ಸಿಡ್ನಿ: ಆಫ್ ಸ್ಪಿನ್ನರ್ ಅಂಬಾಟಿ ರಾಯುಡು ಅವರ ಬೌಲಿಂಗ್ ಶೈಲಿ ಅನುಮಾನಾಸ್ಪದವಾಗಿದೆ ಎಂದು ಪಂದ್ಯದ ಅಧಿಕಾರಿಗಳು ದೂರು ನೀಡಿದ್ದಾರೆ. ಈ ಸಂಬಂಧ ಟೀಂ ಇಂಡಿಯಾಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, 14 ದಿನದ ಒಳಗಡೆ ಅಂಬಾಟಿ ರಾಯುಡು ಬೌಲಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಿದೆ.
ಪರೀಕ್ಷೆಯಲ್ಲಿ ವಿಫಲರಾದರೆ ಅಂಬಾಟಿ ರಾಯುಡು ಏಕದಿನ, ಟಿ 20 ಮತ್ತು ಟೆಸ್ಟ್ ಪಂದ್ಯದಲ್ಲಿ ಬಾಲ್ ಎಸೆಯಲು ಅನರ್ಹರಾಗುತ್ತಾರೆ. ಪರೀಕ್ಷೆಯ ಫಲಿತಾಂಶ ಪ್ರಕಟವಾಗುವವರೆಗೂ ರಾಯುಡು ಬೌಲಿಂಗ್ ಮಾಡಬಹುದು. ಇದನ್ನೂ ಓದಿ: ಅಂಪೈರ್ ತೀರ್ಪಿನಲ್ಲಿ ಧೋನಿ ಔಟ್ : ವಿಡಿಯೋ ರಿಪ್ಲೇಯಲ್ಲಿ ನಾಟೌಟ್
Advertisement
ಮೊದಲ ಏಕದಿನ ಪಂದ್ಯದಲ್ಲಿ 2 ಓವರ್ ಎಸೆದು 13 ರನ್ ನೀಡಿದ್ದ ಅಂಬಾಟಿ ರಾಯುಡು ಎರಡು ಎಸೆತ ಎದುರಿಸಿ ಶೂನ್ಯ ರನ್ನಿಗೆ ಔಟ್ ಆಗಿದ್ದರು. ಆಫ್ ಸ್ಪಿನ್ನರ್ ಬೌಲರ್ ಆಗಿರುವ ರಾಯುಡು ಅರೆಕಾಲಿಕಾ ಸ್ಪಿನ್ನರ್ ಆಗಿ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದರು.
Advertisement
ICC: Rayudu’s bowling action will be scrutinised further, relating to suspected illegal bowling actions reported in Tests, ODIs and T20Is. He's required to undergo testing within 14 days. Rayudu is permitted to continue bowling in international cricket until the results are out. pic.twitter.com/L6XqzoTeHZ
— ANI (@ANI) January 13, 2019
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv