ತುಮಕೂರು: ಮಾಜಿ ಶಾಸಕ ಸುರೇಶ್‍ಗೌಡ ಮತ್ತೆ ಸಂಸದರಾಗುವ ಕನಸು, ನಾನು ಕೂಡ ಎಂಪಿ ಆಕಾಂಕ್ಷಿ ಅನ್ನೋ ಸಂದೇಶವು ಇದೀಗ ವಾಟ್ಸಾಪ್ ಗ್ರೂಪ್‍ನಲ್ಲಿ ಹರಿದಾಡುತ್ತಿದೆ.
ಜಿಲ್ಲೆಯ ಬಿಜೆಪಿಯಲ್ಲಿ ಟಿಕೆಟ್‍ಗಾಗಿ ಪೈಪೋಟಿ ಶುರುವಾಗಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್‍ಗೌಡ ಆಕಾಂಕ್ಷಿ ಅನ್ನೋ ಸಂದೇಶ ವಾಟ್ಸಾಪ್ ಗ್ರೂಪ್‍ನಲ್ಲಿ ಹರಿದಾಡುತ್ತಿದೆ. ಈ ಬಾರಿ ಸುರೇಶ್‍ಗೌಡರಿಗೆ ಟಿಕೆಟ್ ನೀಡಿ ಅಂತ ಅಭಿಮಾನಿಗಳು ಒತ್ತಾಯಿಸುತ್ತಿದ್ದು, ಕಾರ್ಯಕರ್ತರು ಮಾಡಿದ್ದ ಪೋಸ್ಟನ್ನು ಸುರೇಶ್ ಗೌಡರವರು ಪಾರ್ವರ್ಡ್ ಮಾಡಿದ್ದಾರೆ.
ಸುರೇಶ್ ಗೌಡರವರ ಎಂಪಿ ಕನಸಿಗೆ ಕೆಲವರು ಪರ ವಿರೋಧದ ಸಲಹೆ ನೀಡಿದ್ರೆ, ಇನ್ನೂ ಕೆಲವರು ಮತ್ತೆ ಶಾಸಕರಾಗಿ ಉತ್ತಮ ಕೆಲಸ ಮಾಡಿ, ಸಂಸದರಾಗಿ ಇಡೀ ಜಿಲ್ಲೆ ಹ್ಯಾಂಡಲ್ ಮಾಡಿ ಅನ್ನೂ ಸಂದೇಶವನ್ನು ನೀಡಿದ್ದಾರೆ.