ವಾಷಿಂಗ್ಟನ್: ಫ್ರಿಡ್ಜ್ ಒಳಗಡೆ ವಸ್ತುಗಳು ಕೆಲವೊಮ್ಮೆ ಖಾಲಿಯಾಗುತ್ತಿದ್ದರೂ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ಹೀಗೆ ವಸ್ತುಗಳು ಖಾಲಿಯಾಗುತ್ತಿದ್ದಂತೆ “ವಸ್ತುಗಳು ಕಡಿಮೆ ಆಗುತ್ತಿದೆ. ಖರೀದಿಸುವುದು ಒಳ್ಳೆಯದು” ಎಂಬ ಸಂದೇಶ ಬರಬೇಕು ಎಂದು ನೀವು ಕಲ್ಪನೆ ಮಾಡುತ್ತಿದ್ದರೆ ನಿಮ್ಮ ಕಲ್ಪನೆ ಮುಂದಿನ ದಿನಗಳಲ್ಲಿ ನಿಜವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಆನ್‌ಲೈನ್ ಶಾಪಿಂಗ್ ದೈತ್ಯ ಅಮೆಜಾನ್ ಈಗ ʼಸ್ಮಾರ್ಟ್ ಫ್ರಿಡ್ಜ್ʼ ನಿರ್ಮಾಣಕ್ಕೆ ಕೈ ಹಾಕಿದೆ. ಫ್ರಿಡ್ಜ್‌ನಲ್ಲಿರುವ ವಸ್ತುಗಳು ಖಾಲಿಯಾದರೆ ಅಥವಾ ಕಡಿಮೆ ಆಗುತ್ತಿದ್ದರೆ ನೋಟಿಫಿಕೇಶನ್ ಬರುವಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ.
Advertisement
Advertisement
ಕಳೆದ 2 ವರ್ಷಗಳಿಂದ ಕಂಪನಿ ಈ ಫ್ರಿಡ್ಜ್ ಅಭಿವೃದ್ಧಿ ಪಡಿಸುತ್ತಿದೆ ಎಂದು ವರದಿಯಾಗಿದೆ. ಒಟ್ಟು ಈ ಸ್ಮಾರ್ಟ್ ಫ್ರಿಡ್ಜ್ ಯೋಜನೆಗೆ 50 ದಶಲಕ್ಷ ಡಾಲರ್(ಅಂದಾಜು 374 ಕೋಟಿ ರೂ.) ಹೂಡಿಕೆ ಮಾಡಿದೆ. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ಜೀವನಾಂಶ ಪಡೆದ ಅಮೆಜಾನ್ ಸಂಸ್ಥಾಪಕನ ಪತ್ನಿ
Advertisement
ಗ್ರಾಹಕ ಏನು ಖರೀದಿಸಿದ್ದಾನೆ? ಖರೀದಿಸಿದ ವಸ್ತುಗಳು ಎಷ್ಟು ಪ್ರಮಾಣದಲ್ಲಿ ಖಾಲಿಯಾಗಿದೆ? ನೀವು ಆಗಾಗ ಖರೀದಿಸುವ ಯಾವುದಾದರೂ ವಸ್ತು ಕಡಿಮೆ ಖರೀದಿಸಿದರೆ ಸೂಚನೆ ನೀಡುತ್ತದೆ. ವಸ್ತುವಿನ ಅವಧಿ ಮುಕ್ತಾಯಗೊಳ್ಳುತ್ತಿದ್ದರೂ ಗ್ರಾಹಕರಿಗೆ ಆ ಮಾಹಿತಿಯನ್ನು ಸಹ ನೀಡಲಿದೆ.
Advertisement
ಈ ಫ್ರಿಡ್ಜ್‌ಗೆ ವಾಯ್ಸ್ ಅಸಿಸ್ಟೆಂಟ್ ಸಹ ಇರಲಿದೆ. ಫ್ರಿಡ್ಜ್ ಒಳಗಡೆ ಇರುವ ವಸ್ತುಗಳನ್ನು ನೋಡಿ ಯಾವ ಆಡುಗೆ ಮಾಡಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ಸಹ ನೀಡಲಿದೆ.
ತನ್ನ ಕಿರಾಣಿ ವ್ಯಾಪಾರ ಹೆಚ್ಚಿಸಲು ಅಮೆಜಾನ್ ಈ ಸಾಹಸಕ್ಕೆ ಕೈ ಹಾಕಿದೆ. ಈ ಫ್ರಿಡ್ಜ್ ಬಿಡುಗಡೆಯಾದರೆ ಬೆಲೆ ಬಹಳ ದುಬಾರಿ ಇರಲಿದೆ. ಹೀಗಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದರ ಬಗ್ಗೆ ಅನುಮಾನವಿದೆ ಎಂದು ವರದಿಯಾಗಿದೆ.