ಚಂಡೀಗಢ: ದೇಶಾದ್ಯಂತ ಜನರು ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಕಳೆದುಕೊಂಡಿದ್ದಾರೆ. ಇದರಿಂದಾಗಿ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಗಾಂಧಿ ಕುಟುಂಬವೇ ಸಂಪೂರ್ಣ ಹೊಣೆಗಾರರು ಎಂದು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮೊದಲು ಅಸಮರ್ಥ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ರಾಜ್ಯ ಮುಖ್ಯಸ್ಥರನ್ನಾಗಿ ಹಾಗೂ ಭ್ರಷ್ಟ ಚರಣ್‍ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿತ್ತು. ಆ ದಿನವೇ ಕಾಂಗ್ರೆಸ್ ತನ್ನ ಸಮಾಧಿಯನ್ನು ತಾನೇ ತೋಡಿಕೊಂಡಿತು ಎಂದು ಟೀಕಿಸಿದರು.
Advertisement
Advertisement
ಕಾಂಗ್ರೆಸ್ ಪಂಜಾಬ್ ಮಾತ್ರವಲ್ಲದೆ ಉತ್ತರಪ್ರದೇಶ, ಉತ್ತರಖಂಡ, ಗೋವಾ ಮತ್ತು ಮಣಿಪುರದಲ್ಲಿಯೂ ಹೀನಾಯ ಸೋಲನುಭವಿಸಿದೆ. ಅವರು ತಮ್ಮ ಸ್ವಂತ ಪ್ರಮಾದಗಳನ್ನು ಒಪ್ಪಿಕೊಳ್ಳುವ ಬದಲು ಪಂಜಾಬ್‍ನ ಸೋಲಿನ ಹೊಣೆಯನ್ನು ನನ್ನ ಮೇಲೆ ಹಾಕಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು.
Advertisement
ಹಿರಿಯ ಕಾಂಗ್ರೆಸ್ಸಿಗರು ಆಂತರಿಕ ಕಲಹ ಮತ್ತು ಸಿಧು ಅವರ ಪಕ್ಷ ವಿರೋಧಿ ಹೇಳಿಕೆಗಳನ್ನು ದೂಷಿಸಿದ್ದಾರೆ. ಪ್ರಸ್ತುತ ವ್ಯವಸ್ಥೆಯಲ್ಲಿ ಕಾಂಗ್ರೆಸ್‍ಗೆ ಭವಿಷ್ಯವಿಲ್ಲ ಎಂದರು. ಇದನ್ನೂ ಓದಿ: ‘ಕಾಪಾಡಿ ಕಾಪಾಡಿ’ ಎನ್ನುತ್ತ ಜನರ ಕಣ್ಣೆದುರೇ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟ ಯುವಕರು
Advertisement
ಕಳೆದ ವರ್ಷ ಮುಖ್ಯಮಂತ್ರಿಯಾಗಿ ಪದಚ್ಯುತಗೊಂಡ ನಂತರ, ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದು ತಮ್ಮದೇ ಆದ ಪಂಜಾಬ್ ಲೋಕ ಕಾಂಗ್ರೆಸ್ ಅನ್ನು ಪ್ರಾರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ನಡೆಸಿದ ಪಂಚ ರಾಜ್ಯಗಳಲ್ಲಿ ಪಕ್ಷದ ಸೋಲಿನ ಅವಲೋಕನ ಸಭೆಯಲ್ಲಿ ಪಂಜಾಬ್ ಸೋಲಿಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾರಣ ಎಂದು ದೂಷಿಸಿತ್ತು. ಇದನ್ನೂ ಓದಿ: ಕಬಡ್ಡಿ ಪಂದ್ಯದ ವೇಳೆಯೇ ಅಂತರರಾಷ್ಟ್ರೀಯ ಆಟಗಾರನನ್ನು ಗುಂಡಿಕ್ಕಿ ಹತ್ಯೆ
ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ 117 ಕ್ಷೇತ್ರದಲ್ಲಿ ಕಾಂಗ್ರೆಸ್ ಕೇವಲ 18 ಸ್ಥಾನಗಳನ್ನು ಪಡೆದಿದ್ದು, ಆಮ್ ಆದ್ಮಿ ಪಕ್ಷ 92 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ,