ರಾಮನಗರ: ನಾನು ಜೆಡಿಎಸ್ ಪಕ್ಷ ಬಿಟ್ಟು ಯಾವ ಪಕ್ಷಕ್ಕೂ ಹೋಗುವುದಿಲ್ಲ ಈ ಬಾರಿಯ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್‍ರನ್ನ ಸೋಲಿಸುವುದೇ ನನ್ನ ಗುರಿ ಎಂದು ಕನಕಪುರ ಜೆಡಿಎಸ್ ಮುಖಂಡ ಡಿ.ಎಂ ವಿಶ್ವನಾಥ್ ಇಂದು ತಿಳಿಸಿದ್ರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ ನನ್ನ ಹೆತ್ತ ತಾಯಿ ಇದ್ದ ಹಾಗೇ. ಪಕ್ಷಕ್ಕೆ ದ್ರೋಹ ಬಗೆದ್ರೆ ಹೆತ್ತ ತಾಯಿಗೆ ದ್ರೋಹ ಬಗೆದಂತೆ. ಹೀಗಾಗಿ ನಾನು ಜೆಡಿಎಸ್ ಬಿಟ್ಟು ಹೋಗಲ್ಲ ಅಂತ ಸ್ಪಷ್ಟ ಪಡಿಸಿದ್ದಾರೆ.
Advertisement
Advertisement
ಬಿಜೆಪಿ ಪಕ್ಷದಿಂದ ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ರು. ಬಿಜೆಪಿಯಿಂದ ಕಣಕ್ಕಿಳಿದ್ರೆ ಆರ್ಥಿಕ ಸಹಾಯದ ಜೊತೆಗೆ ಅಧಿಕಾರದ ಆಸೆ ತೋರಿದ್ರು. ಆದ್ರೆ ನಾನು ಜೆಡಿಎಸ್ ಪಕ್ಷ ಬಿಟ್ಟು ಬರುವುದಿಲ್ಲ ಎಂದೇ ತಿಳಿಸಿದ್ದೆ. ನನ್ನ ಆರ್ಥಿಕ ಸಮಸ್ಯೆಯಿಂದಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ ಅಷ್ಟೇ ವಿನಃ ಬೇರೇನೂ ಇಲ್ಲ. ಪಕ್ಷದೊಳಗಿನ ಸ್ಥಳೀಯ ಮುಖಂಡರೇ ಇಲ್ಲಸಲ್ಲದ ಆರೋಪ ಮಾಡ್ತಿದ್ದು, ಮುಂದಿನ ದಿನಗಳಲ್ಲಿ ಅದಕ್ಕೆಲ್ಲಾ ಉತ್ತರಿಸೋದಾಗಿ ತಿಳಿಸಿದ್ರು.
Advertisement
ಜೆಡಿಎಸ್‍ನ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಡಿ.ಎಂ ವಿಶ್ವನಾಥ್‍ಗೆ ಕೊನೆ ಘಳಿಗೆಯಲ್ಲಿ ಟಿಕೆಟ್ ಕೈತಪ್ಪಿ ನಾರಾಯಣಗೌಡರಿಗೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರ್ತಾರೆ ಎನ್ನಲಾಗ್ತಿತ್ತು. ರಾಜಕೀಯ ವಲಯದಲ್ಲಿ ತಮ್ಮ ಬಗ್ಗೆ ಹುಟ್ಟಿಕೊಂಡಿದ್ದ ಎಲ್ಲ ಪ್ರಶ್ನೆಗಳಿಗೆ ಡಿ.ಎಂ.ವಿಶ್ವನಾಥ್ ಉತ್ತರಿಸುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.