ಬೆಂಗಳೂರು: ನಗರದ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಭೇಟಿ ನೀಡಿದ ಖಡಕ್ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಸಿಬ್ಬಂದಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಚೇರಿಗೆ ಇಂದು ದಿಢೀರ್ ಭೇಟಿ ನೀಡಿದ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಲಾಗ್ ಬುಕ್ ಪರಿಶೀಲನೆ ಮಾಡಿದರು. ಅದರಲ್ಲಿ ಕಚೇರಿಗೆ ಬಂದ ವ್ಯಕ್ತಿಗಳ ಹೆಸರು, ಭೇಟಿಯ ಉದ್ದೇಶ ನಮೂದಿಸಿರಲಿಲ್ಲ. ಜೊತೆಗೆ ಸರಿಯಾಗಿ ಮಾಹಿತಿ ಕೂಡ ಇರಲಿಲ್ಲ. ಇದರಿಂದ ಕೋಪಗೊಂಡ ಅವರು ಕಚೇರಿಗೆ ಯಾರು ಬಂದಿದ್ದರು? ಯಾರನ್ನು ಭೇಟಿ ಮಾಡಲು ಹಾಗೂ ಯಾವ ಉದ್ದೇಶಕ್ಕಾಗಿ ಬಂದಿದ್ದರು ಅಂತಾ ಲಾಗ್ಬುಕ್ನಲ್ಲಿ ದಾಖಲಾಗಬೇಕು ಎನ್ನುವ ನಿಯಮ ಇದ್ದರೂ ಯಾಕೆ ನಮೂದು ಮಾಡಿಲ್ಲ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
Advertisement
Advertisement
ಹೊಸ ವ್ಯವಸ್ಥೆಗೆ ಬದಲಾಗಿ ಎಂದು ನಾನು ಅಂದೇ ಹೇಳಿದ್ದೆ. ಆದರೆ ನೀವು ಇನ್ನೂ ಹಳೆ ವ್ಯವಸ್ಥೆಯಲ್ಲೇ ಇದ್ದೀರಿ. ಕಚೇರಿಗೆ ಬಂದ ಎಲ್ಲರೂ ಅಫೀಶಿಯಲ್ ಅಂತಾ ಬರೆದಿದ್ದಾರೆ. ಲಾಗ್ ಬುಕ್ನಲ್ಲಿ ಇರುವವರು ಯಾರು ಎಂದು ಪ್ರಶ್ನಿಸಿ ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ಕೂಡಲೇ ಸಿಸ್ಟಮ್ ಬದಲಾಗಬೇಕು ಎಂದು ಸಿಸಿಬಿ ಕಚೇರಿ ಉಸ್ತುವಾರಿ ಎಸಿಪಿ ಅವರಿಗೆ ಖಡಕ್ ಎಚ್ಚರಿಕೆ ಕೊಟ್ಟರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv