ಚೆನ್ನೈ: ಹೆಬ್ಬುಲಿ ಬೆಡಗಿ ನಟಿ ಅಮಲಾ ಪೌಲ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಟಾಪ್‍ಲೆಸ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ನಟಿ ಅಮಲಾ ಸದ್ಯಕ್ಕೆ ಚಿತ್ರದಿಂದ ಬ್ರೇಕ್ ತೆಗೆದುಕೊಂಡಿದ್ದು, ಇಂಡೋನೇಷ್ಯಾದ ಬಾಲಿಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೆ ಅಲ್ಲಿ ಸೆರೆ ಹಿಡಿದ ಫೋಟೋಗಳನ್ನೆಲ್ಲಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಅವರು ಟಾಪ್‍ಲೆಸ್ ಫೋಟೋ ಹಂಚಿಕೊಂಡಿದ್ದು, ಇದೀಗ ಅದು ವೈರಲ್ ಆಗುತ್ತಿದೆ.
ಅಮಲಾ ತಮ್ಮ ಇನ್‍ಸ್ಟಾದಲ್ಲಿ ಬಾತ್‍ಟಬ್‍ನಲ್ಲಿ ಅರೆ ನಗ್ನವಾಗಿರುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಈ ಫೋಟೋ 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಜೊತೆಗೆ ಸಾವಿರಾರು ಮಂದಿ ಕಮೆಂಟ್ ಮಾಡುವ ಮೂಲಕ ಹಾಟಾಗಿ ಕಾಣುತ್ತಿದ್ದೀರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ತಮಿಳಿನ ‘ಅದಾಯಿ’ ಚಿತ್ರಕ್ಕಾಗಿ ಅಮಲಾ ಪೌಲ್ ಸಂಪೂರ್ಣ ಬೆತ್ತಲಾಗಿದ್ದರು. ಸಿನಿಮಾಕ್ಕಾಗಿ ಬೆತ್ತಲಾಗಿದ್ದ ಅಮಲಾ ಈಗ ನಿಜಜೀವನದಲ್ಲಿ ಟಾಪ್‍ಲೆಸ್ ಫೋಟೋ ಹಂಚಿಕೊಂಡಿದ್ದಾರೆ. ಫೋಟೋ ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸದ್ಯಕ್ಕೆ ಅಮಲಾ ತಮಿಳಿನಲ್ಲಿ ಎರಡು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಹಿಂದಿಯ `ಲಸ್ಟ್ ಸ್ಟೋರಿಸ್’ ರಿಮೇಕ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.