2 ವರ್ಷದ ನಂತರ ಆರಂಭವಾಗಲಿದೆ ಅಮರನಾಥ ಯಾತ್ರೆ – ಸೈನಿಕರಿಗೆ ಹೈಟೆಕ್ ಗ್ಯಾಜೆಟ್ ವಿತರಣೆ

Public TV
1 Min Read
amarnath yatra

ಶ್ರೀನಗರ: ಪವಿತ್ರ ಅಮರನಾಥ ವಾರ್ಷಿಕ ಯಾತ್ರೆ ಪ್ರಾರಂಭಿಸಲು ತಯಾರಿ ನಡೆಯುತ್ತಿದೆ. ಈ ನಡುವೆ ಬಾಂಬ್ ಬೆದರಿಕೆಗಳು ಹೆಚ್ಚಿದ್ದು, ಇದಕ್ಕಾಗಿ ಭದ್ರತಾ ಪಡೆಗಳು ಮೊದಲ ಬಾರಿಗೆ ಹೈಟೆಕ್ ಗ್ಯಾಜೆಟ್‌ಗಳನ್ನು ಬಳಸಲಿದ್ದಾರೆ.

2 ವರ್ಷಗಳ ಕೋವಿಡ್ ಸಂಕಷ್ಟದ ಬಳಿಕ ಜೂನ್ 30 ರಿಂದ ಭಕ್ತರಿಗೆ ಗುಹೆಯ ಒಳಗಡೆ ಇರುವ ಶಿವಲಿಂಗವನ್ನು ವೀಕ್ಷಿಸಬಹುದು. ಈ ಹಿನ್ನೆಲೆ ಹೆಚ್ಚಿನ ಭದ್ರತೆಗಾಗಿ ಭದ್ರತಾ ಪಡೆಗಳು ವಿಶೇಷ ಗ್ಯಾಜೆಟ್‌ಗಳನ್ನು ಬಳಕೆ ಮಾಡಲು ತರಬೇತಿ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 3 ನಂಬರ್‌ನಿಂದ ನನಗೆ ಕಿರಿಕಿರಿ, ಧಮ್ಕಿ, ಬೆದರಿಕೆ ಕರೆಗಳು ಬರುತ್ತಿದೆ: ಮುತಾಲಿಕ್

Jammu and Kashmir Amarnath Yatra

ಈ ಗ್ಯಾಜೆಟ್‌ಗಳಲ್ಲಿ ಕೆಲವನ್ನು ಇಸ್ರೆಲ್‌ನಲ್ಲಿ ತಯಾರಿಸಲಾಗಿದೆ. ತೀರ್ಥಯಾತ್ರೆಯ ಸಮಯ ಕಣ್ಗಾವಲಿಗೆ ಡ್ರೋನ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಅದರಲ್ಲೂ 50ಕ್ಕೂ ಹೆಚ್ಚು ಡ್ರೋನ್‌ಗಳನ್ನು ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳಲ್ಲಿ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಹನಗಳಿಗೆ ಜೋಡಿಸಬಹುದಾದ ಹಾಗೂ ರಿಮೋಟ್ ಮೂಲಕ ಸ್ಫೋಟಿಸಬಹದಾದ ಸ್ಟಿಕ್ಕಿ ಬಾಂಬುಗಳ ಬೆದರಿಕೆಗಳು ಹೆಚ್ಚಿದ್ದು, ಕಳವಳ ವ್ಯಕ್ತಪಡಿಸಿರುವ ಅಧಿಕಾರಿಗಳು, ಸೇನೆ, ಸಿಆರ್‌ಪಿಎಫ್, ಜಮ್ಮು ಮತ್ತು ಕಾಶ್ಮೀರ ಆಡಳಿತ ಹಾಗೂ ಅಮರನಾಥ ದೇಗುಲ ಮಂಡಳಿಯ ಸದಸ್ಯರು ಸೇರಿದಂತೆ ಎಲ್ಲಾ ಪಡೆಗಳಲ್ಲಿ ಮೊದಲ ಬಾರಿಗೆ ಸಂಯೋಜಿತ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಮ್ಮುವಿನಲ್ಲಿ ಪಾಕಿಸ್ತಾನಿ ಡ್ರೋನ್ ಪತ್ತೆ

amarnath yatra kashmir

ಅಮರನಾಥ ಯಾತ್ರೆಯ ಆನ್‌ಲೈನ್ ನೋಂದಣಿ ಏಪ್ರಿಲ್ 11 ರಂದು ಪ್ರಾರಂಭವಾಗಿದೆ. ತೀರ್ಥಯಾತ್ರೆ ಜೂನ್ 30 ರಿಂದ ಆಗಸ್ಟ್ 11ರ ವರೆಗೆ 43 ದಿನಗಳ ಕಾಲ ನಡೆಯಲಿದೆ.

Share This Article