ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರು ತಮ್ಮ ಪತ್ನಿ, ನಟಿ ಸುಮಲತಾ ಅವರ ಜೊತೆ ಈ ಮೊದಲು ಮನೆಯಲ್ಲಿ ತೆಲುಗು ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂಬರೀಶ್ ಅವರು ತಮ್ಮ ಮನೆಯಲ್ಲಿ ಸುಮಲತಾ ಅವರ ಜೊತೆ ತೆಲುಗು ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಚಿರಂಜೀವಿ ಹಾಗೂ ರೋಜ ಅಭಿನಯಿಸಿರುವ ‘ಬಿಗ್ ಬಾಸ್’ ಚಿತ್ರದ ಮಾವ ಮಾವ ಹಾಡಿಗೆ ಅಂಬಿ- ಸುಮಲತಾ ಹೆಜ್ಜೆ ಹಾಕಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಅಂಬಿ ತಮ್ಮ ಪತ್ನಿ ಫೋನ್ ನಂಬರ್ ಸೇವ್ ಮಾಡಿದ್ದು ಹೀಗೆ
ಅಂಬರೀಶ್ ಅವರು ಹೆಚ್ಚಾಗಿ ಡ್ಯಾನ್ಸ್ ಮಾಡುವುದಿಲ್ಲ. ಬಾಡಿ ಲ್ಯಾಂಗ್ವೇಜ್ ಹಾಗೂ ಎಕ್ಸ್ ಪ್ರೆಶನ್‍ನಲ್ಲೇ ಎಲ್ಲರ ಮನಸ್ಸು ಗೆಲ್ಲುತ್ತಿದ್ದರು. ಅಂಬರೀಶ್ ಹಾಗೂ ಸುಮಲತಾ ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದನ್ನು ಅವರ ಅಭಿಮಾನಿಗಳು ನೋಡಿದ್ದಾರೆ. ಆದರೆ ನಿಜ ಜೀವನದಲ್ಲಿ ಅಂಬಿ ತಮ್ಮ ಪತ್ನಿ ಸುಮಲತಾ ಅವರ ಜೊತೆ ಖುಷಿಯಿಂದ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಸದ್ಯ ಅಂಬಿ ಹಾಗೂ ಸುಮಲತಾ ಅವರ ಈ ಡ್ಯಾನ್ಸ್ ವಿಡಿಯೋ ಎಲ್ಲರ ವಾಟ್ಸಪ್ ಸ್ಟೇಟಸ್ ಆಗಿದೆ. ಕೆಲವರು ತಮ್ಮ ನೆಚ್ಚಿನ ನಾಯಕ ಅಂಬಿ ಅವರ ಡ್ಯಾನ್ಸ್ ನೋಡಿ ಖುಷಿಪಟ್ಟರೆ, ಕೆಲವರು ಅಂಬಿಯನ್ನು ನೆನೆದು ಭಾವುಕರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv