ಎಡೆಬಿಡದೆ ಮಳೆ ಸುರಿಯುತ್ತಿರುವ ಕಾರಣ ಮಳೆಯ ಜೊತೆಗೆ ಚಳಿಯೂ ಜೋರಾಗಿದೆ. ಈ ಹೊತ್ತಲ್ಲಿ ಬಿಸಿಬಿಸಿಯಾದ ಚಹಾದೊಂದಿಗೆ ಏನಾದರು ಕುರುಕುಲು ತಿಂಡಿ ತಿನ್ನಬೇಕು ಎಂದೆನಿಸುವುದು ಸಹಜ. ಅದಕ್ಕಾಗಿ ನಾವು ಇವತ್ತು ನಿಮಗೆ ಸುಲಭವಾಗಿ ಆಲೂ ಕುರುಕುರೆ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಇದನ್ನು ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇದನ್ನು ಮಕ್ಕಳು ಮಾತ್ರವಲ್ಲದೇ ದೊಡ್ಡವರು ಸಹ ಇಷ್ಟಪಟ್ಟು ತಿನ್ನುತ್ತಾರೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಹೀಗೆ ಮಾಡಿ ರುಚಿರುಚಿಯಾದ ಮಸಾಲಾ ಸ್ವೀಟ್ ಕಾರ್ನ್ ವಡಾ
Advertisement
ಬೇಕಾಗುವ ಸಾಮಗ್ರಿಗಳು:
ಆಲೂಗೆಡ್ಡೆ – 4
ಮೈದಾ ಹಿಟ್ಟು – ಮುಕ್ಕಾಲು ಕಪ್
ಪೋಹಾ/ಅವಲಕ್ಕಿ – ಮುಕ್ಕಾಲು ಕಪ್
ಹೆಚ್ಚಿದ ಹಸಿರು ಮೆಣಸು – 2
ಜೀರಾ ಪೌಡರ್ – 1 ಚಮಚ
ಪುದಿನಾ ಎಲೆ – ಒಂದು ಮುಷ್ಟಿ
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ಬೇಕಾದಷ್ಟು
ನೀರು – ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಆಲೂಗೆಡ್ಡೆಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ.
* ಬೆಂದ ಬಳಿಕ ಅದನ್ನು ಬೇರೆ ಪಾತ್ರೆಗೆ ವರ್ಗಾಯಿಸಿ ಚೆನ್ನಾಗಿ ಕಿವುಚಿಕೊಳ್ಳಿ.
* ಅದಕ್ಕೆ ಹೆಚ್ಚಿದ ಪುದಿನಾ ಎಲೆ, ಹಸಿರು ಮೆಣಸು, ಜೀರಾ ಪೌಡರ್, ಉಪ್ಪು ಮತ್ತು ಸ್ವಲ್ಪ ನಿಂಬೆ ರಸವನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡ ಬಳಿಕ ಅದನ್ನು ಚಿಕ್ಕ ಚಿಕ್ಕ ಕಡ್ಡಿಗಳ ರೀತಿಯಲ್ಲಿ ಮಾಡಿಕೊಳ್ಳಿ. ಅಥವಾ ಉಂಡೆಗಳನ್ನಾಗಿಯೂ ಮಾಡಿಕೊಳ್ಳಬಹುದು.
* ಬಳಿಕ ಒಂದು ಪಾತ್ರೆಗೆ ಮೈದಾ ಹಿಟ್ಟು ಮತ್ತು ನೀರನ್ನು ಹಾಕಿಕೊಂಡು ದಪ್ಪ ಪೇಸ್ಟ್ ರೀತಿ ಮಾಡಿಕೊಳ್ಳಿ. ಬಳಿಕ ತಯಾರಿಸಿದ್ದ ಕಡ್ಡಿಗಳು ಅಥವಾ ಬಾಲ್‌ಗಳನ್ನು ಪೇಸ್ಟ್‌ನಲ್ಲಿ ಅದ್ದಿಕೊಂಡು ಪುಡಿಮಾಡಿಕೊಂಡ ಪೋಹಾದ ಮೇಲೆ ಒಂದು ಬಾರಿ ಉರುಳಿಸಿ.
* ಈಗ ಒಂದು ಬಾಣಾಲೆಯಲ್ಲಿ ಎಣ್ಣೆ ಬಿಸಿಗಿಟ್ಟು ಅದರಲ್ಲಿ ಈ ಬಾಲ್‌ಗಳನ್ನು ಅಥವಾ ಕಡ್ಡಿಗಳನ್ನು ಹಾಕಿಕೊಂಡು ಡೀಪ್ ಫ್ರೈ ಮಾಡಿಕೊಳ್ಳಬೇಕು.
* ಬಳಿಕ ಇದನ್ನು ಎಣ್ಣೆಯಿಂದ ತೆಗೆದು ಒಂದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ತಿನ್ನಲು ಕೊಡಿ. ಇದನ್ನೂ ಓದಿ: ರಾಜಸ್ಥಾನಿ ಲಾಲ್ ಮಾಸ್ ಮಾಡೋದು ಹೇಗೆ?
Advertisement
Web Stories