ಬೆಂಗಳೂರು: ಆಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫರೀದ್ ಪಂಚನಾಮೆಯ ವಿಡಿಯೋ ಲೀಕ್ ಆಗಿದ್ದು, ಈ ಕುರಿತು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಗರಂ ಆಗಿದ್ದಾರೆ ಎನ್ನಲಾಗಿದೆ.
ಪ್ರಕರಣದಲ್ಲಿ ಪ್ರಮುಖ ಆಧಾರವಾಗಿರುವ ತಾಜ್ ವೆಸ್ಟ್ ಅಂಡ್ ಹೋಟೆಲ್ ಸ್ಥಳದ ಪರಿಶೀಲನೆ ವಿಡಿಯೋ ಲೀಕ್ ಆಗಿರುವುದು ಸಿಸಿಬಿ ತನಿಖೆ ಮೇಲೆ ಅನುಮಾನ ಉಂಟಾಗುವಂತೆ ಮಾಡಿದೆ.
ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಅಲೋಕ್ ಕುಮಾರ್ ಅವರು ಪ್ರಕರಣದ ಆರೋಪಿ ಫರೀದ್ ಸ್ಥಳ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಆಲಿಖಾನ್ ಹಾಗೂ ಜನಾರ್ದನ ರೆಡ್ಡಿ ಇದ್ದರು ಎಂಬ ಅಂಶ ಸ್ಪಷ್ಟವಾಗಿದೆ ಎಂದು ತಿಳಿಸಿದ್ದರು.
Advertisement
ಲೀಕ್ ಆಗಿರುವ ವಿಡಿಯೋ ಬಗ್ಗೆ ಹಲವು ಅನುಮಾನಗಳು ಕಾರಣವಾಗಿದ್ದು, ಜನಾರ್ದನ ರೆಡ್ಡಿ ಪರ ಪೊಲೀಸರೆ ಇದ್ದರಾ? ಎಂಬ ಸಂಶಯಕ್ಕೂ ಕಾರಣವಾಗಿದೆ. ಲೀಕ್ ಆಗಿರುವ ವಿಡಿಯೋ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಅಲೋಕ್ ಕುಮಾರ್ ಪ್ರಶ್ನೆ ಮಾಡಿದ್ದು, ನ್ಯಾಯಾಲಯಕ್ಕೆ ನೀಡಬೇಕಾದ ವಿಡಿಯೋ ಮೊದಲೇ ಮಾಧ್ಯಮಗಳಿಗೆ ಹೇಗೆ ಲಭ್ಯವಾಗಿದೆ ಎಂದು ಪ್ರಶ್ನಿಸಿ ಗರಂ ಆಗಿದ್ದಾರೆ. ಅಲ್ಲದೇ ಈ ವಿಡಿಯೋ ಲೀಕ್ ಆಗಲು ತಮ್ಮ ಕಚೇರಿಯಲ್ಲೇ ಕೆಲ ಕಠಿಣ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಅಲೋಕ್ ಕುಮಾರ್ ಅವರು ವಿಡಿಯೋ ಲೀಕ್ ಆಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಯಾವ ಕ್ರಮಕೈಗೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
Advertisement
ಯಾವುದೇ ಪ್ರಕರಣದಲ್ಲಿ ಆರೋಪಿಯ ಹೇಳಿಕೆ ಪಡೆದ ಬಳಿಕ ಸ್ಥಳ ಮಹಜರು ಮಾಡುವುದು ಕಾನೂನು ಕ್ರಮವಾಗಿದೆ. ಇದರಂತೆ ಫರೀದ್ ಹೇಳಿಕೆ ಪಡೆದಿದ್ದ ಸಿಸಿಬಿ ಪೊಲೀಸರು ಅದರಂತೆ ಮಹಜರು ನಡೆಸಿದ್ದರು. ಈ ಪ್ರಕ್ರಿಯೆನ್ನು ಸಂಪೂರ್ಣವಾಗಿ ಚಿತ್ರೀಕರಣ ಮಾಡಲಾಗುತ್ತದೆ. ಮಹಜರು ವಿಡಿಯೋವನ್ನು ಪೊಲೀಸರು ಪ್ರಕರಣದ ಪ್ರಮುಖ ಸಾಕ್ಷಿಯಾಗಿ ನ್ಯಾಯಾಲಕ್ಕೆ ಸಲ್ಲಿಸಲಾಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv