ಮುಂಬೈ: ಟೀಂ ಇಂಡಿಯಾ ಯುವ ಆಟಗಾರ ವಿಜಯ್ ಶಂಕರ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರ ಬಿದ್ದು, ಈ ಸ್ಥಾನದಲ್ಲಿ ಮಯಾಂಕ್ ಆಯ್ಕೆ ಆಗಿರುವುದು ತಿಳಿದ ಸಂಗತಿ. ಆದರೆ ತಂಡಕ್ಕೆ ಮಯಾಂಕ್ ಆಯ್ಕೆ ಆಗುತ್ತಿದಂತೆ ಕ್ರಿಕೆಟ್ ಅಭಿಮಾನಿಗಳು ಅಂಬಟಿ ರಾಯುಡುರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
BCCI picked Vijay Shankar in place of Ambati Rayudu saying it was a tough choice. Now that Shankar is injured they replaced him with Mayank Agarwal. Is BCCI trolling Rayudu for that 3D comment? ???????? #CWC19
— Sir Jadeja fan (@SirJadeja) July 1, 2019
Advertisement
ವಿಶ್ವಕಪ್ ಆಯ್ಕೆ ವೇಳೆ ವಿಜಯ್ ಶಂಕರ್‍ಗೆ ತಂಡದಲ್ಲಿ ಸ್ಥಾನ ನೀಡಿರುವುದನ್ನು ಸಮರ್ಥಿಸಿದ್ದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್, ವಿಜಯ್ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‍ನಲ್ಲಿ ತಂಡಕ್ಕೆ ನೆರವಾಗಲಿದ್ದಾರೆ ಎಂದು ತಿಳಿಸಿದ್ದರು. ಈ ಕುರಿತು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದ ರಾಯುಡು, ಈ ಬಾರಿ ವಿಶ್ವಕಪ್ ಕ್ರಿಕೆಟ್ ನೋಡಲು 3ಡಿ ಕನ್ನಡಕ ಬುಕ್ ಮಾಡಿದ್ದಾಗಿ ಟ್ವೀಟ್ ಮಾಡಿದ್ದರು. ವಿಶ್ವಕಪ್ ಸ್ಥಾನ ಕಳೆದುಕೊಂಡ ಬೇಸರದಲ್ಲಿ ರಾಯುಡು ಈ ರೀತಿ ಮಾತನಾಡಿದ್ದಾರೆ ಎಂದು ಬಿಸಿಸಿಐನ ಕೆಲ ಹಿರಿಯ ಸದಸ್ಯರು ಪ್ರತಿಕ್ರಿಯೆ ನೀಡಿದ್ದರು.
Advertisement
BCCI: mayank Agarwal replace Vijay Shankar in #WC2019
Ambati rayudu right now: pic.twitter.com/cXGYcFoiuw
— Jitesh Yadav (@JiteshY22030451) July 1, 2019
Advertisement
ಸದ್ಯ ಟೂರ್ನಿಯಿಂದ ವಿಜಯ್ ಶಂಕರ್ ಹೊರ ಬಿದ್ದ ಪರಿಣಾಮ ರಾಯುಡು ಅವರನ್ನು ಆಯ್ಕೆ ಮಾಡಬಹುದು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಆಯ್ಕೆ ಸಮಿತಿ ಮಯಾಂಕ್‍ಗೆ ಕರೆ ನೀಡಿತ್ತು. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪ ಮಾಡಿರುವ ಕೆಲ ಟ್ವಿಟ್ಟರಿಗರು ರಾಯುಡುರ ಕಾಲೆಳೆದಿದ್ದಾರೆ. ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿಯೇ ಅಂಬಟಿ ರಾಯುಡು ಅವರಿಗೆ ಅವಕಾಶ ನೀಡಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ಮಯಾಂಕ್ ರೆಕಾರ್ಡ್: 28 ವರ್ಷದ ಮಯಾಂಕ್ ಅರ್ಗವಾಲ್ ಇದುವರೆಗೂ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ. 6 ವರ್ಷಗಳ ಹಿಂದೆ ಕರ್ನಾಟಕ ಪರ ಫಸ್ಟ್ ಕ್ಲಾಸ್ ಕ್ರಿಕೆಟ್‍ಗೆ ಜಾರ್ಖಂಡ್ ವಿರುದ್ಧ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಮಯಾಂಕ್ 144 ಎಸೆತಗಳಲ್ಲಿ 90 ರನ್ ಸಿಡಿಸಿದ್ದರು. ಇದುವರೆಗೂ ಫಸ್ಟ್ ಕ್ಲಾಸ್ ಕ್ರಿಕೆಟ್‍ನಲ್ಲಿ 50 ಪಂದ್ಯಗಳನ್ನಾಡಿರುವ ಇವರು 3,964 ರನ್ ಗಳಿಸಿದ್ದು, ಮಹಾರಾಷ್ಟ್ರ ವಿರುದ್ಧ ಅಜೇಯ 304 ರನ್ ಸಿಡಿಸಿದ್ದಾರೆ.
https://twitter.com/WaizArd20/status/1145666167463268352
ಐಪಿಎಲ್ ಟೂರ್ನಿಯಲ್ಲಿ ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಮಯಾಂಕ್, ಡೆಲ್ಲಿ, ಪುಣೆ, ಬೆಂಗಳೂರು, ಪಂಜಾಬ್ ತಂಡಗಳ ಪರ ಆಗಿದ್ದಾರೆ. 2019ರ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪರ ಆಡಿದ್ದ ಮಯಾಂಕ್ 13 ಪಂದ್ಯಗಳಿಂದ 332 ರನ್ ಸಿಡಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿರುವ ಮಯಾಂಕ್, ಮೆಲ್ಬೋರ್ನ್ ನಲ್ಲಿ ನಡೆದ ಪಂದ್ಯದಲ್ಲಿ 42 ಎಸೆತಗಳಲ್ಲಿ 76 ರನ್ ಸಿಡಿಸಿ ಮಿಂಚಿದ್ದರು. ಆ ಬಳಿಕ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ 77 ರನ್ ಗಳಿಸಿದ್ದರು. 2 ಟೆಸ್ಟ್ ಪಂದ್ಯಗಳ 3 ಇನ್ನಿಂಗ್ಸ್ ಗಳಲ್ಲಿ ಆಡಿರುವ ಮಯಾಂಕ್ 195 ರನ್ ಗಳಿಸಿದ್ದಾರೆ.
In all these Indian Team injury & replacement issues, this "highly probable" Ambani Rayudu is continuously ignored. Reason is this tweet ????????
Rishabh Pant & Mayank Agarwal getting selected.
Moral: Dont mess with BCCI ????#TeamIndia Vijay Shankar Shikhar Dhawan pic.twitter.com/YDt9Wh1mf9
— Charlie Joe (@CharlieJoe4) July 1, 2019