`ವಿ ಲವ್ ಯೂ’ ಎಂದ ಅಭಿಮಾನಿಗೆ ದೀಪಿಕಾ ಖಡಕ್ ರಿಯಾಕ್ಷನ್

ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಅಪಾರ ಅಭಿಮಾನಿಗಳ ಬಳಗವಿದೆ. ದೇಶದೆಲ್ಲೆಡೆ ನಟಿ ದೀಪಿಕಾಗೆ ಅದ್ಭುತ ಫ್ಯಾನ್ಸ್ ಫಾಲೋವಿಂಗ್ ಇದೆ. ಹೀಗಿರುವಾಗ ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕೊಂಕಣಿ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ದೀಪಿಕಾ ಭಾಗವಹಿಸಿದ್ದರು. ಈ ವೇಳೆ ಓರ್ವ ಅಭಿಮಾನಿಯೊಬ್ಬ ನಾವು ನಿಮ್ಮನ್ನು ಪ್ರೀತಿಸುತ್ತೇವೆ ದೀಪಿಕಾ ಎಂದು ಕೂಗಿದ್ದಾರೆ. ದೀಪಿಕಾ ಕೂಡ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬಿಟೌನ್‌ನ ಸ್ಟಾರ್ ನಟಿಯಾಗಿ ಮಿಂಚ್ತಿರುವ ದೀಪಿಕಾ, ಮಾತೃಭಾಷೆ ಕೊಂಕಣಿ ಹಾಗಾಗಿ ಇತ್ತೀಚೆಗೆಷ್ಟೇ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕೊಂಕಣಿ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ದೀಪಿಕಾ ಪಡುಕೋಣೆ ಪತಿ ಜತೆ ಭಾಗವಹಿಸಿದ್ದರು. ಶಂಕರ್ ಮಹಾದೇವ ಅವರ ಸಂಗೀತ ಕಾರ್ಯಕ್ರಮ ಕೂಡ ನಡೆಯುತ್ತಿತ್ತು. ಈ ವೇಳೆ ಓರ್ವ ಅಭಿಮಾನಿಯೊಬ್ಬ ನಾವು ನಿಮ್ಮನ್ನು ಪ್ರೀತಿಸುತ್ತೇವೆ ದೀಪಿಕಾ ಎಂದು ಜೋರಾಗಿ ಕೂಗಿದ್ದಾರೆ. ಅದಕ್ಕೆ ನಟಿ ಕೂಡ ನಾನು ಮದುವೆಯಾಗಿರುವ ಗೃಹಿಣಿ ಎಂದು ಅಭಿಮಾನಿಗೆ ಉತ್ತರಿಸಿದ್ದಾರೆ. ನಂತರ ಪತಿಯ ಸಮಾರಂಭದಲ್ಲಿ ದೀಪಿಕಾ ಮಿಂಚಿದ್ದಾರೆ.ಇದನ್ನೂ ಓದಿ:ಮೈಸೂರಿನಲ್ಲಿ ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ನ ಆರ್ಭಟ
View this post on Instagram
ಇದೀಗ ನಟಿ ದೀಪಿಕಾ ತನ್ನ ಕೊಂಕಣಿ ಭಾಷೆ ಮತ್ತು ಸಮುದಾಯದ ಜನರಿಗೆ ಧನ್ಯವಾದ ತಿಳಿಸಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಹಿಂದಿನ ಇತಿಹಾಸ, ಮೂಲ ಮತ್ತು ಸಂಸ್ಕೃತಿಯ ಅರಿವಿಲ್ಲದ ಜನರು ಬೇರುಗಳಿಲ್ಲದ ಮರದಂತೆ ಎಂದು ಕೊಂಕಣಿ ಸಮುದಾಯದವರಿಗೆ ಧನ್ಯವಾದ ತಿಳಿಸಿದ್ದಾರೆ. ಜತೆಗೆ ನಾನು ಕೊಂಕಣಿ ಸಮುದಾಯಕ್ಕೆ ಸೇರಿದವಳು ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಬರೆದುಕೊಂಡಿದ್ದಾರೆ.
Live Tv