ಶ್ರೀನಗರ: ಅಮರನಾಥ ಯಾತ್ರೆಗೆ (Amarnath Yatra) ಹೊರಟಿದ್ದ ಯಾತ್ರಾರ್ಥಿಯೊಬ್ಬರು 300 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ (Jammu Kashmir) ಪೊಲೀಸರು ತಿಳಿಸಿದ್ದಾರೆ.
50 ವರ್ಷದ ಯಾತ್ರಾರ್ಥಿಯೊಬ್ಬರು ಶುಕ್ರವಾರ ತಡರಾತ್ರಿ ಪವಿತ್ರ ಅಮರನಾಥ ಗುಹೆಯಿಂದ ಹಿಂತಿರುಗುತ್ತಿದ್ದಾಗ ಕಾಳಿಮಾತಾ ಬಳಿ ಜಾರಿ 300 ಅಡಿ ಕೆಳಗೆ ಬಿದ್ದಿದ್ದರಿಂದ ಸಾವನ್ನಪ್ಪಿದ್ದಾರೆ. ಮೃತರನ್ನು ವಿಜಯ್ ಕುಮಾರ್ ಶಾ ಎಂದು ಗುರುತಿಸಲಾಗಿದ್ದು, ಬಿಹಾರದ ರೋಹ್ತಾಸ್ ಜಿಲ್ಲೆಯ ತುಂಬ ಗ್ರಾಮದ ನಿವಾಸಿ. ಇದನ್ನೂ ಓದಿ: 7 ಶಿಶುಗಳನ್ನ ಹತ್ಯೆ ಮಾಡಿದ್ದ ಬ್ರಿಟಿಷ್ ನರ್ಸ್ – ಭಾರತೀಯ ಮೂಲದ ವೈದ್ಯನಿಂದ ಸಿಕ್ಕಿಬಿದ್ದಳು ಹಂತಕಿ
ವಿಜಯ್ ಕುಮಾರ್ ಶಾ ಮತ್ತೊಬ್ಬರು ಯಾತ್ರಾರ್ಥಿ ಮಮತಾ ಕುಮಾರಿಯೊಂದಿಗೆ ಪವಿತ್ರ ಗುಹೆಯಿಂದ ಹಿಂತಿರುಗುತ್ತಿದ್ದಾಗ ಕಾಳಿಮಾತೆಯ ಬಳಿ ಕಾಲು ಜಾರಿ 300 ಅಡಿ ಕೆಳಗೆ ಬಿದ್ದಿದ್ದಾರೆ. ಯಾತ್ರಾರ್ಥಿಯನ್ನು ಮೌಂಟೇನ್ ಪಾರುಗಾಣಿಕಾ ತಂಡ ಮತ್ತು ಭಾರತೀಯ ಸೇನೆ ಜಂಟಿಯಾಗಿ ರಕ್ಷಿಸಿತ್ತು. ಆದರೂ ಯಾತ್ರಾರ್ಥಿ ಬದುಕುಳಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಉರಿವ ಕೆಂಡದ ಮೇಲೆ ನಡೆದು ಏಕಾಗ್ರತೆಯ ತರಬೇತಿ ಪಡೆದ ಬಾಂಗ್ಲಾ ಸ್ಟಾರ್ ಕ್ರಿಕೆಟಿಗ
Web Stories