‘ಅಮರ್’ ಸಿನಿಮಾದ ಒಂದು ಟಿಕೆಟ್‍ಗೆ 1 ಲಕ್ಷ ಕೊಟ್ಟ

Public TV
1 Min Read
AMAR TICKET

ಬೆಂಗಳೂರು: ನಟ ಅಭಿಷೇಕ್ ಅಭಿನಯದ ಚೊಚ್ಚಲ ‘ಅಮರ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಅಂಬರೀಶ್ ಮಗನ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಮಧ್ಯೆ ವ್ಯಕ್ತಿಯೊಬ್ಬರು ‘ಅಮರ’ ಸಿನಿಮಾದ ಮೊದಲ ಟಿಕೆಟ್‍ಗಾಗಿ ಬರೋಬ್ಬರಿ 1 ಲಕ್ಷ ಹಣ ನೀಡಿದ್ದಾರೆ.

ದಾವಣಗೆರೆ ಮೂಲದವರಾದ ಮಂಜುನಾಥ್ ‘ಅಮರ್’ ಸಿನಿಮಾ ಟಿಕೆಟ್‍ಗಾಗಿ 1 ಲಕ್ಷಣ ಹಣ ನೀಡಿದ್ದಾರೆ. ಇವರು ಹಿರಿಯ ನಟ ಅಂಬರೀಶ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. ಹೀಗಾಗಿ ಅವರ ಮಗ ಅಭಿಷೇಕ್ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಲು 1 ಲಕ್ಷ ಚೆಕ್ ನೀಡಿದ್ದಾರೆ. ‘ಅಮರ್’ ಸಿನಿಮಾ ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರಿಗೆ ಮಂಜುನಾಥ್ ಅವರು ಚೆಕ್ ನೀಡಿದ್ದಾರೆ.

Movie Amar gets a release date

‘ಅಮರ್’ ಸಿನಿಮಾ ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಮೂಡಿಬಂದಿದ್ದು, ಸಿನಿಮಾದಲ್ಲಿ ಅಭಿಷೇಕ್‍ಗೆ ಜೋಡಿಯಾಗಿ ನಟಿ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟ ದರ್ಶನ್ ಸಹ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೂ ‘ಅಮರ್’ ಸಿನಿಮಾ ಇದೇ ತಿಂಗಳ 30 ರಂದು ತೆರೆಗೆ ಬರಲಿದೆ.

Share This Article
Leave a Comment

Leave a Reply

Your email address will not be published. Required fields are marked *