ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿರುವ ಹನುಮನ ಸನ್ನಿಧಿಗೆ ಇಂಗ್ಲೆಂಡ್ ರಾಯಭಾರಿ ಭೇಟಿ ನೀಡಿದ್ದಾರೆ.
Advertisement
ಪ್ರಮುಖ ಧಾರ್ಮಿಕ ತಾಣಗಳಲ್ಲಿ ಒಂದಾಗಿರುವ ಅಂಜನಾದ್ರಿಯ ಆಂಜನೇಯ ದೇಗುಲಕ್ಕೆ ಇಂಗ್ಲೆಂಡ್ ರಾಯಭಾರಿ ಪತ್ನಿ ಸಮೇತ ಭೇಟಿ ನೀಡಿ ದೇವರ ದರ್ಶನ ಪಡೆದರು. ಮುಂಬೈನಲ್ಲಿರುವ ಇಂಗ್ಲೆಂಡಿನ ಬ್ರಿಟೀಷ್ ಸರ್ಕಾರದ ಡೆಪ್ಯೂಟಿ ಕಮಿಷನರ್ ಅಲೆನ್ ಗಿಮೆಲ್ ಹಾಗೂ ಪತ್ನಿ ಮೆಟ್ಟಿಲು ಹತ್ತಿ ಅಂಜನಾದ್ರಿಯ ದರ್ಶನ ಪಡೆದರು.
Advertisement
Advertisement
ಜಿಂದಾಲ್ ಸಂಸ್ಥೆಯ ನೌಕರ ಹರಿ ಅವರು ಇಂಗ್ಲೆಂಡ್‌ನ ದಂಪತಿಯನ್ನು ದೇಗುಲಕ್ಕೆ ಕರೆತಂದು ದರ್ಶನ ಮಾಡಿಸಿದರು. ಇದಕ್ಕೂ ಮುನ್ನ ಹುಬ್ಬಳ್ಳಿ ಸಮೀಪ ಇರುವ ಗರಗದ ರಾಷ್ಟ್ರ ಧ್ವಜ ತಯಾರಿಸುವ ಘಟಕಕ್ಕೆ ಭೇಟಿ ನೀಡಿದ್ದರು. ಹೊಸಪೇಟೆ ಮತ್ತು ಜಿಂದಾಲ್ ನಲ್ಲಿರುವ ಮಹಿಳಾ ಸ್ವಸಹಾಯ ಸಂಘ ಮತ್ತು ಸಹಕಾರ ಸಂಘಗಳ ಕಾರ್ಯಚಟುವಟಿಕೆ ಅಧ್ಯಯನದ ಉದ್ದೇಶಕ್ಕೆ ಬಂದಿದ್ದಾರೆ ಎನ್ನಲಾಗಿದೆ.