– ಕಾಂಗ್ರೆಸ್‌ಗೆ ವೋಟ್ ಹಾಕಿದ್ದಕ್ಕೆ ದೇವರ ಮುಂದೆ ನಿಂತು ಕಣ್ಣೀರು ಹಾಕಿ
ವಿಜಯಪುರ: ನಾನು ರಾಜಕಾರಣ ಮಾತನಾಡಲ್ಲ, ಮೋದಿಗಾಗಿ ಮಾತ್ರ ರಾಜಕಾರಣ ಮಾತನಾಡಿದ್ದೇನೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ತಿಳಿಸಿದರು.
ವಿಜಯಪುರದಲ್ಲಿ (Vijayapura) ಮಾತನಾಡಿದ ಅವರು, ಈಗ ಕಾಂಗ್ರೆಸ್‌ಗೆ ವೋಟು ಹಾಕಿದ್ದಕ್ಕೆ ದೇವರ ಮುಂದೆ ನಿಂತು ಕಣ್ಣೀರು ಹಾಕಿ ಎಂದು ಹೇಳಿದರು. ಇದನ್ನೂ ಓದಿ: ಅತ್ಯಾಚಾರ ಕೇಸ್- ಶಾಸಕ ಮುನಿರತ್ನಗೆ ಜಾಮೀನು
ಗಲಭೆ ಮಾಡಿದವರನ್ನ ಪೊಲೀಸರು ಬಂಧಿಸಿದಾಗ, ಸಚಿವರೇ.. ‘ಅವರು ಅಮಾಯಕರು ಬಿಡಿ’ ಎಂದು ಪತ್ರ ಬರೆಯುತ್ತಾರೆ. ಜ್ಞಾನ ದೇಗುಲ ಹೆಸರು, ಕಾಲೇಜುಗಳಲ್ಲಿ ಸರಸ್ವತಿ ಪೂಜೆ ನಿಲ್ಲಿಸಿದ್ರು ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು.
ಇಂದು ವಕ್ಫ್ ಬೋರ್ಡ್‌ಗೆ ಯುವಕರು ಕಳೆದುಕೊಂಡರೆ, ನಾಳೆ ತಲೆ ತಗ್ಗಿಸಿಕೊಂಡು ನಮ್ಮ ಭೂಮಿಯನ್ನ ಕೊಡಬೇಕಾಗುತ್ತೆ. ನಾಳೆ ನಮ್ಮದೇ ಹಿಂದೂಗಳು, ಇಷ್ಟು ಭೂಮಿ ಕೊಟ್ಟರೆ ಏನಾಗುತ್ತೆ ಕೊಡಿ ಎನ್ನುತ್ತಾರೆ. ಈಗ ಹೋರಾಡುವ ಸಮಯ ಎಂದು ಎಚ್ಚರಿಸಿದರು. ಇದನ್ನೂ ಓದಿ: ಪರಿಶಿಷ್ಟ ಪಂಗಡಗಳ ಜಾತಿ ಪ್ರಮಾಣಪತ್ರ ಗೊಂದಲ ನಿವಾರಣೆಗೆ ಕ್ರಮ: ಸಿದ್ದರಾಮಯ್ಯ
ವಿಜಯಪುರದಲ್ಲಿ ಅತಿ ಹೆಚ್ಚು ಸ್ಲೀಪರ್ ಸೆಲ್‌ಗಳಿದ್ದಾರೆ. ಇಲ್ಲಿಯೆ ಕುಂತು ಮಾಹಿತಿ ಕೊಡ್ತಾರೆ. ವಕ್ಫ್ ಬೋರ್ಡ್ ಹೋರಾಟ ವಿಜಯಪುರದ ಹೋರಾಟ ಅಲ್ಲ, ತಮಿಳುನಾಡಿನಿಂದ ಶುರುವಾಗಿದೆ. ಇಸ್ಲಾಂ ಧರ್ಮ ಹುಟ್ಟಿಯೇ ಇರಲಿಲ್ಲ, ಆಗ ಹಿಂದೂ ದೇಗುಲಗಳಲ್ಲಿ ಗಂಟೆ, ಜಾಗಟೆ ಸದ್ದು ಕೇಳ್ತಿದ್ವು ಎಂದರು.
ವಿಜಯಪುರದಲ್ಲಿ ಹಿಂದೂಗಳು ಜಾಗೃತರಾಗಿದ್ದಾರೆ. ವಿಜಯಪುರದಿಂದಲೇ ಹಿಂದೂಸ್ತಾನ ಹೋರಾಟ ಆರಂಭವಾಗಲಿದೆ. ವಿಜಯಪುರದ ಒಂದಿಂಚು ಜಾಗ ಮುಟ್ಟಲು ಬಿಡಲ್ಲ ಎಂದು ತಿಳಿಸಿದರು.