ಅಂಬಿ-ಸುಮಲತಾ ಕ್ಯೂಟ್ ಲವ್‍ಸ್ಟೋರಿ ಒಮ್ಮೆ ಓದಿ

Public TV
2 Min Read
ambi love story collage

ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರ ಪತ್ನಿ, ನಟಿ ಸುಮಲತಾ ಅವರು ತಮ್ಮ ಲವ್‍ಸ್ಟೋರಿ ಬಗ್ಗೆ ನೆನಪಿಸಿಕೊಂಡಿದ್ದಾರೆ. ಅಂಬರೀಶ್ ಅವರನ್ನು ಹೇಗೆ, ಯಾವಾಗ ಭೇಟಿಯಾಗಿದ್ದು, ಮತ್ತೆ ಪ್ರೊಪೋಸ್ ಮಾಡಿದರ ಬಗ್ಗೆ ಮಾಧ್ಯಮಕ್ಕೆ ಈ ಹಿಂದೆ ತಿಳಿಸಿದ್ದರು. ಈ ಕ್ಯೂಟ್ ಲವ್ ಸ್ಟೋರಿ ಇಲ್ಲಿದೆ.

ಶೂಟಿಂಗ್ ಸೆಟ್‍ನಲ್ಲಿ ಮೊದಲ ಭೇಟಿ:
‘ಆಹುತಿ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಾನು ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದೆ. ಶೂಟಿಂಗ್‍ಕ್ಕಿಂತ ಮೊದಲು ನಾನು ಅವರನ್ನು ಒಂದು ಕಾರ್ಯಕ್ರಮದಲ್ಲಿ ನೋಡಿದ್ದೆ, ಆದರೆ ಭೇಟಿಯಾಗಿರಲಿಲ್ಲ ಹಾಗೂ ನಾನು ಅವರ ಪರಿಚಯ ಕೂಡ ಮಾಡಿಕೊಳ್ಳಲಿಲ್ಲ. ದೂರದಿಂದ ಅವರನ್ನು ನೋಡಿದೆ. ಇವರ ಜೊತೆ ನಟಿಸಲು ನನಗೆ ತುಂಬಾನೇ ಭಯವಿತ್ತು. ಚಿತ್ರರಂಗದಲ್ಲಿ ರೂಮರ್ಸ್, ಗಾಸಿಪ್ ಎಲ್ಲರ ಬಗ್ಗೆಗೂ ಇರುತ್ತೆ. ಆದರೆ ನಾನು ಆ ಸಮಯದಲ್ಲಿ ಚಿತ್ರರಂಗಕ್ಕೆ ತುಂಬಾ ಹೊಸಬಳಾಗಿದ್ದೆ. ಹಾಗಾಗಿ ನನಗೆ ಭಯವಿತ್ತು. ಕೆಲವು ದಿನದ ಶೂಟಿಂಗ್ ನಂತರ ಸಮಯದಲ್ಲಿ ಅವರ ಬಗ್ಗೆ ಭಯಪಡುವ ಅವಶ್ಯಕತೆಯಿಲ್ಲ ಎಂದು ನನಗೆ ಸ್ಪಷ್ಟವಾಯಿತು.

ambi love story 5

ಪ್ರೊಪೊಸ್ ಹಾಗೂ ಮದುವೆ:
ನಾವು ಮೊದಲು 1984ನಲ್ಲಿ ಭೇಟಿಯಾಗಿದ್ದೇವು. ನಂತರ 1991ರಲ್ಲಿ ಮದುವೆಯಾಗಿದ್ದವು. ಆ ಮಧ್ಯೆ ಎರಡು ಮೂರು ವರ್ಷದಲ್ಲಿ ಯಾವುದೇ ಸಿನಿಮಾವನ್ನು ಮಾಡಿರಲಿಲ್ಲ. ನಾನು ಚೆನ್ನೈನಲ್ಲಿದ್ದರೆ, ಅವರು ಬೆಂಗಳೂರಿನಲ್ಲಿದ್ದರು. ಆ ಕಾಲದಲ್ಲಿ ಮೊಬೈಲ್ ಕೂಡ ಇರಲಿಲ್ಲ. ಯಾವಾಗ್ಲಾದ್ರೂ ಅವರು ಬೆಂಗಳೂರಿನಿಂದ ಚೆನ್ನೈಗೆ ಬಂದಾಗ ಫೋನ್ ಮಾಡಿ ‘ಹೌ ಆರ್ ಯೂ’ ಎಂದು ಕೇಳುತ್ತಿದ್ದರು. ನಾನು ಪಾರ್ಟಿ ಅಥವಾ ಪಕ್ಕದಲ್ಲಿ ಶೂಟಿಂಗ್ ಇದ್ದಾಗ ಹಲೋ ಎಂದು ಹೇಳುತ್ತಿದ್ದೆ. ಮೊದಲು ನಾವು ಕ್ಲೋಸ್ ಆಗಿರಲಿಲ್ಲ. ನಿಧಾನಕ್ಕೆ ಕ್ಲೋಸ್ ಆಗುತ್ತಾ ಬಂದಿದ್ದೇವೆ. ಇವರು ಫ್ರೆಂಡ್ಲಿ ಹಾಗೂ ಓಪನ್ ಹಾರ್ಟೆಡ್ ಪರ್ಸನ್ ಎಂದು ನನಗೆ ಅರ್ಥವಾಯಿತು. ಇಂತಹ ವ್ಯಕ್ತಿತ್ವ ಇರುವ ವ್ಯಕ್ತಿಯನ್ನು ಚಿತ್ರರಂಗದಲ್ಲಿ ನೋಡುವುದು ಅಪರೂಪ ಎನ್ನಿಸಿತ್ತು. ಹಾಗಾಗಿ ನಾನು ಅವರನ್ನು ಇಷ್ಟಪಟ್ಟಿದ್ದೇನೆ.

ambi love story 2

ಎಲ್ಲ ವಿಷಯದಲ್ಲೂ ನಾನು ಹಾಗೂ ಅಂಬರೀಶ್ ವಿರುದ್ಧ ಸ್ವಭಾವದವರು. ನಾನು ಯಾರ ಜೊತೆಯೂ ಮಿಂಗಲ್ ಆಗುತ್ತಿರಲಿಲ್ಲ ಆದರೆ ಅವರು ಶೂಟಿಂಗ್ ಸೆಟ್‍ಗೆ ಬಂದಾಗ ಅದೆಲ್ಲಾ ಬದಲಾಗುತ್ತಿತ್ತು. ನಾನು ಸ್ನೇಹಿತರ ಜೊತೆ ಓಪನ್ ಆಗ್ತೀನೇ ಹೊರತು ಹೊರಗಡೆ ಜನರಿಗೆ ನಾನು ಏನೂ ಎಂಬುದು ಗೊತ್ತಿಲ್ಲ. ಪ್ರೀತಿ ಇಷ್ಟು ದಿನದ್ದು ಎಂದು ಹೇಳಲು ಸಾಧ್ಯವಿಲ್ಲ. ನಾವು ಎಂಟು ಹತ್ತು ಚಿತ್ರ ಒಟ್ಟಿಗೆ ಮಾಡಿದ್ದೇವೆ. ನ್ಯೂಡೆಲ್ಲಿ ನಂತರ ನಾವು ಹತ್ತಿರವಾಗಿ ಮಾತಾಡುತ್ತಿದ್ದೀವಿ. ಆಗ ಒಂದರೆಡು ವರ್ಷ ಬಿಟ್ಟು ಮದುವೆಯಾಗೋಣ ಎಂದು ನಿರ್ಧರಿಸಿದ್ವಿ. ಆದರೆ ಪ್ರೊಪ್ರೋಸ್ ಮಾಡಿದ್ದು ನನಗೆ ನೆನಪಿಲ್ಲ.

ambi love story 4

ಅಂಬಿ ಮನೆಯವರು ಒಪ್ಪಿದ್ದು ಹೇಗೆ:
ನಮ್ಮ ಮದುವೆಯಾದಾಗ ಅವರಿಗೆ 39 ವರ್ಷವಾಗಿತ್ತು. ಒಮ್ಮೆ ಮದುವೆಯಾಗಲಿ. ಇವರು ಮದುವೆಯಾದರೆ ಸಾಕು ಎಂದು ಅವರ ತಾಯಿ ಹೇಳುತ್ತಿದ್ದರು. ನಮಗೆ ಗಂಡು ಮಗು ಆಗುತ್ತೆ ಎಂದು ಅವರ ತಾಯಿ ಹೇಳುತ್ತಿದ್ದರು. ಅಂಬರೀಶ್ ಮಗುವನ್ನು ನೋಡಿದ ಮೇಲೆ ನಾನು ನಿಧನರಾಗಬೇಕು ಎಂದು ಅವರ ತಾಯಿಯ ಆಸೆ ಆಗಿತ್ತು. ಕೊನೆಗೆ ಅದೇ ರೀತಿ ಆಯಿತು ಎಂದು ಸುಮಲತಾ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *