ಲಂಡನ್: ಆನ್‍ಲೈನ್ ಮಾರುಕಟ್ಟೆಯಲ್ಲಿ ಅಮೆಜಾನ್ ತನ್ನದೇ ಆದ ಚಾಪನ್ನು ವಿಶ್ವದಾದ್ಯಂತ ಮೂಡಿಸಿದೆ. ಆದ್ರೂ ಕೆಲವೊಂದು ಬಾರಿ ಎಡವಟ್ಟುಗಳು ಆಗುತ್ತಿರುತ್ತವೆ. ಇತ್ತೀಚೆಗೆ ಗ್ರಾಹಕರೊಬ್ಬರಿಗೆ ಅಮೇಜಾನ್ ಮೂತ್ರ ತುಂಬಿದ ಬಾಟಲ್ ಕಳುಹಿಸಿದೆ.
30 ವರ್ಷದ ಗ್ರಾಹಕರೊಬ್ಬರು ಅಮೇಜಾನ್ ನಲ್ಲಿ 65 ಪೌಂಡ್ (5,875 ರೂ.ಬೆಲೆಯ) ವಸ್ತುವೊಂದನ್ನು ಆನ್‍ಲೈನ್ ನಲ್ಲಿ ಬುಕ್ ಮಾಡಿದ್ರು. ಆದ್ರೆ ಮನೆಗೆ ಡ್ಯಾಮೇಜ್ ಆಗಿರುವ ಬಾಕ್ಸ್ ನಲ್ಲಿ ಮೂತ್ರ ತುಂಬಿದ ಬಾಟಲ್ ಕಳುಹಿಸಲಾಗಿದೆ. ನನಗೆ ಬಂದ ಬಾಕ್ಸ್ ತೆರೆದು ನೋಡಿದಾಗ ಬಾಟಲ್ ಇತ್ತು. ಬಾಟಲ್ ನಲ್ಲಿ ಏನಿದೆ ನೋಡಿದಾಗ ಅದರಲ್ಲಿ ಮೂತ್ರವನ್ನು ತುಂಬಲಾಗಿತ್ತು. ತುಂಬಾ ಕೆಟ್ಟ ವಾಸನೆಯನ್ನು ಹೊಂದಿದ್ದು, ನಾನು ಪದೇ ಪದೇ ನನ್ನ ಕೈಗೊಳನ್ನು ಶುಚಿ ಮಾಡಿಕೊಂಡಿದ್ದೇನೆ ಎಂದು ಗ್ರಾಹಕ ಹೇಳುತ್ತಾರೆ.
Advertisement
Advertisement
ಈ ಬಗ್ಗೆ ಗ್ರಾಹಕ ಅಮೆಜಾನ್ ಗೆ ಫೇಸ್‍ಬುಕ್ ನಲ್ಲಿ ದೂರು ಸಲ್ಲಿಸಿದ್ದಾರೆ. ಗ್ರಾಹಕರಿಗೆ ವಸ್ತು ಖರೀದಿಸಿದ ಹಣದ ಜೊತೆಗೆ 150 ಪೌಂಡ್ (13,600 ರೂ.) ಬೆಲೆಯ ವೋಚರ್ ಸಹ ನೀಡಲಾಗಿದೆ. ಈ ವಿಚಾರ ಗಂಭೀರವಾದದ್ದು, ಇದರ ಕುರಿತು ತನಿಖೆ ನಡೆಸಲಾಗುವುದು. ದೂರು ನೀಡುವ ಮೂಲಕ ನಮ್ಮನ್ನು ಎಚ್ಚರಿಸಿದಕ್ಕೆ ಧನ್ಯವಾದಗಳು ಎಂದು ಅಮೆಜಾನ್ ತಿಳಿಸಿದೆ.
Advertisement
ಡಿಸೆಂಬರ್ ನಲ್ಲಿ ಅಮೆಜಾನ್ ನಲ್ಲಿ ಕಾರ್ಯ ನಿರ್ವಹಿಸುವ ಚಾಲಕರು ಸಮಯದ ಅಭಾವದಿಂದಾಗಿ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ವಿಸರ್ಜನೆ ಮಾಡ್ತಾರೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಇಂಗ್ಲೆಂಡ್ ನಲ್ಲಿ ವಾಹನ ಚಾಲಕರು 11 ಗಂಟೆಗಿಂತಲೂ ಹೆಚ್ಚಿಗೆ ಕೆಲಸ ಮಾಡಬಾರದು ಎಂಬ ಕಾನೂನು ಇದ್ರೂ ಅಮೆಜಾನ್ ನೌಕರರು ಹೆಚ್ಚು ಅವಧಿ ಕೆಲಸ ಮಾಡ್ತಾರೆ ಎಂದು ವರದಿಯಾಗಿದೆ.