ವಾಷಿಂಗ್ಟನ್: ಆನ್‌ಲೈನ್‌ನಲ್ಲಿ ಶೂಗಳನ್ನು ಕೊಳ್ಳುವಾಗ ಎಲ್ಲರಿಗೂ ಒಂದು ಭಯ ಇರುತ್ತದೆ. ಶೂಗಳು ತಮ್ಮ ಪಾದಕ್ಕೆ ಹೊಂದಿಕೆಯಾಗುತ್ತೋ ಇಲ್ಲವೋ ಎಂದುಕೊಂಡ ಬಳಿಕ ಇಷ್ಟವಾಗದೇ ಹೋದರೆ ಅದನ್ನು ವಾಪಸ್ ಕಳುಹಿಸುವ ಜಂಜಾಟವೂ ಇರುತ್ತೆ. ಆದರೆ ಅಮೆಜಾನ್‌ನ ಹೊಸದೊಂದು ಫೀಚರ್ ಈ ಎಲ್ಲಾ ಸಮಸ್ಯೆಗೂ ಪರಿಹಾರವಾಗಿದೆ.
ಅಮೆಜಾನ್ ಹೊಸದಾಗಿ ಗ್ರಾಹಕರಿಗೆ ಶೂಗಳನ್ನು ವರ್ಚುವಲ್ ಆಗಿ ಟ್ರೈ ಮಾಡುವಂತಹ ಫೀಚರ್ ಅನ್ನು ಪರಿಚಯಿಸಿದೆ. ಇದರ ಮೂಲಕ ಗ್ರಾಹಕರು ಶೂಗಳನ್ನು ಕೊಳ್ಳುವುದಕ್ಕೂ ಮೊದಲು ವರ್ಚುವಲ್ ಆಗಿ ಕಾಲಿನಲ್ಲಿ ಹೇಗೆ ಹೊಂದಿಕೆಯಾಗುತ್ತದೆ ಎಂಬುದನ್ನು ಪರೀಕ್ಷಿಸಬಹುದು. ಈ ಮೂಲಕ ಶೂಗಳನ್ನು ಕೊಳ್ಳುವಾಗ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗಲಿದೆ. ಇದನ್ನೂ ಓದಿ: ರಷ್ಯಾದಲ್ಲಿ ಉದ್ಯೋಗಿಗಳ ವಜಾ, ಕೆಲಸವನ್ನು ಸ್ಥಗಿತಗೊಳಿಸಿದ ಐಬಿಎಂ
Advertisement
Advertisement
ಅಮೆಜಾನ್‌ನ ಹೊಸ ವರ್ಚುವಲ್ ಟ್ರೈ-ಆನ್ ಫೀಚರ್ ಸಹಾಯದಿಂದ ಗ್ರಾಹಕರು ತಮ್ಮ ಮೊಬೈಲಿನಲ್ಲಿಯೇ ಶೂ ಪಾದಗಳಲ್ಲಿ ಹೇಗೆ ಕಾಣಿಸುತ್ತದೆ ಎಂಬುದನ್ನು ನೋಡಬಹುದು. ವರ್ಚುವಲ್ ಟ್ರೈ-ಆನ್ ಬಟನ್ ಟ್ಯಾಪ್ ಮಾಡಿದಾಗ ನಿಮ್ಮ ಫೋನ್ ಕ್ಯಾಮೆರಾ ಆನ್ ಆಗುತ್ತದೆ. ಅದನ್ನು ನಿಮ್ಮ ಕಾಲಿಗೆ ಪಾಯಿಂಟ್ ಮಾಡಿದಾಗ ನೀವು ಆಯ್ಕೆ ಮಾಡಿದ ಶೂಗಳು ಸ್ಕ್ರೀನ್‌ನಲ್ಲಿ ಕಾಲುಗಳಲ್ಲಿ ಹೇಗೆ ತೋರುತ್ತದೆ ಎಂಬುದನ್ನು ನೋಡಬಹುದು. ಬಳಕೆದಾರರು ತಮ್ಮ ಪಾದವನ್ನು ಬೇರೆ ಬೇರೆ ಕಡೆಗೆ ತಿರುಗಿಸುವುದರ ಮೂಲಕ ಶೂಗಳು ಬೇರೆ ಬೇರೆ ಆ್ಯಂಗಲ್‌ನಿಂದ ಹೇಗೆ ಕಾಣಿಸುತ್ತವೆ ಎಂಬುದನ್ನೂ ನೋಡಬಹುದು. ಇದನ್ನೂ ಓದಿ: ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಎಲ್ಲದಕ್ಕೂ ಇನ್ಮುಂದೆ ಒಂದೇ ಚಾರ್ಜರ್!
Advertisement
Advertisement
ಸದ್ಯ ಅಮೆಜಾನ್‌ನ ಈ ಹೊಸ ಫೀಚರ್ ಅಮೆರಿಕ ಹಾಗೂ ಕೆನಡಾದಲ್ಲಿ ಮಾತ್ರವೇ ಲಭ್ಯವಿದ್ದು, ಐಒಎಸ್ ಬಳಕೆದಾರರು ಮಾತ್ರವೇ ಇದನ್ನು ಪರಿಶೀಲಿಸಬಹುದು. ಈ ಫೀಚರ್ ಜಾಗತಿಕವಾಗಿ ಲಭ್ಯವಾದಲ್ಲಿ, ಶೂ ಕೊಳ್ಳುವಾಗ ಎಲ್ಲಾ ಗ್ರಾಹಕರು ಎದುರಿಸುವ ಸಮಸ್ಯೆಗಳಿಗೆ ಕಡಿವಾಣ ಬೀಳುತ್ತೋ ಎಂಬುದನ್ನು ಕಾದು ನೋಡಬೇಕಿದೆ.