ವಾಷಿಂಗ್ಟನ್: ಇ-ಕಾಮರ್ಸ್ ಕಂಪನಿ ಅಮೆಜಾನ್ (Amazon) ತನ್ನ ಉದ್ಯೋಗಿಗಳಿಗೆ (Employees) ಆಘಾತಕರ ಸುದ್ದಿ ನೀಡಿದೆ. ಕಂಪನಿ ಬರೋಬ್ಬರಿ 18,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ (Layoff) ತಿಳಿಸಿದೆ.
ಕಂಪನಿ ಕಳೆದ ವರ್ಷ ನವೆಂಬರ್‌ನಲ್ಲಿ ತನ್ನ ಸುಮಾರು 10,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ತಿಳಿಸಿತ್ತು. ಆದರೆ ಈ ಹಿಂದೆ ಯೋಜಿಸಿದಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗುತ್ತಿದೆ.
Advertisement
Advertisement
ಅನಿಶ್ಚಿತ ಆರ್ಥಿಕತೆ ಹಾಗೂ ಕೋವಿಡ್ ಸಂದರ್ಭದಲ್ಲಿ ಮಾಡಿಕೊಂಡಿದ್ದ ಅಧಿಕ ನೇಮಕಾತಿ ಅಂಶವನ್ನು ಉಲ್ಲೇಖಿಸಿ ಅಮೆಜಾನ್ ಉದ್ಯೋಗಿಗಳ ವಜಾ ನಿರ್ಧಾರವನ್ನು ಕೈಗೊಂಡಿದೆ. ನವೆಂಬರ್‌ನಲ್ಲಿ ಮಾಡಿಕೊಂಡಿದ್ದ ಕಡತವನ್ನು ಇಂದು ನಾವು ಹಂಚಿಕೊಳ್ಳುತ್ತಿದ್ದೇವೆ, ಕಂಪನಿಯಿಂದ 18,000 ಉದ್ಯೋಗಿಗಳನ್ನು ತೆಗೆದುಹಾಕುತ್ತಿದ್ದೇವೆ ಎಂದು ಸಿಇಒ ಆಂಡಿ ಜಾಸ್ಸಿ ಬುಧವಾರ ತಿಳಿಸಿರುವುದಾಗಿ ವರದಿಯಾಗಿದೆ.
Advertisement
ಉದ್ಯೋಗಿಗಳನ್ನು ತೆಗೆದುಹಾಕುತ್ತಿರುವ ನಿರ್ಧಾರ ಅವರನ್ನು ಕಷ್ಟಕ್ಕೆ ದೂಡುತ್ತದೆ ಎಂಬುದು ನಮಗೆ ತಿಳಿದಿದೆ. ಆದರೆ ನಾವು ಈ ಪ್ರಕ್ರಿಯೆಯನ್ನು ಲಘುವಾಗಿ ತಗೆದುಕೊಳ್ಳುತ್ತಿಲ್ಲ. ನಾವು ವಜಾಗೊಳಿಸುತ್ತಿರುವವರಿಗೆ ಬೆಂಬಲ ನೀಡುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಅವರಿಗೆ ಪ್ರತ್ಯೇಕ ಪಾವತಿ, ಆರೋಗ್ಯ ವಿಮೆಯ ಪ್ರಯೋಜನಗಳು, ಬಾಹ್ಯ ಉದ್ಯೋಗ ನಿಯೋಜನೆಗೆ ಬೆಂಬಲ ನೀಡುವ ಪ್ಯಾಕೇಜ್ ಅನ್ನು ಒದಗಿಸುವುದಾಗಿ ಜಾಸ್ಸಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ವಜ್ರ ಬಸ್ ಪ್ರಯಾಣಿಕರಿಗೆ ಶಾಕ್ – ದರ ಹೆಚ್ಚಳ
Advertisement
ವಜಾಗೊಳ್ಳುತ್ತಿರುವ ಹೆಚ್ಚಿನ ಉದ್ಯೋಗಿಗಳು ಯುರೋಪ್‌ನವರಾಗಿದ್ದಾರೆ. ಜನವರಿ 18ರಂದು ವಜಾಗೊಳ್ಳುತ್ತಿರುವವರಿಗೆ ಈ ಬಗ್ಗೆ ತಿಳಿಸಲಿದ್ದೇವೆ. ನಮ್ಮ ತಂಡದ ಸದಸ್ಯರೊಬ್ಬರು ಈ ಬಗ್ಗೆ ಮಾಹಿತಿ ಸೋರಿಕೆ ಮಾಡಿರುವುದರಿಂದ ಈ ವಿಚಾರವನ್ನು ಹಠಾತ್ತನೆ ಘೋಷಣೆ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.
2020ರ ಆರಂಭದಿಂದ 2022ರ ಆರಂಭದ ನಡುವೆ ಅಮೆಜಾನ್ ತನ್ನ ಉದ್ಯೋಗಿಳನ್ನು ಜಾಗತಿಕವಾಗಿ ದ್ವಿಗುಣಗೊಳಿಸಿತ್ತು. ಕೋವಿಡ್ ಸಂದರ್ಭದಲ್ಲಿ ವಿತರಕರ ಬೇಡಿಕೆ ಹೆಚ್ಚಿದ್ದರಿಂದ ಇದನ್ನು ಪೂರೈಸಲು ಚಿಲ್ಲರೆ ವ್ಯಾಪಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಂಡಿತ್ತು. ಕಂಪನಿ ಸೆಪ್ಟೆಂಬರ್ ಅಂತ್ಯದ ವೇಳೆಗೆ 15.40 ಲಕ್ಷ ಉದ್ಯೋಗಿಗಳನ್ನು ಹೊಂದಿತ್ತು. ಇದನ್ನೂ ಓದಿ: 1,337 ಕೋಟಿ ಪೈಕಿ ಶೇ.10 ರಷ್ಟು ದಂಡವನ್ನು ಠೇವಣಿ ಇಡಿ – ಗೂಗಲ್‌ಗೆ NCALT ಆದೇಶ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k