Districts
ರಸ್ತೆ ಮಧ್ಯೆ ಗುಂಡಿಯಿಂದ ಹೊರಬಂದ ಹೆಬ್ಬಾವು!

ಮೈಸೂರು: ರಸ್ತೆ ಮಧ್ಯೆ ನಿರ್ಮಾಣವಾಗಿದ್ದ ಗುಂಡಿ ಕುರಿತು ಅಧಿಕಾರಿಗಳ ಗಮನ ಸೆಳೆಯಲು ಕಲಾವಿದರೊಬ್ಬರು ಹೆಬ್ಬಾವಿನ ಚಿತ್ರ ಬಿಡಿಸಿ ಜಾಗೃತಿ ಮೂಡಿಸಿದ್ದಾರೆ.
ನಗರದ ಸಿದ್ದಪ್ಪ ವೃತ್ತದ ಬಳಿ ಹಲವಾರು ದಿನಗಳಿಂದ ರಸ್ತೆ ಮಧ್ಯೆ ಬಾಯಿ ತೆರೆದಿದ್ದ ಹಳ್ಳದ ಕುರಿತು ಯಾವುದೇ ಅಧಿಕಾರಿಗಳು ಕ್ರಮಕೈಗೊಂಡಿರಲಿಲ್ಲ. ರಸ್ತೆ ಮಧ್ಯೆ ಇದ್ದ ಗುಂಡಿಯಿಂದ ವಾಹನ ಸವಾರರು ಸೇರಿದಂತೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಕಂಡ ಕಲಾವಿದ ಬಾದಲ್ ತಮ್ಮ ಕೈಚಳಕದಿಂದ ಎಲ್ಲರ ಗಮನ ಸೆಳೆಯುವಂತೆ ಮಾಡಲು ಯಶಸ್ವಿಯಾಗಿದ್ದಾರೆ.
ಕಲಾವಿದ ಬಾದಲ್ ರಸ್ತೆ ಮಧ್ಯೆಯ ಗುಂಡಿಯ ಸುತ್ತಲು ಮರದ ಕೊಂಬೆಗಳನ್ನ ಇಟ್ಟು ಮಧ್ಯಭಾಗದಲ್ಲಿ ಹೆಬ್ಬಾವು ಹೊರಬರುತ್ತಿರುವಂತೆ ಸೃಷ್ಟಿಸಿದ್ದಾರೆ. ಬಾದಲ್ ಈ ಚಿತ್ರ ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾದಲ್ ರ ಕೈಚಳಕದ ಫೋಟೋ ವೈರಲ್ ಆಗುತ್ತಿದಂತೆ ಎಚ್ಚೆತ್ತ ಟ್ರಾಫಿಕ್ ಪೊಲೀಸರು ರಸ್ತೆ ಮಧ್ಯೆ ಬ್ಯಾರಿಕೇಡ್ ಇರಿಸಿದ್ದಾರೆ.
ನಗರದ ಪ್ರಮುಖ ರಸ್ತೆಯಾದರು ಕೂಡ ಅಪಾಯದಿಂದ ಕೂಡಿದ್ದ ಗುಂಡಿಯನ್ನು ಮುಚ್ಚಲು ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳು ಬಾದಲ್‍ರ ಈ ಎಚ್ಚರಿಕೆ ಕರೆಯಿಂದ ಎಚ್ಚೆತ್ತುಕೊಂಡಿದ್ದಾರೆ. ಸದ್ಯ ಬಾದಲ್‍ರ ಈ ಕಾರ್ಯಕ್ಕೆ ಸಾಮಾಜಿಕ ಜಾತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
