ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಿಂದ ದೂರ ಉಳಿದಿರುವ ರೆಬಲ್ ಸ್ಟಾರ್ ಅಂಬರೀಶ್ ಆಪ್ತ ಗೆಳೆಯ, ಬಂಧುಗಳನ್ನೆಲ್ಲಾ ಭೇಟಿ ಆಗ್ತಿದ್ದಾರೆ. ರಾಜಕೀಯದಿಂದ ದೂರ ಉಳಿದು ಸದ್ಯ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಮಡದಿ ಸುಮಲಾತಾ ಅವರಿಗೆ ಅಂಬರೀಶ್ ಸರ್ಪ್ರೈಸ್ ನೀಡಿದ್ದಾರೆ.
ಸುಮಲತಾ ಅಂಬರೀಶ್ ಸಹ ‘ತಾಯಿಗೆ ತಕ್ಕ ಮಗ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಅಂಬರೀಶ್ ದಿಡೀರ್ ಅಂತಾ ‘ತಾಯಿಗೆ ತಕ್ಕ ಮಗ’ ಸಿನಿಮಾ ಸೆಟ್ ಗೆ ತೆರಳಿ ಪತ್ನಿ ಹಾಗು ಚಿತ್ರತಂಡಕ್ಕೆ ಸರ್ಪ್ರೈಸ್ ಕೊಟ್ಟಿದ್ದಾರೆ. ಚಿತ್ರದಲ್ಲಿ ನಟ ಅಜಯ್ ರಾವ್ ತಾಯಿಯ ಪಾತ್ರದಲ್ಲಿ ಸುಮಲತಾ ಬಣ್ಣ ಹಚ್ಚಿದ್ದಾರೆ.
Advertisement
Advertisement
ಅಂಬರೀಶ್ ಭೇಟಿ ನೀಡಿರುವ ಫೋಟೋಗಳನ್ನು ಅಜಯ್ ರಾವ್ ತಮ್ಮ ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ದಿಡೀರ್ ಅಂತ ನಮ್ಮ “ತಾಯಿಗೆ ತಕ್ಕ ಮಗ” ಶೂಟಿಂಗ್ ಸೆಟ್ ಗೆ ಭೇಟಿ ನೀಡಿದ ರೆಬೆಲ್ ಸ್ಟಾರ್ !!! ತಂದೆ ತಾಯಿ ತರಹ ಇರುವ ಸುಮಾ ಅಮ್ಮ ಹಾಗೂ ಅಂಬರೀಶ್ ಅಣ್ಣನ ಪ್ರೀತಿ ಪಡೆದ ನಾನು ಧನ್ಯ ಅಂತಾ ಅಜಯ್ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಟಿ ಸುಮಲತಾ ಅಂಬರೀಶ್ ಟ್ಯಾಟೋ ಹಾಕಿಸಿಕೊಂಡ ಸ್ಯಾಂಡಲ್‍ವುಡ್ ಕೃಷ್ಣ
Advertisement
ಇತ್ತೀಚೆಗೆ ಅಂಬರೀಶ್ ಬಿಡುವಿನ ವೇಳೆಯಲ್ಲಿ ತಮ್ಮ ಕುಚುಕು ಗೆಳೆಯ ವಿಷ್ಣುವರ್ಧನ್ ಮನೆಗೆ ತೆರಳಿ ಭಾರತೀ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿದ್ರು. 2003ರಲ್ಲಿ ತೆರೆಕಂಡಿದ್ದ ಕನ್ನಡದ ಸೂಪರ್ ಹಿಟ್ `ಎಕ್ಸ್ ಕ್ಯೂಸ್ ಮಿ’ ಸಿನಿಮಾದ ಬಳಿಕ ಸುಮಲತಾ ಮತ್ತು ಅಜಯ್ ತಾಯಿ ಮಗನಾಗಿ ನಟಿಸುತ್ತಿದ್ದಾರೆ. ಶಶಾಂಕ್ ಸಿನಿಮಾಸ್ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬರುತ್ತಿದ್ದು, ನಿರ್ದೇಶಕ ವೇದಗುರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದಿನ ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣ ಲೀಲಾ ಸಿನಿಮಾಗಳೆರೆಡು ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದಿತ್ತು. ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜಯ್ ರಾವ್ ಗೆ ಜೊತೆಯಾಗಿ ಆಶಿಕಾ ರಂಗನಾಥ್ ನಟಿಸಲಿದ್ದಾರೆ.