ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambareesh) ಪುತ್ರ ಅಭಿಷೇಕ್ (Abhishek) ಅವರು ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಪುಟ್ಟ ಕಂದಮ್ಮನ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ನಡುವೆ ಅಭಿಷೇಕ್ ಪತ್ನಿ ಅವಿವ (Aviva) ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಉಪ್ಪಿ ಅಣ್ಣನ ಮಗ ನಿರಂಜನ್‌ಗೆ ಅರ್ಜುನ್ ಸರ್ಜಾ ಆ್ಯಕ್ಷನ್ ಕಟ್
ತಾಯ್ತನದ ಕಳೆ ಅವಿವಗೆ ಎದ್ದು ಕಾಣುತ್ತಿದೆ. ಪಿಂಕ್ ಬಣ್ಣದ ಸೀರೆಯುಟ್ಟು ಅವಿವ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಬೇಬಿ ಬಂಪ್ ಫೋಟೋಗೆ ಯಂಗ್ ಜ್ಯೂ.ರೆಬೆಲ್ ಸ್ಟಾರ್ ಮನೆಗೆ ಬರಲಿದ್ದಾರೆ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.
View this post on Instagram
ಕಳೆದ ತಿಂಗಳು ಅವಿವಗೆ ಸೀಮಂತ ಶಾಸ್ತ್ರ ಮಾಡಲಾಯಿತು. ಹಸಿರು ಬಣ್ಣದ ಸೀರೆಯುಟ್ಟು ಅಭಿಷೇಕ್ ಪತ್ನಿ ಮುದ್ದಾಗಿ ಕಾಣಿಸಿಕೊಂಡಿದ್ದರು. ಇನ್ನೂ ಬೆಂಗಳೂರಿನ ಸುಮಲತಾ ನಿವಾಸದಲ್ಲಿಯೇ ನಡೆದ ಈ ಸೀಮಂತ ಸಂಭ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಸರಳವಾಗಿ ಜರುಗಿದ ಈ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.
ಅಂದಹಾಗೆ, ಹಲವು ವರ್ಷಗಳಿಂದ ಅವಿವ ಮತ್ತು ಅಭಿಷೇಕ್ ಪ್ರೀತಿಸುತ್ತಿದ್ದರು. ಕಳೆದ ವರ್ಷ ಜೂನ್ 5ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.