ಬೆಂಗಳೂರು: ನಾಡಹಬ್ಬ ದಸರಾಗೆ (Dasara) ದಿನಗಣನೆ ಆರಂಭವಾಗಿದ್ದು,ಕರ್ನಾಟಕ ರಾಜ್ಯ ಅಭಿವೃದ್ಧಿ ಪ್ರವಾಸೋದ್ಯಮ ನಿಗಮದಿಂದ(KSTDC) ಮೈಸೂರಿಗೆ ಆಗಮಿಸಿದ ಪ್ರವಾಸಿಗರಿಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.
ಈ ಬಾರಿಯ ದಸರಾದಲ್ಲಿ ಗತಕಾಲದ ಡಬ್ಬಲ್ ಡೆಕ್ಕರ್ (Double Decker) ಬಸ್ ವೈಭವ ಮರುಕಳಿಸಲಿದೆ. ಪ್ರವಾಸಿಗರು ಡಬ್ಬಲ್ ಡೆಕ್ಕರ್ ಬಸ್ ನಲ್ಲಿ ಕುಳಿತು ಮೈಸೂರಿನ (Mysuru) ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಪ್ರವಾಸಿಗರು ಬಸ್ ಮೇಲ್ಬಾಗದಲ್ಲಿ ಕುಳಿತು ಮೈಸೂರನ್ನು ಸೆರೆಹಿಡಿಯಬಹುದಾಗಿದೆ. ಈ ಬಸ್ ಹಳೆ ಡಿಸಿ ಕಚೇರಿ, ಕ್ರಾಫರ್ಡ್ ಹಾಲ್, ಓರಿಯೆಂಟಲ್ ಸೆಂಟ್ರಲ್ ಲೈಬ್ರರಿ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲೆ, ಅರಮನೆ ದಕ್ಷಿಣ ದ್ವಾರ, ಜಯಮಾರ್ತಾಂಡ ಸರ್ಕಲ್ ಗೇಟ್, ಹಾರ್ಡಿಂಜ್ ಸರ್ಕಲ್, ಕೆಆರ್ ಸರ್ಕಲ್ , ಸೈಯಾಜಿರಾವ್ ವೃತ್ತ, ಆರ್ಯುವೇದ ವೈದ್ಯಕೀಯ ಕಾಲೇಜುವರೆಗೆ ರೌಂಡ್ ಹಾಕಲಿದೆ.
Advertisement
A royal ride to explore the glory and the cultural legacy of the iconic festival Mysuru Dasara with Ambaari Double Decker Bus.
Book your ride now
To learn more, click on the linkhttps://t.co/V6Mx7CRKm9#DasaraSpecial#AmbaariDoubleDecker#Bengaluru#KSTDC#KarnatakaTourism pic.twitter.com/2WFL56WL2b
— K.S.T.D.C. (@kstdc) September 25, 2024
Advertisement
ಒಬ್ಬರಿಗೆ ಟಿಕೆಟ್ ದರ 250 ರೂ. (ಕೆಳಗಡೆ ಸೀಟ್) ಹಾಗೂ ಮೇಲ್ಬಾಗದ ಸೀಟ್‌ಗೆ ಒಬ್ಬರಿಗೆ 500 ರೂಪಾಯಿಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಚೇರ್ ಮನ್ ಶ್ರೀನಿವಾಸ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement
ಇದರ ಜೊತೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಸ್ಪೆಷಲ್ ಪ್ಯಾಕೆಜ್ ವ್ಯವಸ್ಥೆ ಮಾಡಲಾಗಿದೆ. ಮೈಸೂರಿನಿಂದ ವಿವಿಧ ಸ್ಥಳಗಳಿಗೆ ದಿನಗಳ ಆಧಾರದ ಮೇಲೆ ಟೂರ್ ಪ್ಯಾಕೆಜ್ ಇದೆ. ಜೋಗ್‌ಫಾಲ್ಸ್, ಗೋಕರ್ಣ-ಗೋವಾ, ನಂಜನಗೂಡು, ಬಂಡೀಪುರ-ಊಟಿ, ದೊಡ್ಡ ಬೆಟ್ಟ, ಶ್ರವಣಬೆಳಗೊಳ, ಬೇಲೂರು-ಹಳೇಬೀಡು, ಸೋಮನಾಥಪುರ,ಶಿವನಸುಮುದ್ರ, ತಲಕಾಡು ಮುಡುಕುತೊರೆ ಹೀಗೆ ಹಲವು ಪ್ರವಾಸಿ ತಾಣಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕೆಎಸ್‌ಟಿಡಿಸಿ ಮಾಡಿದೆ.
Advertisement