ಹೆಸರಾಂತ ಉದ್ಯಮಿ, ಶ್ರೀಮಂತ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ವಿವಾಹ ಲಂಡನ್ ನಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಲಂಡನ್ ನ ಪ್ರತಿಷ್ಠಿತ ಸ್ಟೋಕ್ ಪಾರ್ಕ್ ಎಸ್ಟೇಟ್ ಅನ್ನು ಮದುವೆಗಾಗಿ (Wedding) ಆಯ್ಕೆ ಮಾಡಲಾಗಿದೆ ಎನ್ನುವ ಸುದ್ದಿಯೂ ಜೋರಾಗಿ ಕೇಳಿ ಬಂದಿತ್ತು. ಆದರೆ, ಲಂಡನ್ ಬದಲಾಗಿ ಭಾರತದಲ್ಲೇ ಮಗನ ಮದುವೆ ಮಾಡಲು ಮುಖೇಶ್ ಅಂಬಾನಿ ನಿರ್ಧಾರ ಮಾಡಿದ್ದಾರೆ.
Advertisement
ಸ್ಟೋಕ್ ಪಾರ್ಕ್ ಅನ್ನು ಬ್ರಿಟನ್ ನ ಐಕಾನಿಕ್ ಕಂಟ್ರಿ ಕ್ಲಬ್ ಮತ್ತು ಐಷಾರಾಮಿ ಗಾಲ್ಫ್ ರೆಸಾರ್ಟ್ ಪಾರ್ಕನ್ನು ಮಖೇಶ್ ಒಡೆತನದ ರಿಲಯನ್ಸ್ ಇಂಡಸ್ಟ್ರಿಯು 592 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿ ಮಾಡಿದೆ. ಅದೇ ಪಾರ್ಕ್ ನಲ್ಲೇ ಮಗನ ಮದುವೆ ಮಾಡಲಿದ್ದಾರೆ ಎಂದು ವರದಿಯಾಗಿತ್ತು.
Advertisement
Advertisement
ಈ ಸ್ಟೋಕ್ ಪಾರ್ಕ್ 49 ಐಷಾರಾಮಿ ಬೆಡ್ ರೂಮ್ ಹೊಂದಿರುವ ಹೋಟೆಲ್ ಕೂಡ ಆಗಿದ್ದು, 14 ಎಕರೆ ಜಾಗವನ್ನು ಹೊಂದಿದೆ. ರಾಣಿ ಎಲಿಜಬೆತ್ 1 ಇದೇ ಜಾಗದಲ್ಲಿ ವಾಸವಿದ್ದರೂ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಜಾಗಕ್ಕೆ ಅಷ್ಟೊಂದು ಮಹತ್ವ ಬಂದಿದೆ. ಈ ಜಾಗದಲ್ಲೇ ಅಂಬಾನಿ ಪುತ್ರನ ವಿವಾಹವನ್ನು ಅದ್ಧೂರಿಯಾಗಿ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
Advertisement
ಇತ್ತೀಚೆಗಷ್ಟೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಜೋಡಿಯ ಮದುವೆ ಪೂರ್ವ ಕಾರ್ಯಗಳು ಅದ್ಧೂರಿಯಾಗಿ ನಡೆದಿವೆ. ಗುಜರಾತ್ ನ ಜಾಮ್ ನಗರದಲ್ಲಿ ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮಕ್ಕೆ ಅಂದಾಜು 1200 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಜಗತ್ತಿನ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆಗೂ ಕೂಡ ಅನೇಕರು ಭಾಗಿ ಆಗುವ ಸಾಧ್ಯತೆ ಇದೆ. ಈ ಮದುವೆ ಮುಂಬೈನಲ್ಲಿ (Mumbai) ನಡೆಯಲಿದೆ.