ಶ್ರೀನಗರ: ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಮರನಾಥ್ ಯಾತ್ರೆಯನ್ನು (Amarnath Yatra) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳು ರದ್ದಾಗಿವೆ. ಇದರಿಂದ ಎರಡೂ ಮಾರ್ಗಗಳಲ್ಲಿ ಯಾತ್ರೆ ಸ್ಥಗಿತಗೊಂಡಿದೆ. ಬುಧವಾರ ನಿರ್ವಹಣಾ ಕಾರ್ಯಕ್ಕಾಗಿ ಪಹಲ್ಗಾಮ್ ಮಾರ್ಗವನ್ನು ಮುಚ್ಚಲಾಗಿತ್ತು. ಇದನ್ನೂ ಓದಿ: ನಿಮ್ಮನ್ನು ದೇಶದೊಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ: ಗಡಿಯಲ್ಲಿ ಬಾಂಗ್ಲಾ ನಿರಾಶ್ರಿತರನ್ನು ತಡೆದ ಸೇನೆ
- Advertisement -
- Advertisement -
ಭಾನುವಾರ ಅಮರನಾಥ ಯಾತ್ರೆಯ ಪಹಲ್ಗಾಮ್ ಮತ್ತು ಬಲ್ಟಾಲ್ ಮಾರ್ಗಗಳಲ್ಲಿ ಭಾರೀ ಮಳೆ ಸುರಿದಿದೆ ಎಂದು ಕಾಶ್ಮೀರದ ವಿಭಾಗೀಯ ಆಯುಕ್ತ ವಿ ಕೆ ಭಿದುರಿ ಹೇಳಿದ್ದಾರೆ. ಮಳೆಯ ಕಾರಣ, ಅಮರನಾಥ ಯಾತ್ರೆಯ ಬಾಲ್ಟಾಲ್ ಅಕ್ಷದ ಮೇಲೆ ತುರ್ತು ದುರಸ್ತಿ ಮತ್ತು ನಿರ್ವಹಣಾ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ಯಾತ್ರಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಸೋಮವಾರ ಬಾಲ್ಟಾಲ್ ಮಾರ್ಗದಿಂದ ಯಾವುದೇ ಯಾತ್ರೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
- Advertisement -
- Advertisement -
ಈ ವರ್ಷ ಇದುವರೆಗೆ 3,880 ಮೀಟರ್ ಎತ್ತರದ ಗುಹಾ ದೇಗುಲದಲ್ಲಿ 5.10 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಶಿವನ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಇದು ಮೋದಿ ಭಾರತ, ಬಾಂಗ್ಲಾದೇಶದಂತಹ ಪರಿಸ್ಥಿತಿ ಉಂಟಾಗಲ್ಲ; ಕಾಂಗ್ರೆಸ್‌ಗೆ ಶೇಖಾವತ್ ತಿರುಗೇಟು