ನವದೆಹಲಿ: ರಾಷ್ಟ್ರಪ್ರಶಸ್ತಿಗಳನ್ನ ವಾಪಸ್ ಕೊಡಲು ನಾನೇನು ಮೂರ್ಖನಾ ಎಂದು ನಟ ಪ್ರಕಾಶ್ ರಾಜ್ ಹೇಳಿಕೆ ನೀಡಿದ್ದಾರೆ.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂಬಂಧ ಪ್ರಧಾನಿ ಮೋದಿ ಮೌನದ ವಿರುದ್ಧ ಮಾತನಾಡಿದ್ದ ನಟ ಪ್ರಕಾಶ್ ರಾಜ್, ರಾಷ್ಟ್ರಪ್ರಶಸ್ತಿಗಳನ್ನ ಮೋದಿ ಸೇರಿದಂತೆ ನನಗಿಂತ ದೊಡ್ಡ ನಟರಿಗೆ ಕೊಡಬೇಕು ಎಂದು ಹೇಳಿಕೆ ನೀಡಿದ್ದು ಈಗಾಗಲೇ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ತನ್ನ ಹೇಳಿಕೆಯನ್ನು ನಾನು ಅವಾರ್ಡ್ ವಾಪಸ್ ಕೊಡಬೇಕೆಂದಿದ್ದೇನೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ರಾಷ್ಟ್ರಪ್ರಶಸ್ತಿಯನ್ನು ವಾಪಸ್ ಕೊಡಲು ನಾನೇನು ಅಷ್ಟು ಮೂರ್ಖನಲ್ಲ. ನನ್ನ ಕೆಲಸಕ್ಕಾಗಿ ಪ್ರಶಸ್ತಿಯನ್ನು ನೀಡಲಾಗಿದೆ. ಅದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
Advertisement
ಗೌರಿ ಲಂಕೇಶ್ ಹತ್ಯೆಯನ್ನ ಸಂಭ್ರಮಿಸುವಂತಹ ಟ್ರೋಲ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇಂತಹ ಟ್ರೋಲ್‍ಗಳನ್ನ ಹಾಕಿದ ಕೆಲವು ಟ್ವಿಟ್ಟರ್ ಖಾತೆಗಳನ್ನ ಮೋದಿ ಫಾಲೋ ಮಾಡುತ್ತಿದ್ದಾರೆಂದು ಪ್ರಕಾಶ್ ರಾಜ್ ಖಂಡಿಸಿದ್ದಾರೆ.
Advertisement
ಪ್ರಧಾನಿ ಮೋದಿ ಫಾಲೋ ಮಾಡ್ತಿರೋ ಕೆಲವು ಜನರು ತುಂಬಾ ಕ್ರೂರಿಗಳು, ಅದರ ಬಗ್ಗೆ ಕಣ್ಣು ಮುಚ್ಚಿ ಕುಳಿತಿರೋ ಪ್ರಧಾನಿ ನಮ್ಮಲ್ಲಿದ್ದಾರೆ. ಉತ್ತರಪ್ರದೇಶದ ವಿಡಿಯೋಗಳನ್ನ ನೋಡಿದ್ರೆ ಅವರು(ಯೋಗಿ ಆದಿತ್ಯನಾಥ್) ಮುಖ್ಯಮಂತ್ರಿಯೋ ಅಥವಾ ದೇವಸ್ಥಾನದ ಪೂಜಾರಿಯೋ ಎಂದು ಗೊಂದಲವಾಗುತ್ತದೆ. ಇಂತಹ ಡಬಲ್ ರೋಲ್ ಮಾಡೋ ಜನರು ನಮ್ಮಲ್ಲಿದ್ದಾರೆ ಬೆಂಗಳೂರಿನಲ್ಲಿ ಪ್ರಕಾಶ್ ರಾಜ್ ಹೇಳಿಕೆ ನೀಡಿದ್ದರು. ನನಗೆ 5 ರಾಷ್ಟ್ರಪ್ರಶಸ್ತಿಗಳನ್ನ ನೀಡಿದ್ದಾರೆ. ಅದನ್ನು ಅವರಿಗೆ ನೀಡಬೇಕೆಂದಿದ್ದೇನೆ. ಅವರು ನನಗಿಂತ ದೊಡ್ಡ ನಟರು ಎಂದು ಪ್ರಕಾಶ್ ರಾಜ್ ಹೇಳಿದ್ದರು. ಈ ಹೇಳಿಕೆ ಬಗ್ಗೆ ಸಾಕಷ್ಟು ಟ್ರೋಲ್‍ಗಳಾಗಿದ್ದು, ನಾನು ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
Advertisement
ಪ್ರಕಾಶ್ ರಾಜ್ ಹೇಳಿಕೆಯನ್ನ ಸಂಸದ ಪ್ರತಾಪ್ ಸಿಂಹ ಕೂಡ ಸಾಮಾಜಿಕ ಜಾPಲತಾಣಗಳಲ್ಲಿ ಖಂಡಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿರೋ ಬಿಜೆಪಿ ವಕ್ತಾರರಾದ ನಳೀನ್ ಕೊಹ್ಲಿ, ಪ್ರಕಾಶ್ ರಾಜ್ ತಮ್ಮ ಕೋಪವನ್ನ ಕಾಂಗ್ರೆಸ್ ಮೇಲೆ ತೋರಿಸಬೇಕು, ಕರ್ನಾಟಕದಲ್ಲಿ ಆಡಳಿತ ಮಾಡುತ್ತಿರುವುದು ಕಾಂಗ್ರೆಸ್. ಈ ಪ್ರಶ್ನೆಯನ್ನ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೇಳಬೇಕು. ಯಾಕಂದ್ರೆ ಪೊಲೀಸರು ಬರುವುದು ರಾಜ್ಯದ ಅಡಿಯಲ್ಲಿ. ಅವರು ಯಾಕೆ ಇನ್ನೂ ಹಂತಕರನ್ನ ಪತ್ತೆ ಮಾಡಿಲ್ಲ? ಎಂದಿದ್ದಾರೆ.
Advertisement
What's said…n what's not said. For all out there .. thank you pic.twitter.com/zIT7rnkFxb
— Prakash Raj (@prakashraaj) October 2, 2017
ಕಾವೇರಿ ಬಗ್ಗೆ ಕೇಳಿದಾಗ ನಾನೊಬ್ಬ ನಟ ಅಂತ ಕೆಂಡಾಮಂಡಲವಾಗಿದ್ದವ ಕರ್ನಾಟಕದ ಕಾನೂನು ವ್ಯವಸ್ಥೆ ಬಗ್ಗೆ ಸಿಎಂ ಬಿಟ್ಟು ಮೋದಿಯನ್ನೇಕೆ ಎಳೆಯುತ್ತಿದ್ದೀಯಪ್ಪಾ ಖಳನಟ?! pic.twitter.com/JYmVsiUdhq
— Pratap Simha (@mepratap) October 2, 2017