ಇದೇ ಮಾರ್ಚ್ 29ರಂದು ವಿಶ್ವದ್ಯಾಂತ ಬಿಡುಗಡೆ ಆಗಿ ಭಾರೀ ಹವಾ ಕ್ರಿಯೇಟ್ ಮಾಡಿದ್ದ ಸಿದ್ದು ಜೊನ್ನಲಗಡ್ಡ (Siddu Jonnalagadda) ಹಾಗೂ ಅನುಪಮಾ ಪರಮೇಶ್ವರ್ ಕಾಂಬಿನೇಷನ್ ನ ಟಿಲ್ಲು ಸ್ಕ್ವೇರ್ ಸಿನಿಮಾ ಏಪ್ರಿಲ್ 26ರಂದು ಒಟಿಟಿಗೆ (Ott) ಬರಲಿದೆ. ಅಂದೇ ವಿಜಯ್ ದೇವರಕೊಂಡ ಅಭಿನಯದ ದಿ ಫ್ಯಾಮಿಲಿ ಸ್ಟಾರ್ ಕೂಡ ಒಟಿಟಿಯಲ್ಲಿ ಇರಲಿದೆ.
ನಾನಾ ಕಾರಣಗಳಿಂದಾಗಿ ಟಿಲ್ಲು ಸ್ಕ್ವೇರ್ ಸುದ್ದಿಯಲ್ಲಿತ್ತು. ಕನ್ನಡವೂ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಟಿಲ್ಲು ಸ್ಕ್ವೇರ್ ಸಿನಿಮಾದಲ್ಲಿ ಹೊಸ ಬಗೆಯ ಪಾತ್ರ ಮಾಡಿದ್ದರು. ಸಿದ್ದು ಜೊನ್ನಲಗಡ್ಡ ಜೊತೆಯಾಗಿ ನಟಿಸಿರುವ ಅನುಪಮಾ ಅಭಿಮಾನಿಗಳಿಗೆ ಮತ್ತೇರಿಸುವಂತ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು.
ಬೋಲ್ಡ್ ಪಾತ್ರಗಳಲ್ಲಿ ಮಾಡಲ್ಲ ಅಂತಿದ್ದ ಈ ನಟಿ ಟಿಲ್ಲು ಸ್ಕ್ವೇರ್ (Tillu Square) ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ಜೊತೆಗೆ ಲಿಪ್ ಲಾಕ್ (Lip Lock) ಕೂಡ ಮಾಡಿದ್ದರು. ಈ ಹಿಂದೆ ರೌಡಿ ಬಾಯ್ಸ್ ಸಿನಿಮಾದಲ್ಲಿ ಈ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರೂ, ಅಭಿಮಾನಿಗಳಿಗೆ ಅಷ್ಟೇನೂ ಅವು ಮತ್ತೇರಿಸಿರಲಿಲ್ಲ.
ಟಿಲ್ಲು ಸ್ಕ್ವೇರ್ ಸ್ವೀಕೆಲ್ ಸಿನಿಮಾ. ಈ ಹಿಂದೆ 2022ರಲ್ಲಿ ಬಿಡುಗಡೆಯಾಗಿದ್ದ ಡಿಜೆ ಟಿಲ್ಲು ಸಿನಿಮಾದ ಮುಂದುವರೆದ ಭಾಗ ಇದಾಗಿತ್ತು. ಟಿಲ್ಲು ಸ್ಕ್ವೇರ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿ, ಅನುಪಮಾ ಅಚ್ಚರಿ ಎನ್ನುವಂತೆ ಬೋಲ್ಡ್ ಸ್ಟೆಪ್ ಇಟ್ಟಿದ್ದರು. ಈ ಸಿನಿಮಾವನ್ನು ಮಲ್ಲಿಕ್ ರಾಮ್ ನಿರ್ದೇಶನ ಮಾಡಿದ್ದು, ಸೂರ್ಯದೇವರ ನಾಗ್ ವಂಶಿ ನಿರ್ಮಾಣ ಮಾಡಿದ್ದಾರೆ.