ ಕೊಡಗು ಜಿಲ್ಲೆ (Kodagu District) ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮದಲ್ಲಿ ನಡೆದಿದೆ.
ಕೇರಳದ ತಿರುನಂತಪುರಂನಿಂದ ತಂದು ಆಂಧ್ರಪ್ರದೇಶ ಅಥವಾ ಬೆಂಗಳೂರಿನಲ್ಲಿ (Bengaluru) ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ವಿರಾಜಪಟೇಟೆ ಪೊಲೀಸರು (Virajpet Police) ಬಂಧಿಸಿದ್ದಾರೆ. ಬಳಿಕ ಬಂಧಿತರಿಂದ 10 ಕೋಟಿ ರೂ. ಮೌಲ್ಯದ 10 ಕೆ.ಜಿ 390 ಗ್ರಾಂ ತೂಕದ ತಿಮಿಂಗಿಲ ವಾಂತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
- Advertisement3
ಸ್. ಶಂಶುದ್ದೀನ್ (45), ಎಂ.ನವಾಜ್ (54 ವರ್ಷ), ವಿ.ಕೆ ಲತೀಶ್ (53), ಜೇಶ್.ವಿ (40), ಪ್ರಶಾಂತ್.ಟಿ (52), ಎ.ವಿ ಶಂಶುದ್ದೀನ್ (48), ಬಾಲಚಂದ್ರನಾಯಕ್ (55), ಕೆ.ಕೆ ಜೋಬಿಸ್ (33) ವರ್ಷ ಬಂಧಿತ ಆರೋಪಿಗಳು. ಇದನ್ನೂ ಓದಿ: ಗುತ್ತಿಗೆದಾರರು ಕಮಿಷನ್ ಆರೋಪದ ಸಾಕ್ಷಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ – ಕೃಷ್ಣಬೈರೇಗೌಡ
- Advertisement
ತಿಮಿಂಗಿಲ ವಾಂತಿಗೆ ಯಾಕಿಷ್ಟು ಬೇಡಿಕೆ?
ಅಂಬರ್ ಗ್ರೀಸ್ ಅಥವಾ ತಿಮಿಂಗಿಲ ವಾಂತಿ ಎನ್ನುವುದು ಮೇಣದಂಥ ವಸ್ತುವಾಗಿದ್ದು, ಇದನ್ನ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಚ್ಚಾವಸ್ತುವಾಗಿದ್ದಾಗಲೂ ಅಂಬರ್ ಗ್ರೀಸ್ ಕೊಂಚ ಸುವಾಸನೆ ಬೀರುವಂಥದ್ದಾಗಿರುತ್ತದೆ. ಕೆಲವು ದೇಶಗಳಲ್ಲಿ ಕಾಮೋತ್ತೇಜಕ ವಸ್ತುಗಳ ತಯಾರಿಕೆಯಲ್ಲೂ ಇದನ್ನ ಬಳಸಲಾಗುತ್ತದೆ. ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಭಾರೀ ಇಳಿಕೆಯಾಗಲಿದೆ ಟಿವಿ, ಫ್ರಿಡ್ಜ್, ಮೊಬೈಲ್ ಬೆಲೆ!
ತಿಮಿಂಗಿಲ ವಾಂತಿ ಸಿಗುವುದು ಬಹಳ ಅಪರೂಪ. ಏಕೆಂದರೆ, ತಿಮಿಂಗಿಲಗಳು ಸಮುದ್ರದಲ್ಲಿ ವಾಂತಿ ಮಾಡಿಕೊಳ್ಳುವುದು ಅಪರೂಪ ಹಾಗೂ ಅವು ಜನಸಾಮಾನ್ಯರಿಗೆ ಸಿಗುವುದು ತುಂಬಾ ವಿರಳ. ಹಾಗಾಗಿ ಈ ವಸ್ತುವಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಆದರೆ ಕಳ್ಳಸಾಗಣೆದಾರರು ಅಂಬರ್ ಗ್ರೀಸ್‌ಗಾಗಿ ಸಮುದ್ರಗಳಿಗೆ ದಾಂಗುಡಿ ಇಡುವುದನ್ನು ತಪ್ಪಿಸಲು ಬಹುತೇಕ ದೇಶಗಳು ಇದರ ಮಾರಾಟ ನಿಷೇಧಿಸಿವೆ. ಹಾಗಾಗಿ ಇದು ಕಳ್ಳಸಾಗಣೆಯಾಗುತ್ತಿದೆ. ಇದನ್ನೂ ಓದಿ: ಕೋಟ್ಯಂತರ ರೂಪಾಯಿ ಮೌಲ್ಯದ ತಿಮಿಂಗಿಲ ವಾಂತಿ ವಶ – ಇಬ್ಬರು ಅರೆಸ್ಟ್