ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ 2 ದಿನ ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸೋಮವಾರ ಡಾ.ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದು, ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೋದಿಗೆ ಶುಭ ಹಾರೈಸಿದ್ದಾರೆ ಹಾಗೂ ಇದು ಸರ್ಕಾರದ ಹೆಮ್ಮೆಯ ಯೋಜನೆ ಎಂದಿದ್ದಾರೆ.
ಡಾ. ಬಿಆರ್ ಅಂಬೇಡ್ಕರ್ ಅವರ ಸ್ಕೂಲ್ ಆಫ್ ಎಕನಾಮಿಕ್ಸ್ ನೂತನ ಕಟ್ಟಡದ ಯೋಜನೆಗೆ ತಮ್ಮ ಸರ್ಕಾರ ಬಿಡುಗಡೆ ಮಾಡಿದ್ದ ಹಣ ಹಾಗೂ ಜಾಗದ ಬಗ್ಗೆ ಪ್ರಸ್ತಾಪಿಸಿ, ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 5 ವರ್ಷಗಳ ಹಿಂದೆ(4-10-2017)ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬೆಂಗಳೂರಿಗೆ ಬಂದು ನಮ್ಮ ಸರ್ಕಾರದ ಹೆಮ್ಮೆಯ ಯೋಜನೆ ಬಾಬಾಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟಿಸಿದ್ದು ನಾನು ಮುಖ್ಯಮಂತ್ರಿಯಾಗಿದ್ದ ಕಾಲದ ಮಧುರ ಮತ್ತು ಸಾರ್ಥಕ ನೆನಪು ಎಂದು ಮೆಲುಕು ಹಾಕಿದ್ದಾರೆ.
Advertisement
Advertisement
ವಿಶ್ವ ಕಂಡ ಅಪ್ರತಿಮ ಆರ್ಥಿಕ ತಜ್ಞ ಡಾ.ಬಿಆರ್ ಅಂಬೇಡ್ಕರ್ ಅವರ 125ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ನೆನಪಿಗೆ ಅರ್ಥಪೂರ್ಣವಾದ ಸ್ಮಾರಕರೂಪದಲ್ಲಿ ಯೋಜನೆಯೊಂದನ್ನು ರೂಪಿಸಬೇಕೆಂಬ ನಮ್ಮ ಸರ್ಕಾರದ ಕನಸು ನನಸಾಗಿ ರೂಪುಗೊಂಡದ್ದು ಬಾಬಾಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್ ಎಂದಿದ್ದಾರೆ. ಇದನ್ನೂ ಓದಿ: ಬರೋಬ್ಬರಿ 11 ತಿಂಗಳ ಬಳಿಕ ಪ್ರಧಾನಿ ಭೇಟಿಯಾಗಲಿರುವ ಬಿಎಸ್‍ವೈ
Advertisement
Former Prime Minister Dr Manmohan Singh inaugurated our flagship project Babasaheb Dr B R Ambedkar School of Economics in 2017. It gives us immense pleasure to recollect the satisfying memory of dedicating a world class University to the people of Karnataka.#DrBRAmbedkar pic.twitter.com/nqDQtJP4o6
— Siddaramaiah (@siddaramaiah) June 20, 2022
Advertisement
ಬಾಬಾಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್ ಸ್ಥಾಪನೆಗೆ 2017ರಲ್ಲಿಯೇ 43.45 ಎಕರೆ ಜಮೀನು ಮತ್ತು ಹೊಸ ಕಟ್ಟಡ ಸಹಿತ ಮೂಲಸೌಕರ್ಯ ನಿರ್ಮಾಣಕ್ಕೆ 350 ಕೋಟಿ ರೂ. ಮಂಜೂರು ಮಾಡಿದ್ದ ನಮ್ಮ ಸರ್ಕಾರ ಬದ್ಧತೆಯಿಂದ ಈ ಯೋಜನೆಯನ್ನು ಸಾಕಾರಗೊಳಿಸಿತ್ತು ಎಂದು ತಿಳಿಸಿದರು.
ಬಿಎಎಸ್‌ಇ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ. ಈ ಕಟ್ಟಡವನ್ನು 6 ತಿಂಗಳಲ್ಲಿ ಪೂರ್ಣಗೊಳಿಸಿದ್ದು ನಮ್ಮ ಸರ್ಕಾರದ ಹೆಮ್ಮೆಯ ಸಾಧನೆ. ಜ್ಞಾನಭಾರತಿ ಕ್ಯಾಂಪಸ್ ನಲ್ಲಿಯೇ ಇದ್ದ ಕಟ್ಟಡದಲ್ಲಿಯೇ 2017ರ ಜೂನ್‌ನಲ್ಲಿ hಣಣಠಿs://ಣ.ಛಿo/0ಟಜಿ6ಖಿSgಠಿಈಅ(ಊoಟಿouಡಿs) ಎಕನಾಮಿಕ್ಸ್ ತರಗತಿಗಳು ಪ್ರಾರಂಭವಾಗಿತ್ತು ಎಂದರು. ಇದನ್ನೂ ಓದಿ: ಇಂದು ಬೆಂಗಳೂರಿಗೆ ಮೋದಿ – ಎಲ್ಲಿ ಸಂಚಾರ ನಿಷೇಧ? ಪರ್ಯಾಯ ಮಾರ್ಗ ಯಾವುದು?
Former President Late Shri #PranabMukherjee had laid the foundation stone for BASE & our govt completed the construction of the building in just 6 months. Bsc (H) Economics classes were started in June 2017. pic.twitter.com/nUA8zJacfF
— Siddaramaiah (@siddaramaiah) June 20, 2022
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಾಬಾಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್‌ನ ನೂತನ ಆವರಣವನ್ನು ಉದ್ಘಾಟಿಸುತ್ತಿದ್ದಾರೆ. ಈ ಸಮಾರಂಭಕ್ಕೆ ಶುಭ ಹಾರೈಸುವೆ ಎಂದು ಬರೆದಿದ್ದಾರೆ.