ನಟ ಅಂಬರೀಶ್ ಪುಣ್ಯಸ್ಮರಣೆ (Ambareesh 6th Death Anniversary) ಪ್ರಯುಕ್ತ ಸುಮಲತಾ (Sumalatha) ಅವರು ಪತಿಯನ್ನು ನೆನೆದು ಎಲ್ಲೆಲ್ಲಿಯೂ ನೀನೇ.. ಎಂದೆಂದಿಗೂ ನೀನೇ ಎಂದು ಇನ್ಸ್ಟಾಗ್ರಾಮ್‍ನಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಆಗಮಿಸಿ ಅಂಬಿ ಸ್ಮಾರಕಕ್ಕೆ ಅವರು ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ಮಾತಾಡಿದ ಸುಮಲತಾ ಅವರು, ಅಂಬಿ ನೆನಪು ಎಲ್ಲಾ ಕಡೆ ಇರುತ್ತೆ. ಎಷ್ಟೋ ವರ್ಷದಿಂದ ಕಾಯ್ತಿದ್ದ, ಮರಿ ರೆಬೆಲ್ ಸ್ಟಾರ್ ಆಗಮನದಿಂದ ಸಂತೋಷ ಗೊಂಡಿದ್ದೇವೆ. ತಾಯಿ ಮಗು ಆರೋಗ್ಯವಾಗಿದ್ದಾರೆ. ಅಭಿಯಂತೂ ಒಂದು ಕ್ಷಣವೂ ಮಗುನಾ ಬಿಟ್ಟು ಇರಲ್ಲ ಎಂದಿದ್ದಾರೆ.
ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ಉಪ ಚುನಾವಣೆಯಲ್ಲಿ ರೂಲಿಂಗ್ ಪಾರ್ಟಿ ಗೆಲ್ಲುವುದನ್ನು ನೋಡುತ್ತ ಬಂದಿದ್ದೇವೆ. ಯಾವುದೇ ಪಾರ್ಟಿ ಇರಲಿ ಗೆಲ್ಲಬೇಕು ಎಂಬ ಉದ್ದೇಶ ಇಟ್ಟುಕೊಂಡು ಹೋರಾಡ್ತಾರೆ. ನಿಖಿಲ್ ಸೋಲಿನ ಬಗ್ಗೆ ನಾನೇನು ಹೇಳಲ್ಲ. ಅವರು ಇನ್ನೂ ಯುವಕರಿದ್ದಾರೆ, ಒಳ್ಳೆಯ ಭವಿಷ್ಯ ಇದೆ ಎಂದಿದ್ದಾರೆ.
ಅಂಬರೀಶ್ ಸ್ಮಾರಕಕ್ಕೆ ಪೂಜೆ ಸಲ್ಲಿಸುವ ವೇಳೆ ನಟ ದೊಡ್ಡಣ್ಣ ಹಾಗೂ ರಾಕ್‍ಲೈನ್ ವೆಂಕಟೇಶ್ ಅವರು ಸುಮಲತಾ ಅವರಿಗೆ ಸಾಥ್ ಕೊಟ್ಟಿದ್ದಾರೆ.