ಬೆಕ್ಕು, ಶ್ವಾನಗಳಲ್ಲೂ ಕೊರೊನಾ ರೂಪಾಂತರ ಆಲ್ಫಾ ಸೋಂಕು ಪತ್ತೆ- ಅಧ್ಯಯನ

Public TV
1 Min Read
dog web 2

ವಾಷಿಂಗ್ಟನ್‌: ಸಾಕುಪ್ರಾಣಿಗಳು ಸಹ ಕೊರೊನಾ ವೈರಸ್‌ ರೂಪಾಂತರ ಆಲ್ಫಾ ಸೋಂಕಿಗೆ ಒಳಗಾಗಬಹುದು ಎಂಬ ಮಾಹಿತಿಯನ್ನು ವೆಟರ್ನರಿ ರೆಕಾರ್ಡ್‌ನಲ್ಲಿನ ಹೊಸ ಅಧ್ಯಯನವು ಬಹಿರಂಗಪಡಿಸಿದೆ.

cat 2

ಆಲ್ಫಾ ಸೋಂಕು ಮೊದಲ ಬಾರಿಗೆ ಆಗ್ನೇಯ ಇಂಗ್ಲೆಂಡ್‌ನಲ್ಲಿ ಪತ್ತೆಯಾಯಿತು. ಹೀಗಾಗಿ ಇದನ್ನು ಯುಕೆ ರೂಪಾಂತರ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಪತಿ, ಪತ್ನಿ ನಡುವೆ ಒಡವೆ ವಿಚಾರಕ್ಕೆ ಕಿರಿಕ್ – ಕೊಲೆಯಲ್ಲಿ ಅಂತ್ಯ

ಇಂಗ್ಲೆಂಡ್‌ನಲ್ಲಿ ಎರಡು ಬೆಕ್ಕು ಹಾಗೂ ಒಂದು ಶ್ವಾನಕ್ಕೆ ಆಲ್ಫಾ ಸೋಂಕು ತಗುಲಿರುವುದು ಪಿಸಿಆರ್‌ ಪರೀಕ್ಷೆಯಿಂದ ದೃಢಪಟ್ಟಿದೆ.

COVID

ಮಾಲೀಕರು ತಮ್ಮ ಸಾಕುಪ್ರಾಣಿಗಳು ಉಸಿರಾಟ ಸಮಸ್ಯೆ ಸೇರಿದಂತೆ ಕೆಲವು ರೋಗಲಕ್ಷಣಗಳಿಂದ ಬಳಲುತ್ತಿದ್ದುದನ್ನು ಗುರುತಿಸಿ ಅವುಗಳಿಗೆ ಕೋವಿಡ್‌-19 ಪರೀಕ್ಷೆ ಮಾಡಿಸಿದ್ದರು. ಈ ವೇಳೆ ಅವುಗಳಿಗೆ ಹೃದಯ ಸಂಬಂಧಿ ಸಮಸ್ಯೆಗಳಿರುವುದೂ ಬೆಳಕಿಗೆ ಬಂತು.

ಬೆಕ್ಕು ಹಾಗೂ ಶ್ವಾನದಂತಹ ಸಾಕುಪ್ರಾಣಿಗಳು ಕೊರೊನಾ ರೂಪಾಂತರ ಆಲ್ಫಾ ಸೋಂಕಿಗೆ ಒಳಗಾಗುವುದು ನಮ್ಮ ಅಧ್ಯಯನದಿಂದ ತಿಳಿದುಬಂದಿದೆ. ಸಾಕುಪ್ರಾಣಿಗಳಿಗೂ ಸಾರ್ಸ್‌-ಕೋವ್‌-2 ವ್ಯಾಪಕವಾಗಿ ಹರಡಬಹುದು ಎಂಬ ಆತಂಕ ಈಗ ದಟ್ಟೈಸಿದೆ ಎಂದು ರಾಲ್ಫ್‌ ವೆಟರ್ನರಿ ರೆಫೆರಲ್‌ ಸೆಂಟರ್‌ನ ಲೀಡ್‌ ಆಥರ್‌ ಲುಖ ಫೆರಸಿನ್‌ ತಿಳಿಸಿದ್ದಾರೆ. ಇದನ್ನೂ ಓದಿ: ‘ಅಪ್ಪು’ ನೆನಪು – ನ.9 ರಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆ

mdk covid care center 3

ಕೋವಿಡ್‌ ಪೀಡಿತರಲ್ಲಿ ಹೆಚ್ಚು ಕಂಡುಬರುವ ಹೃದಯ ಸಂಬಂಧಿ ಸಮಸ್ಯೆಗಳನ್ನು ನಾವು ವರದಿ ಮಾಡಿದ್ದೇವೆ. ಜೊತೆಗೆ ಕೋವಿಡ್‌ ಪಾಸಿಟಿವ್‌ ಮನುಷ್ಯರಿಂದ ಸಾಕುಪ್ರಾಣಿಗಳಿಗೂ ಹರಡಬಹುದು ಎಂಬುದು ಸಹ ನಮ್ಮ ಅಧ್ಯಯನದಿಂದ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

Share This Article