ಬಳ್ಳಾರಿ: ನನಗೂ ಹಾಗೂ ಸಚಿವ ಡಿಕೆ ಶಿವಕುಮಾರ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತಾ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯ ಹೊಸಪೇಟೆಯಲ್ಲಿ ಮತನಾಡಿದ ಅವರು, ಸಚಿವ ಡಿ.ಕೆ.ಶಿವಕುಮಾರ್ ಮೇಲೆ ನನಗೆ ಅಪಾರ ಅಭಿಮಾನವಿದೆ. ಬಳ್ಳಾರಿ ಜಿಲ್ಲೆಯ 6 ಶಾಸಕರ ಪೈಕಿ ಯಾರಿಗಾದ್ರೂ ಸಚಿವ ಸ್ಥಾನ ನೀಡಲಿ ಅನ್ನೋದು ನಮ್ಮ ಆಶಯ. ನಾನೂ ಕೂಡ ಸಚಿವ ಸ್ಥಾನದ ಅಕ್ಷಾಂಕಿಯಾಗಿದ್ದೇನೆ ಅಂದಿದ್ದಾರೆ.
ಸಚಿವ ಸ್ಥಾನ ಕೊಡಿಸದ್ದಕ್ಕೆ ಆನಂದಸಿಂಗ್ ಅಸಮಧಾನಗೊಂಡು ತಮ್ಮ ಆಪ್ತ ಸ್ನೇಹಿತ ಸಂತೋಷ್ ಲಾಡ್ ಜೊತೆ ಸತತ ಸಂಪರ್ಕದಲ್ಲಿದ್ದಾರೆ. ಇದರಿಂದಾಗಿ ಆನಂದ್ ಸಿಂಗ್ ಮತ್ತೆ ಬಿಜೆಪಿ ಸೇರ್ತಾರಾ ಅನ್ನೋ ಮಾತುಗಳು ಕೇಳಿಬರುವುದಾಗಿ ಇತ್ತೀಚೆಗಷ್ಟೇ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಹೊಸಪೇಟೆ ಶಾಸಕ ಆನಂದಸಿಂಗ್ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಅಸಮಧಾನಗೊಂಡಿದ್ದಾರೆ. ಕಾಂಗ್ರೆಸ್ ಸೇರ್ಪಡೆ ವೇಳೆ ಸಚಿವ ಸ್ಥಾನದ ಭರವಸೆ ನೀಡಿದ್ದರಂತೆ. ಡಿಕೆ ಶಿವಕುಮಾರ್ ತಮಗೆ ಸಚಿವ ಸ್ಥಾನ ಕೊಡಿಸದ್ದಕ್ಕೆ ಬೇಸರಗೊಂಡು ಆನಂದಸಿಂಗ್ ಚುನಾವಣಾ ನಿವೃತ್ತಿ ಘೋಷಿಸಿದರು ಎನ್ನಲಾಗಿತ್ತು.
ಕಳೆದ ವಾರದ ಹಿಂದೆ ಶಾಸಕ ಆನಂದಸಿಂಗ್ ತಾವೂ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದರು. ಅಲ್ಲದೇ ಆನಂದಸಿಂಗ್ ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರ ರಚನೆ ವೇಳೆಯೂ ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡ ವೇಳೆ ಸಚಿವ ಡಿಕೆ ಶಿವಕುಮಾರ್, ಶಾಸಕ ಆನಂದಸಿಂಗ್ ಅವರಿಗೆ ಮನವೊಲಿಸಿ ಮರಳಿ ಕರೆತಂದಿದ್ದರು. ಆದರೆ ಇದೀಗ ತಮಗೆ ಸಚಿವ ಸ್ಥಾನ ಕೊಡಿಸದ್ದಕ್ಕೆ ಆನಂದಸಿಂಗ್ ಅಸಮಧಾನಗೊಂಡು ತಮ್ಮ ಆಪ್ತ ಸ್ನೇಹಿತ ಸಂತೋಷ ಲಾಡ್ ಜೊತೆ ಸತತ ಸಂಪರ್ಕದಲ್ಲಿದ್ದಾರೆ ಎನ್ನಲಾಗಿತ್ತು.
ಸದ್ಯ ವಿದೇಶದಲ್ಲಿರುವ ಮಾಜಿ ಸಚಿವ ಸಂತೋಷ್ ಲಾಡ್ ರೊಂದಿಗೆ ಸತತ ಸಂಪರ್ಕದಲ್ಲಿರುವ ಬಿಜೆಪಿ ಶಾಸಕ ಶ್ರೀರಾಮುಲು ಬಳ್ಳಾರಿಯ 5 ಶಾಸಕರನ್ನ ಸೆಳೆಯಲು ಮುಂದಾಗಿದ್ದಾರಂತೆ. ಹೊಸಪೇಟೆ ಶಾಸಕ ಆನಂದಸಿಂಗ್, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ, ಜೆಡಿಎಸ್ ತೊರೆದು ಕೈ ಪಾಳಯ ಸೇರಿದ ಹಗರಿಬೊಮ್ಮನಹಳ್ಳಿಯ ಭೀಮಾನಾಯ್ಕ್, ಕಂಪ್ಲಿಯ ಜಿ.ಎನ್.ಗಣೇಶ್, ಸಂಡೂರು ಶಾಸಕ ತುಕಾರಾಂ ಇವರೆಲ್ಲರೂ ಸಂತೋಷ್ ಲಾಡ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ನಾಯಕರು ಎನ್ನಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv