– ಮನೆ ಖಾಲಿ ಮಾಡೋಕೆ ಹೇಳ್ತಿದ್ದಾರೆ, ನಾನು ಏನ್ ತಪ್ಪು ಮಾಡಿದ್ದೀನಿ?
ಬೆಂಗಳೂರು: ನಾನು ಯಾರ ಹಣಕ್ಕಾಗಿಯೂ ಹೀಗೆ ಮಾಡಿಲ್ಲ. ನನ್ನ ಮಗಳು ಇಲ್ಲ ಅಂತಾ ಕೊರಗುತ್ತಿದ್ದೀನಿ. ಇದ್ದಿದ್ರೆ ನನ್ನ ನೋಡಿಕೊಳ್ಳುತ್ತಿದ್ದಳು ಎಂದು ಸುಜಾತಾ ಭಟ್ (Sujatha Bhat) ಕಣ್ಣೀರು ಹಾಕಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡುವಾಗ, ತಮ್ಮ ಬಗ್ಗೆ ಹೊರಗಡೆ ಕೇಳಿಬರುತ್ತಿರುವ ಮಾತುಗಳನ್ನು ನೆನೆದು ಕಣ್ಣೀರಿಟ್ಟರು. ಯಾವ ಹಣಕ್ಕಾಗಿ ಮಾಡಿಲ್ಲ. ಏನಕ್ಕೆ ಹಣ ತೆಗೆದುಕೊಳ್ಳಬೇಕು? ಯಾರ ಹತ್ತಿರ ಯಾಕೆ ತೆಗೆದುಕೊಳ್ಳಬೇಕು? ಯಾರ ಹತ್ತಿರ ಭಿಕ್ಷೆ ಬೇಡಿದ್ದೇನೆ. ಯಾರು ಕೊಡ್ತಾರೆ ಹಣ ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು. ಇದನ್ನೂ ಓದಿ: ನನ್ನ ಮಗಳು ಅನನ್ಯಾ ಭಟ್ ಇದ್ದಿದ್ದು ಸತ್ಯ: ಸುಜಾತಾ ಭಟ್
ಪಾರ್ಕ್ನಲ್ಲಿ ಜ್ಯೂಸ್ ಮಾರಾಟದ ಬಗ್ಗೆ ಮಾತನಾಡಿ, ಬೆಳಗ್ಗೆ 2:30 ಕ್ಕೆ ಎದ್ದೇಳುತ್ತೇನೆ. ಎಲ್ಲಾ ರೆಡಿ ಮಾಡಿಕೊಂಡು ಹೋಗ್ತೀನಿ. ಸ್ವಾಭಿಮಾನಿಯಾಗಿ ಬದುಕಿದ್ದೀನಿ. ಕಾಲ್ಪನಿಕ ಆಗಿದ್ರೆ ನಿಮ್ಹಾನ್ಸ್‌ಗೆ ಕರೆದುಕೊಂಡು ಹಾಕಬೇಕಿತ್ತು. ನಕ್ಸಲೆಟ್ ಅಂತಾರೆ. ವಯಸ್ಸಾಗಿದೆ ಅನ್ನೋದಕ್ಕಾದ್ರು ಮರ್ಯಾದೆ ಕೊಡಬೇಕಲ್ಲ. ನನ್ನ ಮಗಳು ಇದ್ದಿದ್ದು ನಿಜ. 9 ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡಿದ್ದೀನಿ. ಒಂದು ತಿಂಗಳ ಮಗುವನ್ನ ನದಿಯಲ್ಲಿ ಹಾಕ್ತಿದ್ರು. ನೋವಾಗುತ್ತೆ ಅಲ್ವಾ. ನಾನು ಸತ್ತು ಹೋಗಿದ್ದಾಳೆ ಅಂದ್ಮೇಲೆ ಡೆತ್ ಸರ್ಟಿಫಿಕೇಟ್ ಡಿಕ್ಲೇರ್ ಮಾಡೋಕೆ ಹೇಳಲಿ. ಅವರ ಮನೆ ಬಾಗಿಲಿಗೆ ಹೋಗಿಲ್ಲ. ಮನೆ ಕೆಲಸ ಮಾಡಿದ್ದೀನಿ. ನನ್ನನ್ನ ಸಾಕಿದ್ರೆ ಅವರು ನನ್ನ ಬಗ್ಗೆ ಮಾತನಾಡಬೇಕು ಎಂದು ಟೀಕೆಗಳಿಗೆ ನೊಂದು ನುಡಿದರು.
ರಂಗಪ್ರಸಾದ್‌ರನ್ನ ನಾನು ನೋಡಿಕೊಂಡಿದ್ದೇನೆ. ನನಗೆ ಬಟ್ಟೆ ಇಲ್ಲದಿದ್ದರೂ ಪರವಾಗಿಲ್ಲ, ಅವರಿಗೆ ಎಲ್ಲಾ ಮಾಡಿದ್ದೇನೆ. ನನ್ನ ಕಣ್ಣೆದುರಲ್ಲೇ ಸತ್ತು ಹೋಗಿದ್ದಾರೆ. ನನ್ನ ಮಗಳು ಕಣ್ಣೆದುರು ಇದ್ರೆ ಹೇಗಿರುತ್ತಿದ್ದಳು. ನಾನು ಯಾರ ದುಡ್ಡಿಗಾಗಿ ಮಾಡುತ್ತಿಲ್ಲ. ನನಗೆ ದುಡ್ಡಿನ ಅವಶ್ಯಕತೆ ಇಲ್ಲ. ಯಾರೋ ಪುಣ್ಯಾತ್ಮರು ಊಟ ಹಾಕ್ತಾರೆ. ಮಕ್ಕಳಿದ್ರೂ ತಂದೆಯನ್ನ ನೋಡಿಕೊಳ್ಳಲಿಲ್ಲ. ಇನ್ಸುಲಿನ್ ಕೊಡಿಸಲು ಆಗಿಲ್ಲ ಅಂದ್ರೆ ತಂದೆ ಎಷ್ಟು ನೋವನ್ನ ಅನುಭವಿಸರಬೇಕು. ಸಾಯೋ ಹಿಂದಿನ ದಿನವೂ ಎಷ್ಟು ಕಷ್ಟ ಪಡುತ್ತಿದ್ದೀಯ ಅಂತಿದ್ರು ಎಂದು ನೆನೆದು ಕಣ್ಣೀರಿಟ್ಟರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್!
ಯಾವ ಹೋರಾಟಗಾರರು ನನ್ನ ಸಂಪರ್ಕದಲ್ಲಿಲ್ಲ. ನಾನೇ ವಕೀಲರನ್ನ ಸಂಪರ್ಕಿಸಿ ಅಪ್ರೋಚ್ ಮಾಡಿದ್ದೇನೆ. ಒಂದು ಲೆಟರ್ ಕೊಡೋಣ ಅಂದ್ರು ಹೋದ್ವಿ. ನನ್ನ ಮಗಳ ಅಸ್ಥಿ ಕೊಡಿ ಅಂತಾ ಕೇಳಿದ್ದೇನೆ. ನಾನು ತನಿಖೆ ಮಾಡಿ ಅಂತಾ ಹೇಳಿಲ್ಲ. ಧರ್ಮಸ್ಥಳದಲ್ಲಿ ಆಗಿದೆ ಅಂತಾ ಎಲ್ಲೂ ಹೇಳಿಲ್ಲ. ದಾಖಲೆಗಳನ್ನ ನಾನು ಏನು ಕೊಟ್ಟಿಲ್ಲ. ನಾನು ಏನ್ ಕೇಳಿದ್ದೀನಿ ಅದಕ್ಕೆ ಅವರು ಬದ್ಧರಾಗಿದ್ದಾರೆ. ಅಸ್ಥಿ ಸಿಕ್ಕಿದ್ರೆ ಡಿಎನ್‌ಎ ಟೆಸ್ಟ್ ಮಾಡಿ ಕೊಡಿಸಿ. ಹಿಂದೂ ಸನಾತನ ಸಂಪ್ರದಾಯಂತೆ ಅಂತ್ಯಕ್ರಿಯೆ ಮಾಡ್ತೀನಿ. ತನಿಖೆ ಮಾಡಿ ಅಂತಾ ಹೇಳಿಲ್ಲ. ಆಗ ಇಲ್ಲದೇ ಇರೋ ತನಿಖೆ ಈಗ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.
ನನಗೆ ಯಾರ ಮೇಲೂ ಅನುಮಾನ ಇದೆ ಅಂತಾ ಹೇಳಿಲ್ಲ, ಹೇಳ್ತಾನೆ ಇಲ್ಲ. ಇಷ್ಟು ವರ್ಷ ಇಲ್ಲದೇ ಇರೋದ್ರಿಂದ ನನ್ನ ಮಗಳು ಇಲ್ಲ ಅಂದುಕೊಂಡಿದ್ದೇನೆ. ನನ್ನ ಮಗಳು ಸತ್ತು ಹೋಗಿದ್ದಾಳೆ ಅಂತಾನೆ ಡಿಕ್ಲೇರ್ ಮಾಡಿಕೊಂಡಿದ್ದೇನೆ. ನನ್ನ ಆತ್ಮಕ್ಕೆ ನನ್ನ ಮಗಳು ಇಲ್ಲ ಅಂದುಕೊಂಡಿದ್ದೇನೆ. ಈಗ ಒಂಟಿಯಾಗಿ ಬದುಕುತ್ತಿದ್ದೀನಿ. ದಿನ ಬೆಳಗಾದ್ರೆ ನಾನು ಮಾನಸಿಕವಾಗಿ ಕೊರಗುತ್ತಿದ್ದೇನೆ. ನನ್ನ ಮಗಳು ಇಲ್ಲ ಅಂತಾ ಕೊರಗುತ್ತಿದ್ದೀನಿ. ಇದ್ದಿದ್ರೆ ನನ್ನ ನೋಡಿಕೊಳ್ತಿದ್ದಳು. ನನ್ನ ಮಗಳು ಇದ್ದಿದ್ದು ನಿಜ, ಹುಟ್ಟಿದ್ದು ಸತ್ಯ. ಅನಿಲ್ ಭಟ್‌ಗೆ ಹುಟ್ಟಿದ್ದು ಸತ್ಯ. ಇದು ಕಾಲ್ಪನಿಕವಲ್ಲ… ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದು ಬೇಸರದಿಂದ ನುಡಿದರು.
ಅರವಿಂದ್, ವಿಮಲಾ ಮಗುವನ್ನ ತೆಗೆದುಕೊಂಡು ಹೋಗಿ ಸಾಕಿದ್ರು. ಲೆಟರ್ ಮೂಲಕ ನನಗೆ ಪತ್ರ ಬರೆಯುತ್ತಿದ್ದರು. ಮಂಗಳೂರಿನಲ್ಲಿ ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: Exclusive ಸುಜಾತ ಭಟ್ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್
ಅರವಿಂದ್‌ಗೆ ಮಗುವನ್ನ ಕೊಡಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, ನಾನು ಕೊಡೋಕೆ ಕಾರಣ ಇಲ್ಲ. ನನ್ನ ತಂದೆಯ ಫ್ಯಾಮಿಲಿ ಅವರು ಕಾರಣ, ನನ್ನ ಅಕ್ಕಂದಿರು. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನ ನೀರಲ್ಲಿ ಯಾಕೆ ಬಿಡಲಿ. ಅವತ್ತೆ ನಾನು ಕರೆದುಕೊಂಡು ಹೋಗಿ ಸಾಕಬಹುದಾಗಿತ್ತಲ್ಲ. ನನಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಬೇರೆಯವರಿಗೆ ಹಾಕಿದ ಬಟ್ಟೆಯನ್ನ ನನಗೆ ಕೊಡ್ತಿದ್ದರು. ನನಗೆ ಒಳ್ಳೆಯ ಬಟ್ಟೆ ಕೊಡಿಸುತ್ತಿರಲಿಲ್ಲ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಮಾಡಿದ್ದಾರೆ ಎಂದು ಹೇಳಿದರು.
ಇವತ್ತು ಮಾತನಾಡುತ್ತಿದ್ದನಲ್ಲ. ಅವನ ಹೆಂಡ್ತಿಗೆ ಸೀರೆ ಕೊಡಿಸೋಕೆ 2 ಸಾವಿರ ತೆಗೆದುಕೊಂಡಿದ್ದಾರೆ. ಅವರ ಮದುವೆಯಲ್ಲಿ ನನಗೆ ಯಾರೋ ಹಾಕಿದ ಹಳೆಯ ಸೀರೆ ಕೊಟ್ಟಿದ್ದಾರೆ. ನನಗೆ ತುಂಬ ನೋವಾಗಿದೆ. ನೋವು ಅನುಭವಿಸಿದ್ದೀನಿ. ಯಾರ ಹತ್ತಿರನೂ ಹೇಳಿಕೊಳ್ಳಲಿಕ್ಕೆ ಇಷ್ಟ ಇಲ್ಲ. ದುಡ್ಡು ಯಾವ ದುಡ್ಡು, ನನ್ನ ಬ್ಯಾಂಕ್ ಬ್ಯಾಲೆನ್ಸ್ ತೋರಿಸಲಾ? ದುಡಿದು ತಿನ್ನುತ್ತೀನಿ. ಒಂದೊತ್ತು ಊಟ ಇಲ್ಲ ಅಂದ್ರೂ ಇರ್ತೀನಿ. ಎರಡು ದಿನದಿಂದ ಊಟ ಇಲ್ಲ. ಮನೆಯಿಂದ ಹೊರಗೆ ಹೋಗೋಕೆ ಆಗ್ತಿಲ್ಲ. ಮನೆ ಖಾಲಿ ಮಾಡೋಕೆ ಹೇಳ್ತಿದ್ದಾರೆ. ನಾನು ಏನ್ ತಪ್ಪು ಮಾಡಿದ್ದೀನಿ. ಮಗಳು ಇಲ್ಲ ಅನ್ನೋದನ್ನ ಹೇಳೋದೆ ತಪ್ಪಾ? ಮನೆ ಖಾಲಿ ಮಾಡಿಸೋಕೆ ಯಾರು ಇವರು? ನಾನೇನು ಕ್ರೈಂ ಮಾಡಿದ್ದೀನಿ. ಕಳ್ಳತನನಾ..? ಕೊಲೆನಾ..? ಬದುಕೋದೆ ತಪ್ಪಾ..? ಯಾರ ಕೊಡ್ತಾರೆ ಅಂತೆ ದುಡ್ಡು? ಯಾವ ದುಡ್ಡು? ಇಷ್ಟು ವರ್ಷ ಸಣ್ಣಪುಟ್ಟ ಕೆಲಸ ಮಾಡಿ ಬದುಕಿದ್ದೀನಿ. ನಾನು ಯಾರ ಹತ್ತಿರನು ಕೈ ಚಾಚಿಲ್ಲ. ಮನೆಯಲ್ಲಿ ಅಕ್ಕಿ ಇದ್ಯಾ ಬೆಳೆ ಇದ್ಯಾ ಅಂತಾ ಯಾರು ಕೇಳಿಲ್ಲ. ಭಿಕ್ಷೆ ಎತ್ತಿಲ್ಲ. ಮಗಳು ಇಲ್ಲ ಅನ್ನೋ ನೋವು, ಇದು ಕಾಲ್ಪನಿಕ ಅಲ್ಲ. ಹೇಗೆ ಮಗಳು ಇಲ್ಲ ಅಂತಾ ಹೇಳೋಕೆ ಸಾಧ್ಯ. ಕಾಲ್ಪನಿಕ ಅಂತಾರೆ ಇವರು ಯಾರು ಹೇಳೋಕೆ? 9 ತಿಂಗಳು ಏನ್ ಕಷ್ಟದಲ್ಲಿ ಎತ್ತಿದ್ದೀನಿ ಅನ್ನೋದು ನನಗೆ ಗೊತ್ತು. ತಾಯಿ ಆದವಳಿಗೆ ಗೊತ್ತಿರಲ್ವಾ? ತಪ್ಪಲ್ವಾ ಹೇಳೋದು ಎಂದು ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ರಂಗಪ್ರಸಾದ್ ಅವರ ಫೋಟೊ ತೋರಿಸಿದರು. ಜೊತೆಗೆ ತನ್ನ ತಾಯಿ ಫೋಟೊವನ್ನು ತೋರಿಸಿ, ನನ್ನ ಅಮ್ಮನಿಗೂ ಅನನ್ಯಾ ಭಟ್‌ಗೂ ಹೋಲಿಕೆ ಇಲ್ವಾ ಎಂದು ಕೇಳಿದರು.