ಬಾಗಲಕೋಟೆಯಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಸಂಭ್ರಮ

Public TV
1 Min Read
bgk amara shilpi

ಬಾಗಲಕೋಟೆ: ಮುರನಾಳ ಪುನರ್ವಸತಿ ಕೇಂದ್ರದಲ್ಲಿನ ಗ್ರಾಮದೇವತೆ ದೇವಸ್ಥಾನದ ಆವರಣದಲ್ಲಿ ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ದಿ ಸಂಘದಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಆಚರಿಸಲಾಯಿತು.

ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಗಂಗಾಧರ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಲ್ಪಶಾಸ್ತ್ರದ ಅಧಿಪತಿ ಶಿಲ್ಪಮಹರ್ಷಿ ಜಕ್ಕಣಾಚಾರಿ ವಿಶ್ವಕರ್ಮ ಸಮಾಜದ ದೃವ ನಕ್ಷತ್ರ. ಅಮರಶಿಲ್ಪಿ ಜಕಣಾಚಾರಿ ಜಗತ್ತಿನ ಶಿಲ್ಪಕಲೆ ಬ್ರಹ್ಮ ಇದ್ದಂತೆ. ಜಗತ್ತಿನಲ್ಲಿ ಭಕ್ತಿಯ ಬೀಜ ಬಿತ್ತಿದ್ದು ಅಮರಶಿಲ್ಪಿ, ಶಿಲ್ಪವೆಂದರೆ ಸಂಕಲ್ಪ ಪ್ರೇರಿತ ಆಲೋಚನೆ. ಜ್ಞಾನ, ಭಾವನೆ ಇತ್ಯಾದಿಗಳನ್ನು ಒಳಗೊಂಡ ತಪಸ್ಸಿನಿಂದಾದ ಶಿಲ್ಪ ನೋಡುಗನಲ್ಲಿ ಸೌಂದರ್ಯ ಆರಾಧಾನ ಪ್ರಜ್ಞೆಯನ್ನು ಹೆಚ್ಚಿಸುತ್ತದೆ ಎಂದು ಹಾಡಿ ಹೊಗಳಿದರು.

ಶಿಲ್ಪ ಕಲೆ ನೋಡುಗರಲ್ಲಿ ಸಮಾಧಾನ ಮತ್ತು ಆನಂದ ಕರುಣಿಸುತ್ತದೆ. ಸತ್ಯಂ ಶಿವಂ ಸುಂದರಂ ಎಂಬ ಭಾವನೆಯನ್ನು ನೋಡುಗನ ಮನಸ್ಸಿನಲ್ಲಿ ಬಿಂಬಿಸುತ್ತದೆ. ಆದ್ದರಿಂದ ಶಿಲ್ಪವು ಅತ್ಯಂತ ಪೂಜ್ಯನೀಯವಾಗಿರುತ್ತದೆ. ಇಂಥ ಶಿಲ್ಪಗಳ ಬ್ರಹ್ಮ ಅಮರಶಿಲ್ಪಿ ಜಕಣಾಚಾರಿ ಆಗಿದ್ದರೆಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಾಗಲಕೋಟೆಯ ವಿಶ್ವಕರ್ಮ ವಿದ್ಯಾ ವಿಕಾಸ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಈರಣ್ಣ ಪತ್ತಾರ ಬೇವೂರ ಅವರು ಆಗಮಿಸಿದ್ದರು. ಹಾಗೆಯೇ ವಿಶ್ವಕರ್ಮ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *