ವಾಷಿಂಗ್ಟನ್: ಇ-ಕಾಮರ್ಸ್ ದೈತ್ಯ ಅಮೆಜಾನ್ (Amazon) ಈ ವರ್ಷದ 2ನೇ ಸುತ್ತಿನ ಉದ್ಯೋಗಿಗಳ ಕಡಿತವನ್ನು ಘೋಷಿಸಿದೆ. ಕಳೆದ ಬಾರಿ 18,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದ ಅಮೆಜಾನ್ ಈ ಬಾರಿ 9,000 ಉದ್ಯೋಗಿಗಳನ್ನು (Employees) ವಜಾಗೊಳಿಸುವುದಾಗಿ (Layoffs) ಹೇಳಿದೆ.
ಅಮೆಜಾನ್ ಸಿಇಒ ಆಂಡಿ ಜಾಸ್ಸಿ ತನ್ನ ಉದ್ಯೋಗಿಗಳಿಗೆ ಪತ್ರ ಬರೆದು, ವಜಾಗೊಳಿಸುತ್ತಿರುವ ಬಗ್ಗೆ ತಿಳಿಸಿದ್ದಾರೆ. ಈ ಮೂಲಕ ಕಳೆದ 3 ತಿಂಗಳುಗಳಿಂದ ಕಂಪನಿ 27,000ಕ್ಕೂ ಅಧಿಕ ಉದ್ಯೋಗಿಗಳನ್ನು ಕಡಿತಗೊಳಿಸುತ್ತಿದೆ. ಇದು ಕಂಪನಿಯ ಇತಿಹಾಸದಲ್ಲೇ ಅತಿ ದೊಡ್ಡ ವಜಾ ಆಗಿದೆ.
Advertisement
Advertisement
ಅನಿಶ್ಚಿತ ಆರ್ಥಿಕತೆ ಹಾಗೂ ಭವಿಷ್ಯದ ಕಾರಣದಿಂದ ಕಂಪನಿ ತನ್ನ ವೆಚ್ಚಗಳನ್ನು ಹೆಚ್ಚು ಸುವ್ಯವಸ್ಥಿತವಾಗಿಡಲು ಯೋಜಿಸುತ್ತಿದೆ. ಇದರ ಪರಿಣಾಮವಾಗಿ ಕಂಪನಿಯ ಕೆಲ ಸ್ಥಾನಗಳನ್ನು ತೆಗೆದುಹಾಕಲಾಗುತ್ತಿದೆ. ಈ ಹಿಂದೆ ಘೋಷಿಸಲಾಗಿದ್ದ 18,000 ಉದ್ಯೋಗಿಗಳ ವಜಾದೊಂದಿಗೆ 9,000 ಉದ್ಯೋಗಿಗಳ ಕಡಿತವನ್ನೂ ಮಾಡಲಾಗುತ್ತಿದೆ ಎಂದು ಆಂಡಿ ಜಾಸ್ಸಿ ತಮ್ಮ ಉದ್ಯೋಗಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಐಫೋನ್ ತಯಾರಿಸುವ ಫಾಕ್ಸ್‌ಕಾನ್ ಸೇರಿ 18 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ
Advertisement
ವಜಾಗೊಳ್ಳುತ್ತಿರುವ ಉದ್ಯೋಗಿಗಳಿಗಾಗಿ ಕಂಪನಿ ಪಾವತಿ, ಆರೋಗ್ಯ ವಿಮೆಯ ಪ್ರಯೋಜನ ಹಾಗೂ ಬಾಹ್ಯ ಉದ್ಯೋಗ ನಿಯೋಜನೆಗೆ ಬೆಂಬಲ ಸೇರಿದಂತೆ ಹಲವು ಭರವಸೆಗಳನ್ನೂ ನೀಡಲಾಗಿದೆ. ಆದರೆ ಇತ್ತೀಚೆಗೆ ವಿಶ್ವದ ಜನಪ್ರಿಯ ಬೃಹತ್ ಕಂಪನಿಗಳು ಈ ರೀತಿ ಉದ್ಯೋಗ ಕಡಿತಗಳನ್ನು ನಡೆಸುತ್ತಿರುವುದು ಭಾರೀ ಆತಂಕ ಮೂಡಿಸುತ್ತಿದೆ.
Advertisement
2022ರಲ್ಲಿ 11,000 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಫೇಸ್‌ಬುಕ್ ಕಳೆದ ವಾರವಷ್ಟೇ ಮತ್ತೆ 10,000 ಸಿಬ್ಬಂದಿಯನ್ನು ತೆಗೆದುಹಾಕುವುದಾಗಿ ಹೇಳಿದೆ. ಈ ಮೂಲಕ ಫೇಸ್‌ಬುಕ್ 2ನೇ ಸುತ್ತಿನ ವಜಾಗೆ ಕೈ ಹಾಕಿದ್ದು, ಅಮೆಜಾನ್ ಕೂಡಾ ಇಂತಹದ್ದೇ ತೀರ್ಮಾನಕ್ಕೆ ಬಂದಿದೆ. ಇದನ್ನೂ ಓದಿ: Breaking- ಉರಿಗೌಡ ನಂಜೇಗೌಡ ಬಗ್ಗೆ ಟ್ವೀಟ್: ನಟ ಚೇತನ್ ಬಂಧನ