ಮಂಗಳೂರು: ಕಳೆದ ವರ್ಷ ಜುಲೈನಲ್ಲಿ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣ ಮತ್ತೆ ಚಿಗುರಿಕೊಳ್ಳುವ ಲಕ್ಷಣ ಕಂಡು ಬಂದಿದೆ.
ಪ್ರಕರಣ ನಡೆದು ವರ್ಷವಾದರೂ ವಿದ್ಯಾರ್ಥಿನಿ ಸಾವಿನ ಬಗ್ಗೆ ಇನ್ನೂ ಫೈನಲ್ ರಿಪೋರ್ಟ್ ತಯಾರಿಸದ ಪೊಲೀಸರ ವಿರುದ್ಧವೇ ಈಗ ಆಕ್ರೋಶ ಎದ್ದಿದೆ. ಜಸ್ಟಿಸ್ ಫಾರ್ ಕಾವ್ಯಾ ಹೋರಾಟ ಸಮಿತಿ ಸ್ಥಳೀಯ ಪೊಲೀಸರ ತನಿಖೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆರ್‍ಟಿಐ ಕಾಯ್ದೆಯಡಿ ಬಯಲಾಯ್ತು ಆಳ್ವಾಸ್ ಸಂಸ್ಥೆಯ ಸ್ಫೋಟಕ ರಹಸ್ಯ
ಅಷ್ಟೇ ಅಲ್ಲದೇ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದೆ. ಒಂದು ತಿಂಗಳ ಒಳಗೆ ಸಿಓಡಿ ತನಿಖೆಗೆ ಒಪ್ಪಿಸದಿದ್ದರೆ, ಕಾವ್ಯಾ ಕೊಲೆಯಾದ ಜುಲೈ 20 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕಾವ್ಯಾ ಅಸಹಜವಾಗಿ ಸಾವನ್ನಪ್ಪಿದ್ದಾಳೆ: ಉಗ್ರಪ್ಪ ಕಾಲೇಜಿಗೆ ಭೇಟಿ ನೀಡಿದಾಗ ಸಿಕ್ಕಿರೋ ಸ್ಫೋಟಕ ಮಾಹಿತಿ ಇಲ್ಲಿದೆ
ಈ ಬಗ್ಗೆ ಸಾಂಕೇತಿಕ ಪ್ರತಿಭಟನೆ ನಡೆಸಿ, ಸಮಿತಿ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ. ಶಿಕ್ಷಣ ಸಂಸ್ಥೆಯ ಪ್ರಭಾವಿಗಳಿಗೆ ಮಣಿದು ತನಿಖೆಯನ್ನು ವಿಳಂಬಿಸುತ್ತಿದ್ದಾರೆಯೇ ಅನ್ನೋ ಆರೋಪ ಕೇಳಿಬಂದಿದೆ.