-ಸಕ್ಕರೆ ನಾಡಿನ ಸಿಹಿ ಬಿಟ್ಟು, ಮೈಸೂರು ಪಾಕ್ ಸೇವಿಸ್ತಾರಾ ಅಂಬರೀಶ್?
ಬೆಂಗಳೂರು: ಮಾಜಿ ಸಚಿವ ಅಂಬರೀಶ್ ಅವರು ಹೊಸ ಗೆಟಪ್‍ನಲ್ಲಿ ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದು, ಸಕ್ಕರೆ ನಾಡಿನ ಸಿಹಿ ಬಿಟ್ಟು, ಮೈಸೂರು ಪಾಕ್ ಸವಿಯಲಿದ್ದಾರಂತೆ.
ನನಗೆ ವಯಸ್ಸಾಗಿದೆಯೆಂದು ಮಂಡ್ಯ ರಾಜಕಾರಣ ಹಾಗೂ ವಿಧಾನಸಭೆ ಚುನಾವಣೆಯಿಂದ ಹಿಂದೆ ಸರಿದಿದ್ದರು. ಆದರೆ ಈಗ ಲೋಕಸಭೆ ಚುನಾವಣೆ ಉದ್ದೇಶದಿಂದ ಮೈಸೂರು ಮತಕ್ಷೇತ್ರದ ಅಭ್ಯರ್ಥಿಯನ್ನಾಗಿ ಅಂಬರೀಶ್‍ರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ಸಿನ ಕೆಲವು ನಾಯಕರು ಲೆಕ್ಕಾಚಾರ ನಡೆದಿದೆ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ರಾಜಕೀಯ ಸತ್ವ ಪರೀಕ್ಷೆಗೆ ರೆಬೆಲ್ ಸ್ಟಾರ್ ಮುಂದಾಗಲಿದ್ದಾರೆ ಎಂದು ಅಂಬರೀಶ್ ಆಪ್ತ ವಲಯವೇ ಮಾತನಾಡಿಕೊಳ್ಳುತ್ತಿದೆ.
Advertisement
ಈಗಾಗಲೇ ಅಂಬರೀಶ್ ಕೂಡಾ ಇದರ ಸಾಧಕ ಬಾಧಕಗಳ ಬಗ್ಗೆ ತಮ್ಮ ಆಪ್ತರ ಬಳಿ ಚರ್ಚಿಸಿದ್ದಾರಂತೆ. ಎಲ್ಲಾ ಓಕೆ ಆದರೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಅಂಬರೀಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಧಮುಕೋದು ಬಹುತೇಕ ಖಚಿತ ಎಂದು ಕಾಂಗ್ರೆಸ್ ವಲಯದಲ್ಲಿ ಸುದ್ದಿಯೊಂದು ಕೇಳಿ ಬರುತ್ತಿದೆ.
Advertisement
ಇತ್ತ ಜೆಡಿಎಸ್ ನಾಯಕರು ಕೂಡಾ ಅಂಬರೀಶ್‍ಗೆ ಮಂಡ್ಯ ಲೋಕಸಭಾ ಮತಕ್ಷೇತ್ರದ ಟಿಕೆಟ್ ನೀಡುವ ಲೆಕ್ಕಾಚಾರ ಹಾಕುತ್ತಿದೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಜೆಡಿಎಸ್ ಸೇರ್ಪಡೆಗೆ ಅಂಬರೀಶ್ ಒಪ್ಪಿಕೊಂಡರೆ ಮಂಡ್ಯದಿಂದ ಅವರ ಸ್ಪರ್ಧೆ ಖಚಿತ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪಕ್ಷಕ್ಕೆ ಬರುವಂತೆ ಅಂಬರೀಶ್‍ಗೆ ಆಹ್ವಾನ ನೀಡಿದ್ದಾರಂತೆ. ಆದರೆ ಅಂಬರೀಶ್ ಮಾತ್ರ ಜೆಡಿಎಸ್ ಪಕ್ಷ ಸೇರ್ಪಡೆ ಹಾಗೂ ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತಾಗಿ ಅಂಬರೀಶ್ ಎಲ್ಲಿಯೂ ಮಾತನಾಡಿಲ್ಲ.
Advertisement
ವಿಧಾನಸಭಾ ಚುನಾವಣೆಯಂತೆ ಲೋಕಸಭೆಗೂ ಮೌನವಾಗಿಯೇ ಉಳಿಯುತ್ತಾರೆಯೇ, ಮೈಸೂರ್ ಪಾಕಿಗೆ ಕೈ ಹಾಕಿ ಬಾಯಿ ಸಿಹಿ ಮಾಡಿಕೊಳುತ್ತಾರಾ ಅಥವಾ ಸಕ್ಕರೆ ನಾಡಿನಲ್ಲಿ ತೆನೆ ಹೊತ್ತು ಜೈ ಎನ್ನುತ್ತಾರಾ ಎನ್ನುವುದು ಸದ್ಯದ ಕುತೂಹಲ ಮೂಡಿಸಿದೆ.