ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಸನೀಹದಲ್ಲಿದ್ದು ಎಲ್ಲ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ, ಆದ್ರೆ ಶಾಸಕ ಅಂಬರೀಶ್ ಮಾತ್ರ ಇದೂವರೆಗೂ ಮಂಡ್ಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ ನಿಂದ ಟಿಕೆಟ್ ಕನ್ಫರ್ಮ್ ಆದ್ರೆ ಮಾತ್ರ ಪ್ರಚಾರಕ್ಕೆ ಇಳಿಯುತ್ತೇನೆ ಇಲ್ಲವಾದಲ್ಲಿ ಹೋಗಲ್ಲ ಅಂತಾ ಅಂಬರೀಶ್ ಹೇಳಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿ ಗೆ ಲಭ್ಯವಾಗಿವೆ. ಇದನ್ನೂ ಓದಿ: ಮಾಜಿ ಸಚಿವ ಅಂಬರೀಶ್‍ಗೆ ಕೆ.ಸಿ ವೇಣುಗೋಪಾಲ್ ಖಡಕ್ ಸೂಚನೆ!
ಭಾನುವಾರ ಸಂಜೆಯೊಳಗಾಗಿ ನನ್ನ ಸ್ಪರ್ಧೆ ಬಗ್ಗೆ ತಿಳಿಸಿ ಅಂತಾ ಹೈಕಮಾಂಡ್ ಗೆ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. 2013ರ ಚುನಾವಣೆಯಂತೆ ಈ ಬಾರಿಯ ಮಂಡ್ಯ ಜಿಲ್ಲೆಯ ಟಿಕೆಟ್ ಹಂಚಿಕೆ ನಾನು ಹೇಳಿದಂತೆ ನಡೆಯಬೇಕು ಎನ್ನುವ ಡಿಮ್ಯಾಂಡ್ ಇಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಗೆ ಕಗ್ಗಂಟಾದ ಅಂಬರೀಶ್ ಮೌನ- `ಕೈ’ ಬಿಡ್ತಾರಾ ಮಂಡ್ಯದ ಗಂಡು!
ಇತ್ತ ಅಂಬರೀಶ್ ಮಾತನ್ನು ಒಪ್ಪಿಕೊಳ್ಳಬೇಕಾ ಅಥವಾ ಹೈಕಮಾಂಡ್ ಅನತಿಯಂತೆ ನಡೆಯಬೇಕಾ ಎಂಬ ಗೊಂದಲದಲ್ಲಿ ರಾಜ್ಯ ನಾಯಕರಿದ್ದಾರೆ ಅಂತಾ ಹೇಳಲಾಗುತ್ತಿದೆ. ಇದನ್ನೂ ಓದಿ: ಚುನಾವಣಾ ಪ್ರಚಾರದಿಂದ ದೂರ ಉಳಿದ ಮಂಡ್ಯದ ಗಂಡು-ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದ ಅಂಬಿ ನಡೆ