ChamarajanagarCinemaDistrictsLatestLeading NewsMain Post

ಚೆಲುವ ಚಾಮರಾಜನಗರದ ರಾಯಭಾರಿಯಾಗಲು ರೆಡಿ ಎಂದ `ಗಾಜನೂರು ಗಂಡು’ ಶಿವರಾಜ್‌ಕುಮಾರ್

- ರಾಯಭಾರಿ ಮಾಡಲು ಅಭಿಮಾನಿಗಳಿಂದಲೂ ಒತ್ತಾಯ

Advertisements

ಚಾಮರಾಜನಗರ: ಜಿಲ್ಲೆ, ಸಂಸ್ಕೃತಿ ಹಾಗೂ ಪ್ರಕೃತಿಯ ಅದ್ಬುತ ಸಮಾಗಮ ಚೆಲುವ ಚಾಮರಾಜನಗರ. ಇಲ್ಲಿನ ಪ್ರಾಕೃತಿಕ ಸೌಂದರ್ಯದೊಂದಿಗೆ ಪ್ರವಾಸಿಗರ ಆಕರ್ಷಣೆಯನ್ನೂ ಹೆಚ್ಚಿಸಲೆಂದೇ ನಟ ದಿ. ಪುನೀತ್ ರಾಜ್‌ಕುಮರ್ ಅವರನ್ನು ರಾಯಭಾರಿಯನ್ನಾಗಿ ಮಾಡಲಾಗಿತ್ತು. ಇದಕ್ಕಾಗಿ ಪುನೀತ್ ರಾಜ್‌ಕುಮಾರ್ ಸಂದೇಶವಿರುವ ಪ್ರಮೋಷನ್ ವೀಡಿಯೋವನ್ನು ಜಿಲ್ಲಾಡಳಿತ ಸಿದ್ಧ ಮಾಡಿತ್ತು. ಪುನೀತ್ ನಿಧನದ ಬಳಿಕ ಇದೀಗ ಡಾ.ರಾಜ್ ಕುಟುಂಬದ ಮತ್ತೊಬ್ಬರನ್ನೂ ಬ್ರ‍್ಯಾಂಡ್ ಅಂಬಾಸಿಡರ್ ಆಗಿ ಮಾಡುವಂತೆ ಕೂಗು ಎದ್ದಿದೆ.

ಇದು ಪೂರ್ವ ಪಶ್ಚಿಮ ಘಟ್ಟಗಳ ಬೆಸುಗೆಯ ವಿಶಿಷ್ಟ ತಾಣವಾದ ಚಾಮರಾಜನಗರ ಜಿಲ್ಲೆ ಪಾಕೃತಿಕವಾಗಿ ಶ್ರೀಮಂತ ಜಿಲ್ಲೆ. ಅಪ್ರತಿಮ ನೈಸರ್ಗಿಕ ಸಂಪತ್ತು ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸ್ವತ್ತು ಹೊಂದಿರುವ ಕೆಲವೇ ಜಿಲ್ಲೆಗಳ ಪೈಕಿ ಚಾಮರಾಜನಗರವೂ ಒಂದು ಬಂಡೀಪುರ, ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯ, ಮಲೆಮಹದೇಶ್ವರ ವನ್ಯಧಾಮ, ಭರಚುಕ್ಕಿ ಜಲಪಾತ, ಹೊಗೇನಕಲ್ ಜಲಪಾತ, ಮಲೆಮಹದೇಶ್ವರಬೆಟ್ಟ, ತಮಿಳುನಾಡು ಗಡಿಯಲ್ಲಿರುವ ಪುಣಜನೂರು ಸೂಕ್ಷ್ಮ ಅರಣ್ಯ ಪ್ರದೇಶದಂತಹ ಪ್ರಾಕೃತಿಕ ಸೊಬಗನ್ನು ಹೊಂದಿದೆ. ಜನಪದ ಸಂಸ್ಕೃತಿಯನ್ನೂ ಇಂದಿಗೂ ಜೀವಂತವಾಗಿರಿಸಿಕೊಂಡಿದ್ದು, ಹತ್ತಾರು ಐತಿಹಾಸಿಕ ಹಾಗೂ ಪಾರಂಪರಿಕ ಸ್ಥಳಗಳನ್ನೂ ತನ್ನ ತೆಕ್ಕೆಯಲ್ಲಿಟ್ಟುಕೊಂಡಿದೆ. ಇದನ್ನೂ ಓದಿ: ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರ ಬಿಲ್‌ನಲ್ಲಿ ಸೇವಾ ಶುಲ್ಕ ಸೇರಿಸುವಂತಿಲ್ಲ – ಸೇರಿಸಿದ್ರೆ ಗ್ರಾಹಕರೇ ದೂರು ಕೊಡ್ಬೋದು

ಜಿಲ್ಲಾಡಳಿತ `ಚೆಲುವ ಚಾಮರಾಜನಗರ’ ಎಂಬ ಜಿಲ್ಲಾ ಪ್ರವಾಸಿ ತಾಣಗಳ ಕೈಪಿಡಿ ಹೊರತಂದು, ಇದೀಗ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಚೆಲುವ ಚಾಮರಾಜನಗರದ ರಾಯಭಾರಿ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಸಂದೇಶ ಇರುವ ಪ್ರಮೋಷನ್ ವೀಡಿಯೋವೊಂದನ್ನು ಸಿದ್ದಪಡಿಸಿತ್ತು. ಆದ್ರೆ ಪುನೀತ್ ಅಕಾಲಿಕ ನಿಧನದಿಂದ ಈ ಯೋಜನೆ ಜಾರಿಗೆ ಹಿನ್ನಡೆಯಾಯಿತು. ಇದೀಗ ಮತ್ತೇ ಚಾಮರಾಜನಗರದಲ್ಲಿ ಡಾ.ರಾಜ್ ಕುಟುಂಬದ ಕುಡಿ ನಟ ಶಿವರಾಜ್ ಕುಮಾರ್ ಅವರನ್ನು ಚೆಲುವ ಚಾಮರಾಜನಗರ ರಾಯಭಾರಿ ಮಾಡುವಂತೆ ಅಭಿಮಾನಿಗಳಿಂದ ಕೂಗು ಎದ್ದಿದೆ. ಇದನ್ನೂ ಓದಿ: ಅಧಿಕಾರಿಗಳಿಂದಲೇ ದುರ್ಬಳಕೆ- ಕರ್ನಾಟಕ ಹೈಕೋರ್ಟ್ ಮೊರೆಹೋದ ಟ್ವಿಟ್ಟರ್

ಇನ್ನೂ ಚಾಮರಾಜನಗರ ಡಾ.ರಾಜ್ ತವರೂರು. ತವರೂರಿನ ಋಣ ತೀರಿಸಲು ನಟ ಪುನೀತ್ ರಾಯಭಾರಿಯಾಗಲೂ ಮನಸ್ಸು ಮಾಡಿದರು. ಆದ್ರೆ ಅಕಾಲಿನ ನಿಧನದಿಂದ ಅವರ ಆಸೆಯೂ ಈಡೇರಲಿಲ್ಲ. ಇದೀಗ ಪುನೀತ್ ಬದಲು ಡಾ.ಶಿವರಾಜ್ ಕುಮಾರ್ ರಾಯಭಾರಿಯಾಗಲೂ ರೆಡಿ ಎಂದಿದ್ದಾರೆ. ಜಿಲ್ಲಾಡಳಿತ ಒಂದು ವೇಳೆ ಒಪ್ಪಿಗೆ ಕೊಟ್ರೆ ರಾಯಭಾರಿಯಾಗ್ತೀನಿ. ಅದು ನನ್ನ ಭಾಗ್ಯ. ನನ್ನ ತಮ್ಮನ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.

ಒಟ್ಟಿನಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಚಾಮರಾಜನಗರದ ರಾಯಭಾರಿಯಾಗಲೂ ಶಿವಣ್ಣ ಒಪ್ಪಿಗೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿ ಶಿವಣ್ಣರನ್ನು ರಾಯಭಾರಿಯಾಗಿಸಲೂ ಮನಸ್ಸು ಮಾಡಲಿ ಅನ್ನೋದೆ ಅಭಿಮಾನಿಗಳ ಆಶಯ.

Live Tv

Leave a Reply

Your email address will not be published.

Back to top button