ನವದೆಹಲಿ: ಪ್ರೀತಿಸಲು ಒಬ್ಬ ಪ್ರಿಯತಮ ಬೇಕೆಂದು ಆನ್‍ಲೈನ್ ಶಾಪಿಂಗ್ ತಾಣ ಅಮೆಜಾನ್ ಕಂಪೆನಿಗೆ ಯುವತಿಯೊಬ್ಬಳು ವಿಚಿತ್ರ ಬೇಡಿಕೆ ಸಲ್ಲಿಸಿದ್ದಾಳೆ.
ಅಮೆಜಾನ್ ಟ್ವಿಟ್ಟರ್ ಖಾತೆಗೆ ಟ್ವೀಟ್ ಮಾಡಿದ ಯುವತಿ, ನಿಮ್ಮ ಸಂಸ್ಥೆಯನ್ನು ವಿಶ್ವದ ಇ-ಮಾರುಕಟ್ಟೆಯ ದೊಡ್ಡ ಕಂಪೆನಿ ಎಂದು ಕರೆಯಲ್ಪಡುತ್ತಿದೆ. ಆದರೆ ಹಲವು ಗಂಟೆಗಳಿಂದ ನಾನು ನಿಮ್ಮ ವೆಬ್ ಸೈಟ್‍ನಲ್ಲಿ ಪರಿಶೀಲನೆ ನಡೆಸುತ್ತಿದ್ದರೂ ನನಗೆ ಬೇಕಾದ ವಸ್ತು ದೊರೆಯುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಳು.
Advertisement
Advertisement
ಗ್ರಾಹಕರ ಮನವಿಗೆ ತಕ್ಷಣ ಪ್ರತಿಕ್ರಿಯೆ ನೀಡಿದ ಅಮೆಜಾನ್ ನಾವು ಸಂಸ್ಥೆಯ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಸತತವಾಗಿ ಕ್ರಿಯಾಶೀಲರಾಗಿದ್ದೇವೆ, ನಿಮಗೇ ಬೇಕಾದ ಉತ್ಪನ್ನ ಯಾವುದು ಎಂದು ತಿಳಿದುಕೊಳ್ಳಬಹುದೇ ಎಂದು ಪ್ರಶ್ನಿಸಿದೆ.
Advertisement
ಈ ವೇಳೆ ಸಂಸ್ಥೆಗೆ ಉತ್ತರಿಸಿದ ಯುವತಿ, ತನಗೆ ಪ್ರೀತಿಸಲು ಒಬ್ಬ ಪ್ರಿಯತಮ ಬೇಕೆಂದು ಬೇಡಿಕೆ ಇಟ್ಟಿದ್ದಾಳೆ. ಯುವತಿಯ ಈ ಅಚ್ಚರಿ ಬೇಡಿಕೆಗೆ ಸಂಸ್ಥೆಯೂ ಸಹ ವಿಚಲಿತವಾಗದೆ ಉತ್ತರಿಸಿದ್ದು, ಬಾಲಿವುಡ್ ನ ಪ್ರಸಿದ್ಧ ಹಾಡೊಂದನ್ನು ಮರುಟ್ವೀಟ್ ಮಾಡಿ ಉತ್ತರಿಸಿದೆ.
Advertisement
We're actively working towards understanding the needs of our customers and plan to expand our listings. Could you let us know the product that you're looking for on our website? ^KA
— Amazon Help (@AmazonHelp) April 20, 2018
ಅಮೆಜಾನ್ ರೊನಿತ್ ರಾಯ್ ಅಭಿನಯದ ‘ಜಾನ್ ತೇರೆ ನಾಮ್’ ಹಾಡಿನ ‘ಯೇ ಅಖಾ ಇಂಡಿಯಾ ಜಾನತಾ ಹೈ, ಹಮ್ ತುಮ್ಪೆ ಮರ್ತೆ ಹೈ, ದಿಲ್ ಕ್ಯಾ ಚೀಜ್ ಹೈ ಜಾನಮ್, ಅಪನಿ ಜಾನ್ ತೇರೆ ನಾಮ್ ಕರ್ತಾ ಹೈ’ (ಇದು ಇಡೀ ಇಂಡಿಯಾಗೆ ಗೊತ್ತಿದೆ, ನಾವು ನಿಮಗಾಗಿ ಸಾಯಲು ಸಹ ಸಿದ್ಧನಿದ್ದೇನೆ. ಅಂತಹದರಲ್ಲಿ ಈ ಹೃದಯ ಏನು ದೊಡ್ಡ ವಸ್ತು, ನನ್ನ ಪ್ರಾಣವನ್ನೆ ನಿಮ್ಮ ಹೆಸರಿಗೆ ಸೀಮಿತ) ಎಂಬ ಸಾಲುಗಳನ್ನು ಟ್ವೀಟ್ ಮಾಡಿ ಟಕ್ಕರ್ ನೀಡಿದೆ.
ಸದ್ಯ ಅಮೆಜಾನ್ ಸಂಸ್ಥೆ ತನ್ನನ್ನು ಕಾಲೆಳೆಯಲು ಬಂದ ಯುವತಿಗೆ ನೀಡಿದ ಉತ್ತರಕ್ಕೆ ಟ್ವಿಟ್ಟಿಗರು ತಮ್ಮದೇ ಪ್ರತಿಕ್ರಿಯೆ ನೀಡಿ ಮರುಟ್ವೀಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಶೇರುದಾರರಿಗೆ ಬರೆದ ಪತ್ರದಲ್ಲಿ 7 ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ ಜೆಫ್ ಬೆಜೊಸ್
https://youtu.be/qf0T8yUCqyo