ಕೋಲಾರ: ಸಂವಿಧಾನ ಶಿಲ್ಪಿ ಬಾಬಾ ಸಾಹೆಬ್ ಅಂಬೇಡ್ಕರ್ ಅವರ 131 ನೇ ಜಯಂತಿಯನ್ನು ಕೋಲಾರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ನಗರದ ಕ್ಲಾಕ್ ಟವರ್‌ಗೆ ಆಗಮಿಸಿದ ಅಂಬೇಡ್ಕರ್ ಜಯಂತಿ ಮೆರವಣಿಗೆಯನ್ನು ಮುಸ್ಲಿಂ ಬಾಂಧವರು ಹೂ ಚೆಲ್ಲುವ ಮೂಲಕ ಸ್ವಾಗತಿಸಿದರು.
ಮತ್ತೊಂದೆಡೆ ನಗರದ ಅಂಜುಮನ್ ಇಸ್ಲಾಂ ವತಿಯಿಂದ ಅಂಬೇಡ್ಕರ್ ಜಯಂತಿ ಮೆರವಣಿಗೆ ಮೇಲೆ ಪುಷ್ಪಾರ್ಚನೆ ಮಾಡುವ ಮೂಲಕ ಭಾತೃತ್ವವನ್ನು ಮೆರೆದು ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕೋಲಾರದ ಅಂಜುಮನ್ ಸಂಸ್ಥೆ ಮುಖ್ಯಸ್ಥ ಝಮೀರ್ ಅಹಮದ್ ಕ್ಲಾಕ್ ಟವರ್ ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಿದೆ ಎಂದರು. ಇದನ್ನೂ ಓದಿ: ಆಧಾರ್ ಕಾರ್ಡ್ ಇರೋರೆಲ್ಲ ಭಾರತೀಯರು: ವಚನಾನಂದ ಶ್ರೀ
ಕೋಲಾರದಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ-ಭಾವ ಇಲ್ಲದೆ ಜೀವಿಸುತ್ತಿದ್ದೇವೆ. ರಾಜಕಾರಣಿಗಳು ಎಷ್ಟು ಪ್ರಯತ್ನ ಪಟ್ಟರೂ ನಮ್ಮ ಮಧ್ಯೆ ವಿಷ ಬೀಜ ಹಾಕಲು ಸಾಧ್ಯವಿಲ್ಲ. ನಾವು ಒಬ್ಬರನ್ನೊಬ್ಬರು ನಂಬಿಕೆ ಮತ್ತು ಅವಲಂಬಿಕೆಯಿಂದ ಜೀವನ ಸಾಗಿಸುತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕಲಾವಿದನ ನಾಲಿಗೆಯಿಂದ ಅರಳಿತು ಅಂಬೇಡ್ಕರ್ ಚಿತ್ರ