ಮಂಡ್ಯ: ನಾನು ಚುನಾವಣೆಗೆ ನಿಲ್ಲುವ ವಿಷ್ಯವಾಗಿ ದೇವೇಗೌಡರು ಹೇಗೆ ಹೇಳುತ್ತಾರೋ ಹಾಗೇ ನಡೆಯುತ್ತೇನೆ. ಅವರ ಇಷ್ಟಕ್ಕೆ ವಿರುದ್ಧವಾಗಿ ಯಾವತ್ತು ನಡೆಯೊಲ್ಲ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.
ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ, ಆದಿಚುಂಚನಗಿರಿ ಕ್ಷೇತ್ರದಲ್ಲಿ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತ್ರ ಮಾತನಾಡಿದ ಭವಾನಿ ರೇವಣ್ಣ, ಭೀಮನ ಅಮವಾಸ್ಯೆಯಂದು ಶಿವನ ದೇವಾಲಯಕ್ಕೆ ಬಂದು ಪೂಜಿಸುತ್ತೇವೆ. ಹಾಗಾಗಿ ಇಲ್ಲಿಗೆ ಬಂದಿದ್ದೇವೆ. ಈಗಾಗಲೇ ದೊಡ್ಡವರು, ಕುಮಾರಸ್ವಾಮಿಯವರು ಬಂದು ಪೂಜೆ ಸಲ್ಲಿಸಿದ್ದಾರೆ. ಹಾಗಾಗಿ ರಾಜಕೀಯ ಉದ್ದೇಶ ಅಂದ್ಕೋತಾರೆ. ಆದ್ರೆ ಹಾಗೇನಿಲ್ಲ. ರಾಜ್ಯದಲ್ಲಿ ಮಳೆಯಿಲ್ಲದೇ ಕುಡಿಯೋ ನೀರಿಗೂ ಕಷ್ಟವಿದೆ. ಈ ಬಗ್ಗೆ ದೇವರಲ್ಲಿ ಪ್ರಾರ್ಥಿಸಿದ್ದೇನೆ ಅಂದ್ರು.
Advertisement
ಚುನಾವಣೆಗೆ ನಿಲ್ಲುವ ವಿಷ್ಯದಲ್ಲಿ ಅಭಿಮಾನಿಗಳ ಒತ್ತಡವಿದೆ. ಆದ್ರೆ ನಮ್ಮ ಮನೆಯಲ್ಲಿ ಏನೇ ತೀರ್ಮಾನ ಆಗಬೇಕು ಅಂದ್ರು ದೊಡ್ಡವರ ಮೇಲೆ ಡಿಪೆಂಡ್ ಆಗಿದ್ದೇವೆ. ಟಿಕೆಟ್ ಕೊಡುವ ವಿಷವಾಗಿ ನಮ್ಮ ಮನೆಯಲ್ಲಿ ಏನೂ ಮಾತುಕತೆ ನಡೆದಿಲ್ಲ. ಈ ಬಗ್ಗೆ ಮಾಧ್ಯಮದಲ್ಲಿ ಬಂದಾಗಲೆಲ್ಲ ಏನೂ ವಿಷ್ಯ ಇಲ್ಲದಿದ್ರು ಸುದ್ದಿಯಲ್ಲಿ ಇರುತ್ತೇನಲ್ಲ ಅಂದುಕೊಳ್ಳುತ್ತಿರುತ್ತೇನೆ. ಸದ್ಯಕ್ಕೆ ಈ ಬಗ್ಗೆ ನಮ್ಮ ಮನೆಯಲ್ಲಿ ಮಾತುಕತೆ ನಡೆದಿಲ್ಲ. ಮೊದಲನೆಯದು ದೇವರ ಆಶಿರ್ವಾದ, ಎರಡನೆಯದು ದೇವೇಗೌಡರ ಆಶಿರ್ವಾದ ಹೇಗೆ ಇರುತ್ತೋ ಹಾಗೇ ಆಗುತ್ತೆ ಎಂದು ಭವಾನಿ ರೇವಣ್ಣ ತಿಳಿಸಿದರು.
Advertisement
Advertisement
ಇದೇ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ವಿಷ್ಯವಾಗಿ ಮಾತನಾಡಲು ನಿರಾಕರಿಸಿದ ಅವರು ಈ ಬಗ್ಗೆ ದೇವೇಗೌಡರು ಸಮರ್ಪಕವಾಗಿ ಉತ್ತರಿಸಿದ್ದಾರೆ. ಬೇರೆ ಚರ್ಚೆಬೇಡ ಎಂದು ತಿಳಿಸಿದ್ರು.
Advertisement
ಕುಮಾರಸ್ವಾಮಿ ನಮ್ಮ ನಾಯಕ: ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಕಾಲಭೈರವೇಶ್ವರಿಗೆ ಅಮಾವಾಸ್ಯೆ ಪೂಜೆ ಸಲ್ಲಿಸಿ ನಂತ್ರ ಮಾತನಾಡಿದ ಎಚ್ ಡಿ.ರೇವಣ್ಣ, ಯಾರಾದ್ರೂ ಕುಮಾರಸ್ವಾಮಿ ಮತ್ತು ರೇವಣ್ಣ ಜಗಳ ಆಡ್ತಾರೆ ಅಂತಾ ಅನ್ಕೊಂಡಿದ್ರೆ ಅವ್ರಿಗೆ ನಿರಾಸೆಯಾಗುತ್ತೆ. ಯಾಕಂದ್ರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಮ್ಮ ನಾಯಕರು ಅಂತ ಎಚ್ ಡಿ ರೇವಣ್ಣ ಅವರು ಇಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವ್ರಿಗೆ ಟಿಕೆಟ್ ನೀಡುವ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳುತ್ತೀರಿ. ಸಮಯ ಬಂದಾಗ ಗೊತ್ತಾಗುತ್ತೆ. ಸ್ಪರ್ಧಿಸಲು ಎಂಎಲ್‍ಎ ಟಿಕೆಟ್ ಆಗ್ಬೇಕಾ. ನಾನು ಹದಿನೈದು ವರ್ಷ ಹಾಗೆಯೇ ಕೆಲಸ ಮಾಡಿದ್ದೇನೆ. ದೇವರ ಅನುಗ್ರಹ ಇರುವವರೆಗೆ ಕೆಲಸ ಮಾಡ್ಬೇಕು. ಪಕ್ಷದಲ್ಲಿ ಎಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ ಹೇಳಿದ್ದೆ ಫೈನಲ್. 2018 ಕಳೆದು 2023 ಬಂದ್ಮೇಲೆ ಯೋಚನೆ ಮಾಡೋಣ. ಜನ ಆರ್ಶೀವಾದ ಮಾಡಿದ್ರೆ ಪ್ರಜ್ವಲ್ ಸ್ಪರ್ಧಿಸುತ್ತಾನೆ. 2018ರಲ್ಲಿ ಸ್ಪರ್ಧಿಸೋ ಬಗ್ಗೆ ದೇವೇಗೌಡ ಅವರು ತೀರ್ಮಾನ ಮಾಡ್ತಾರೆ ಅಂತಾ ರೇವಣ್ಣ ತಿಳಿಸಿದ್ರು.
ಇದೇ ಸಂದರ್ಭದಲ್ಲಿ ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲ್ಲ ಅಂತಾ ಜಮೀರ್ ಅಹಮದ್ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿ, ಅವ್ರ ಹೇಳಿಕೆಗೆ ಪ್ರತಿಕ್ರಿಯಿಸಿದ್ರೆ ಪೊಳ್ಳಾಗ್ತಿನಿ ಅಂತಾ ಹೇಳಿದ್ರು.